Advertisement

ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ, ಮಾರಾಟ

11:33 AM Oct 12, 2018 | |

ಬೆಂಗಳೂರು: ರಾಜ್ಯದ ಹೆಮ್ಮೆಯ ಪಾರಂಪರಿಕ ಉತ್ಪನ್ನವಾದ ಮೈಸೂರ್‌ ಸಿಲ್ಕ್ ಸೀರೆಗಳ ತಯಾರಕ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿ. (ಕೆಎಸ್‌ಐಸಿ) ನಗರದ ಕಬ್ಬನ್‌ ಪಾರ್ಕ್‌ನಲ್ಲಿರುವ ಸಚಿವಾಲಯ ಕ್ಲಬ್‌ನಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ, ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.

Advertisement

ಅ.17ರವರೆಗೆ ನಡೆಯುವ ಮಾರಾಟ ಮೇಳಕ್ಕೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರರಾವ್‌ ಅವರು ಬುಧವಾರ ಚಾಲನೆ ನೀಡಿದರು. ಈ ಮೇಳದಲ್ಲಿ ಕನಿಷ್ಠ 13 ಸಾವಿರ ರೂ.ನಿಂದ ಒಂದು ಲಕ್ಷ ರೂ. ವರೆಗಿನ ರೇಷ್ಮೆ ಸೀರೆಗಳು, ಪಂಚೆಗಳು, ಶರ್ಟ್‌, ಶಲ್ಯ ಇತ್ಯಾದಿ ವಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗಿದ್ದಲ್ಲದೆ, ರೇಷ್ಮೆ ಸೀರೆಗಳ ಮೇಲೆ ಶೇ.25ರವರೆಗೆ ರಿಯಾಯಿತಿ ಪ್ರಕಟಿಸಿದೆ.

ವಿಂಟೇಜ್‌ ಸೀರೆ ಸ್ಪರ್ಧೆ: ಪ್ರತಿ ವರ್ಷದಂತೆ ವಿಂಟೇಜ್‌ ಮೈಸೂರು ಸಿಲ್ಕ್ ಸೀರೆಗಳ ಸ್ಪರ್ಧೆಯಲ್ಲಿ ಈ ಬಾರಿಯೂ ಸುಮಾರು 50 ವಿಂಟೇಜ್‌ ಸೀರೆಗಳು ಸ್ಪರ್ಧೆಗೆ ಬಂದಿದ್ದವು. ಅವುಗಳೆಲ್ಲವೂ 1977-78ಕ್ಕಿಂತಲೂ ಹಳೆಯದಾಗಿದ್ದು ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆಯಲ್ಲಿ ತಯಾರಾದ ಸೀರೆಗಳಾಗಿವೆ ಎಂದು ಆಯೋಜಕರು ತಿಳಿಸಿದರು.
 
ಇವುಗಳಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ಮಾಡಿರುವ ಮೈಕೋ ಲೇಔಟ್‌ನ ಶ್ರೀಮತಿ ಪದ್ಮಾವತಿ ಸುಬ್ಬಣ (1978ರಲ್ಲಿ ಖರೀದಿಸಿದ) ಹಾಗೂ ಚಂದ್ರಾ ಲೇಔಟ್‌ನ ಡಾ. ಬಿ.ಆರ್‌. ಶರ್ಮಿಳಾ (1964ರಲ್ಲಿ ಖರೀದಿಸಿದ) ಅವರಿಗೆ
ಪ್ರಥಮ ಬಹುಮಾನ 18 ಸಾವಿರ ರೂ. ಹಾಗೂ ಟ್ರೋಫೀ ನೀಡಿ ಗೌರವಿಸಲಾಯಿತು. ಇತರೆ 5 ವಿಂಟೇಜ್‌ ಸೀರೆಗಳಿಗೆ 5 ಸಾವಿರ ರೂ.ಗಳ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು. ಕೆಎಸ್‌ಐಸಿ ವ್ಯವಸ್ಥಾಪಕ ನಿರ್ದೇಶಕಿ ನೀಲಾ ಮಂಜುನಾಥ್‌, ಮಾರುಕಟ್ಟೆ ವ್ಯವಸ್ಥಾಪಕ ಎಸ್‌ ಭಾನುಪ್ರಕಾಶ್‌ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next