Advertisement
ಈ ಸಂದರ್ಭ ಹೆದ್ದಾರಿ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಲಾಯಿತು ಹಾಗೂ ಅವೈಜ್ಞಾನಿಕ, ಅಪೂರ್ಣ ಕಾಮಗಾರಿ ಬಗ್ಗೆ ಜಿಲ್ಲಾಧಿಧಿಕಾರಿಗಳಿಗೆ ವಿವರಣೆ ನೀಡಲಾಯಿತು. ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ತಿಳಿಸಲಾಯಿತು ಹಾಗೂ ಜಿಲ್ಲೆಯ ಮರಳು ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕೋರಲಾಯಿತು.ಟೋಲ್ ಸಮಸ್ಯೆಯ ಕುರಿತು ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ಈ ಸಂದರ್ಭ ನೀಡಿದರು.
ಪೊಲೀಸ್ ಪೇದೆಗೆ ತರಾಟೆ
ಫೆ.25ರಂದು ಸಂಜೆ ಟೋಲ್ ಕೇಂದ್ರದ ಬಳಿ ಆಗಮಿಸಿದ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು ಶುಲ್ಕ ವಿನಾಯಿತಿ ಮುಂದುವರಿಸುವಂತೆ ಮನವಿ ಮಾಡಿದರು ಹಾಗೂ ಹಿಂದಿನ ಜಿಲ್ಲಾಧಿಕಾರಿಗಳ ಹೇಳಿಕೆಯಂತೆ ಫೆ.26ರಿಂದ ಶುಲ್ಕ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆಯ ಪ್ರತಿಯನ್ನು ಹಂಚುತ್ತಿದ್ದ ಟೋಲ್ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಕೋಟ ಪೊಲೀಸ್ ಠಾಣೆಯ ಪೇದೆಯೋರ್ವರು ಆ ಕರಪತ್ರಗಳನ್ನು ಹಂಚುವ ಉದ್ದೇಶದಿಂದ ಇಟ್ಟುಕೊಂಡಿಲ್ಲ,ನೀವು ಸಮ್ಮನೆ ಸಮಸ್ಯೆ ಮಾಡಬೇಡಿ ಎಂದು ಟೋಲ್‌ನವರ ಪರ ಮಾತನಾಡಿದರು ಹಾಗೂ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಬೆದರಿಸಲು ಮುಂದಾದಗ ಮಾಧ್ಯಮ ಪ್ರತಿನಿಧಿಗಳು ಹಾಗೂ ಹೋರಾಟಗಾರರು ಆ ಪೇದೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.