Advertisement

ಬಹಿರ್ದೆಸೆ ಮುಕ್ತ ತಾಲೂಕು ಗುರಿ

02:34 PM Jul 07, 2017 | Team Udayavani |

ಹೊನ್ನಾಳಿ: ಆಗಸ್ಟ್‌ 15ರೊಳಗೆ ತಾಲೂಕನ್ನು ಬಯಲು ಶೌಚ ಮುಕ್ತವಾಗಿಸಲಾಗುವುದು ಎಂದು ಜಿಪಂ ಸಿಇಒ ಎಸ್‌. ಅಶ್ವತಿ ಹೇಳಿದರು.

Advertisement

ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ಬಹಿರ್ದೆಸೆ ಮುಕ್ತ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಆ.15ರೊಳಗೆ ಬಹಿರ್ದೆಸೆ ಮುಕ್ತ ತಾಲೂಕು ಗುರಿ ತಲುಪದಿದ್ದರೆ ಗ್ರಾಪಂನ ಸಂಬಂಧಪಟ್ಟ ಅಧಿಕಾರಿಗಳ ವೇತನ ಬಡ್ತಿಯನ್ನು ಕಡಿತಗೊಳಿಸಲಾಗುವುದು. ಅಲ್ಲದೇ ಪಿಡಿಒಗಳನ್ನು ವರ್ಗಾವಣೆಗೊಳಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದರು.

ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಎಲ್ಲಾ ಗ್ರಾಮಗಳ ಪ್ರತಿಯೊಂದು ಮನೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡುವ ಮೂಲಕ ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಮಾಡಬೇಕು ಎಂಬ ಉದ್ದೇಶ ಹೊಂದಿರುವುದರಿಂದ ಎಲ್ಲ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸೂಚಿಸಿದರು. ತಾಲೂಕಿನ 4 ಗ್ರಾಪಂಗಳನ್ನು ಬಯಲು ಶೌಚ ಮುಕ್ತ
ಗ್ರಾಪಂಗಳನ್ನಾಗಿ ಘೋಷಿಸಲಾಗಿದೆ. ಈ ಸಾಧನೆ ಮಾಡಿದ ತಾಲೂಕಿನ ಬೆನಕನಹಳ್ಳಿ, ಯಕ್ಕನಹಳ್ಳಿ, ಕುಂದೂರು, ರಾಂಪುರ ಗ್ರಾಪಂಗಳ ಜನಪ್ರತಿನಿಧಿಗಳು-ಸಿಬ್ಬಂದಿಯನ್ನು ಅಭಿನಂದಿಸಿದರು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ 2 ರಿಂದ 3 ಗ್ರಾಮಗಳು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿವೆ ಎಂಬ ಮಾಹಿತಿಯಿದೆ. ಅದೇ ರೀತಿಯಲ್ಲಿ ತಾಲೂಕಿನ 47 ಗ್ರಾಪಂಗಳ ಎಲ್ಲಾ ಗ್ರಾಮಗಳೂ ಬಹಿರ್ದೆಸೆ ಮುಕ್ತ ಗ್ರಾಮಗಳಾಗಬೇಕು ಎಂದು ಹೇಳಿದರು.

ತಾಪಂ ಇಒ ಡಾ| ಶಿವಪ್ಪ ಹುಲಿಕೇರಿ ಮಾತನಾಡಿ, ಶೌಚಾಲಯ, ವಸತಿ ಯೋಜನೆಗಳ ಫಲಾನುಭವಿಗಳಿಗೆ ಮರಳಿನ ಸಮಸ್ಯೆ ಇಲ್ಲ. ಎಲ್ಲರೂ ಶೌಚಾಲಯಗಳನ್ನು ನಿರ್ಮಿಸಿಕೊಂಡು ಬಳಸುವ ಮೂಲಕ ಬಹಿರ್ದೆಸೆ ಮುಕ್ತ ತಾಲೂಕು ನಿರ್ಮಾಣಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು. ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಜಿಲ್ಲಾ ಯೋಜನಾಧಿಕಾರಿ ಡಾ| ರಂಗಸ್ವಾಮಿ, ಸಹಾಯಕ
ಯೋಜನಾಧಿಕಾರಿ ಶಶಿಧರ್‌, ಪಿಡಿಒಗಳ ಸಂಘದ ಅಧ್ಯಕ್ಷ ಸಂಗಮೇಶ್‌, ತಾಲೂಕಿನ ಪಿಡಿಒ, ಕಾರ್ಯದರ್ಶಿ, ಕಂಪ್ಯೂಟರ್‌ ಆಪರೇಟರ್‌ಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next