Advertisement

ಅನಾಲಿಟಿಕಾ ಜತೆ ರಾಹುಲ್‌ಮಾತು

06:00 AM Apr 17, 2018 | Team Udayavani |

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಫೇಸ್‌ ಬುಕ್‌ ದತ್ತಾಂಶವನ್ನು ಅಕ್ರಮವಾಗಿ ಬಳಸಿಕೊಂಡ ಆರೋಪ ಹೊತ್ತಿರುವ ಚುನಾವಣಾ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್‌ ಅನಾಲಿಟಿಕಾ ಜತೆ ಖುದ್ದು ಕಾಂಗ್ರೆಸ್‌ ಉಪಾಧ್ಯಕ್ಷ (ಆಗಿನ) ರಾಹುಲ್‌ ಗಾಂಧಿ ಅವರೇ ಮಾತುಕತೆ ನಡೆಸಿದ್ದರು ಎಂಬುದು ಈಗ ಬಹಿರಂಗವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಕೆಲಸ ಮಾಡಲು ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಸ್ತಾವವಿಟ್ಟಿತ್ತು. ಫೇಸ್‌ಬುಕ್‌ ಪೋಸ್ಟ್‌ ಮತ್ತು ಟ್ವೀಟ್‌ಗಳ ದತ್ತಾಂಶ ಪಡೆಯು ವುದು ಮತ್ತು ಮತದಾರರ ಮೇಲೆ ಪ್ರಭಾವ ಬೀರುವುದು ಸಹಿತ ಹಲವು ಕ್ಯಾಂಪೇನ್‌ ಮಾಡುವುದಾಗಿ ಹಾಗೂ ಕ್ಯಾಂಪೇನ್‌ಗೆ 2.5 ಕೋಟಿ ರೂ. ವೆಚ್ಚ ತಗಲುವುದಾಗಿ ಕಂಪೆನಿ ಹೇಳಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.

Advertisement

ರಾಹುಲ್‌ – ನಿಕ್ಸ್‌ ಭೇಟಿ: 
ಕಳೆದ ಆಗಸ್ಟ್‌ನಲ್ಲಿ ಕೇಂಬ್ರಿಜ್‌ ಅನಾಲಿಟಿಕಾದ ಆಗಿನ ಸಿಇಒ ಅಲೆಕ್ಸಾಂಡರ್‌ ನಿಕ್ಸ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಸಚಿವ ರಾದ ಜೈರಾಮ್‌ ರಮೇಶ್‌ ಹಾಗೂ ಪಿ. ಚಿದಂಬರಂ ಭೇಟಿಯಾಗಿದ್ದಾಗ ಪ್ರಸ್ತಾವ ಮುಂದಿಡಲಾಗಿತ್ತು. ಒಟ್ಟು 50 ಪುಟಗಳನ್ನು ಹೊಂದಿದ್ದು, ಡೇಟಾ ಡ್ರಿವನ್‌ ಕ್ಯಾಂಪೇನ್‌, ದಿ ಪಾಥ್‌ ಟು 2018 ಲೋಕಸಭಾ ಎಂಬ ಶೀರ್ಷಿಕೆ ಹೊಂದಿತ್ತು.

ಬಲಪಂಥೀಯ ಅನಾಲಿಟಿಕಾ?
ಮೂಲಗಳ ಪ್ರಕಾರ, ಕೇಂಬ್ರಿಜ್‌ ಬಲ ಪಂಥೀಯ ಧೋರಣೆ ಹೊಂದಿದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಒಪ್ಪಲಿಲ್ಲ ಎನ್ನಲಾಗಿದೆ. ಕಾಂಗ್ರೆಸ್‌ ಸಂಘಟನೆಯ ಬೇರು ಮಟ್ಟದಲ್ಲೇ ಕೇಂಬ್ರಿಜ್‌ ಕೆಲಸ ಮಾಡಲಿರುವುದರಿಂದ, ಸಂಘಟನೆಯ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣವೂ ಇತ್ತು ಎನ್ನಲಾಗಿದೆ.

ಒಪ್ಪಂದ ಮಾಡಿಕೊಂಡಿಲ್ಲ 
ಅನಾಲಿಟಿಕಾ ಜತೆ ಕಾಂಗ್ರೆಸ್‌ ಒಪ್ಪಂದ ಮಾಡಿಕೊಂಡಿಲ್ಲ. ಆದರೆ ಈ ರೀತಿಯ ಪ್ರಸ್ತಾವ ಬರುತ್ತಲೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ಪಕ್ಷ ಅವರ ಜತೆ ಕೆಲಸ ಮಾಡಿದೆ ಎಂದರ್ಥವಲ್ಲ ಎಂದು ದತ್ತಾಂಶ ವಿಭಾಗದ ಮುಖ್ಯಸ್ಥ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next