ಕಾಸರಗೋಡು: ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನ ಬದ್ಧವಾಗಿ ನೀಡಲಾದ ಎಲ್ಲ ಸವಲತ್ತುಗಳನ್ನು ನೀಡುವ ಜತೆಗೆ ಎಲ್ಲ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರಕಾರದ್ದು. ಕಾಸರಗೋಡು ಭಾಷಾ ಅಲ್ಪಸಂಖ್ಯಾಕ ಪ್ರದೇಶವೆಂದು ಸಂವಿಧಾನದಲ್ಲಿ ಘೋಷಿಸಿರುವ ಹಿನ್ನೆಲೆಯಲ್ಲಿ ಕಾಸರ ಗೋಡಿನಲ್ಲಿ ಆಡಳಿತ ಭಾಷೆ ಕನ್ನಡ ವಾಗಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಭಟ್ ಅವರು ಸರಕಾರವನ್ನು ಆಗ್ರಹಿಸಿದರು.
Advertisement
ರಾಜ್ಯ ಸರಕಾರ ಮಲಯಾಳ ಅಧ್ಯಾದೇಶ ಜಾರಿಗೊಳಿಸುವ ಮೂಲಕ ಕಾಸರಗೋಡಿನ ಕನ್ನಡ ಶಾಲೆಯಲ್ಲಿ ಮಲಯಾಳ ಕಡ್ಡಾಯಗೊಳಿಸಿದ ಕ್ರಮವನ್ನು ಖಂಡಿಸಿ ಹಾಗೂ ಪ್ರತಿಭಟಿಸಿ ಕಾಸರ ಗೋಡು ಜಿ.ಯು.ಪಿ.ಎಸ್. ಶಾಲೆ ಯಲ್ಲಿ ಎಸ್.ಎಸ್.ಎ. ವತಿಯಿಂದ ಆಯೋಜಿಸಿರುವ ರಜಾ ಕಾಲದ ತರಬೇತಿಯನ್ನು ಕನ್ನಡ ಅಧ್ಯಾಪಕರು ಬಹಿಷ್ಕರಿಸಿ ಅವರು ಮಾತನಾಡಿದರು.
Related Articles
ಭಾಷಾ ಅಲ್ಪಸಂಖ್ಯಾಕ ಪ್ರದೇಶದಲ್ಲಿ ಕನ್ನಡವನ್ನು ದಮನಿಸುವ ಕೆಲಸ ನಡೆಯು ತ್ತಿದೆ. ಅದರಂತೆ ಅಧ್ಯಾದೇಶ ಹೊರಡಿಸಿ ನಮ್ಮ ಮಾತೃ ಭಾಷೆಯ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಸರಕಾರದ ಕ್ರಮ ಖಂಡನೀಯ ಹಾಗೂ ಪ್ರತಿಭಟಿಸ ಬೇಕಾಗಿದೆ. ಕನ್ನಡಿಗರ ನಾಳಿನ ಭವಿಷ್ಯಕ್ಕಾಗಿ, ಕನ್ನಡ ಭಾಷೆಯ ಉಳಿವಿಗಾಗಿ ನಮ್ಮ ಹೋರಾಟ ನಡೆಯಬೇಕು. ಈ ಮೂಲಕ ಸರಕಾರದ ಗಮನ ಸೆಳೆಯಬೇಕು. ನಾವು ನಮ್ಮ ಭಾಷೆಗೆ ಗೌರವ ಕೊಡುವುದರೊಂದಿಗೆ ಇನ್ನೊಂದು ಭಾಷೆಯನ್ನು ಗೌರವಿಸುತ್ತೇವೆ. ಆದರೆ ಇನ್ನೊಂದು ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದು ಸರಿಯಲ್ಲ ಎಂದು ಅಧ್ಯಾಪಕರು ಅಭಿಪ್ರಾಯಪಟ್ಟರು.
Advertisement
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಕನ್ನಡಿಗ ಪ್ರತಿನಿಧಿಯಿಲ್ಲ. ಈ ಕಾರಣದಿಂದ ಕಾಸರಗೋಡಿನ ಕನ್ನಡಿಗರ ಸಮಸ್ಯೆ ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಭಾಷಾ ಮಸೂದೆ ಕೇವಲ ಕನ್ನಡ ಮಾಧ್ಯಮ ಅಧ್ಯಾಪಕರ ಸಮಸ್ಯೆ ಮಾತ್ರವಾಗಿರದೆ, ಸಮಸ್ತ ಕನ್ನಡಿಗರ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಎಚ್ಚೆತ್ತು ಹೋರಾಟ ಕ್ಕಿಳಿಯುವ ಅನಿವಾರ್ಯ ಇಂದು ಎದುರಾಗಿದೆ. ಕನ್ನಡಿಗರೆಲ್ಲ ಒಗ್ಗಟ್ಟಾಗಿ ಎದ್ದು ನಿಂತು ಉಗ್ರ ಸ್ವರೂಪದ ಪ್ರತಿಭಟನೆಗೆ ಕನ್ನಡಿಗರು ಮುಂದಾಗಬೇಕಾಗಿದೆ ಎಂಬ ಅಭಿಪ್ರಾಯ ಕೇಳಿ ಬಂತು.