Advertisement
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತ ರವೀಂದ್ರ ಮಾರ್ಗದರ್ಶನದಲ್ಲಿ ಅಬಕಾರಿ ಉಪಅಧೀಕ್ಷಕ ಅವರ ನೇತೃತ್ವದಲ್ಲಿ ಬಾರ್ ಮತ್ತು ರೆಸ್ಟೋರಂಟ್‌ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅಕ್ರಮ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ. ದೂರುಗಳು ಬಂದ ಕೂಡಲೇ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯುತ್ತಿದ್ದಾರೆ.
Related Articles
Advertisement
ದೊಡ್ಡಬಳ್ಳಾಪುರ ಟೌನ್‌ನಲ್ಲಿ 16.830 ಲೀ. ಅಕ್ರಮ ಮಧ್ಯ ಜಪ್ತಿ ಮಾಡಿಕೊಂಡು, ಒಂದು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮುನೇಗೌಡ ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೇವನಹಳ್ಳಿ ತಾಲೂಕಿನ ಮಿಸ್ಟ್ ಫ್ಯಾಕ್ಟರಿ ರೆಸ್ಟೋರಂಟ್ ಮೇಲೆ ದಾಳಿ ನಡೆಸಿ 3.425 ಲೀ. ಅಕ್ರಮ ಮದ್ಯ ಹಾಗೂ ಬಿಯರ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಸೂರಜ್‌ನನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಹೊಸಕೋಟೆ ತಾಲೂಕಿನ ಕನರಸನಹಳ್ಳಿ ರಸ್ತೆಯಲ್ಲಿ ಗಸ್ತು ಸಮಯದಲ್ಲಿ 5.220 ಅಕ್ರಮ ಮದ್ಯ ಜಪ್ತಿ ಮಾಡಿ, ಟಿವಿಎಸ್ ನ್ಪೋಟ್ಸ್ ವಾಹನವನ್ನು ವಶಕ್ಕೆ ಪಡೆದು, ಆರೋಪಿ ಗಂಗಪ್ಪನನ್ನು ಬಂಧಿಸಲಾಗಿದೆ.
ಹೊಸಕೋಟೆ ತಾಲೂಕಿನ ಪಿಳ್ಳಗುಂಪು ಗ್ರಾಮದ ರತ್ನಮ್ಮ ಎಂಬುವರ ಮನೆಯಲ್ಲಿ ಅಬಕಾರಿ ಆಯುಕ್ತ ರವೀಂದ್ರ ಮಾರ್ಗದರ್ಶನದಲ್ಲಿ ಉಪಅಧೀಕ್ಷಕ ಕೆ.ಎಂ.ತಮ್ಮಣ್ಣ ನೇತೃತ್ವದಲ್ಲಿ ದಾಳಿ ನಡೆಸಿ 185 ಲೀ. ಮದ್ಯ ಹಾಗೂ 39 ಲೀ. ಬಿಯರ್ ವಶಕ್ಕೆ ಪಡೆದು, ಆರೋಪಿ ರತ್ನಮ್ಮ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.