Advertisement
ಚಿತ್ರದುರ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಹಾಸ್ಟೆಲ್‌ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಕೆ ಮಾಡಿಕೊಂಡಿರುವುದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಈ ಕಾರಣಕ್ಕೆ ಅವರ ಊರುಗಳಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅನುಕೂಲ ಆಗುವಂತೆ ಹಾಲ್‌ಟಿಕೇಟ್ ನೀಡುತ್ತಿದ್ದೇವೆ ಎಂದರು.
Related Articles
ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಅವರಿರುವ ಊರುಗಳಲ್ಲಿರುವ ಕೇಂದ್ರಗಳಲ್ಲೇ ಇಂಗ್ಲೀಶ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ.
Advertisement
ಕಾಸರಗೋಡಿನಲ್ಲಿ ಸುಮಾರು 1200 ಮಕ್ಕಳು ಪಿಯುಸಿ ಪರೀಕ್ಷೆ ಬರೆಯುವವರಿದ್ದು, ಅಲ್ಲಿಯೇ ಪ್ರತ್ಯೇಕ ಕೇಂದ್ರ ತೆರೆದು ಪರೀಕ್ಷೆ ಬರೆಸಲು ತೀರ್ಮಾನಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆನ್‌ಲೈನ್ ತರಗತಿಗೆ 6 ವರ್ಷ ದಾಟಿದ್ದರೆ ಸೂಕ್ತಶೈಕ್ಷಣಿಕ ವರ್ಷ ಯಾವಾಗ ಆರಂಭಿಸಬೇಕು, ತರಗತಿ ಹೇಗೆ ನಡೆಸಬೇಕು, ದಿನಬಿಟ್ಟು ದಿನ ತರಗತಿಯಾ ಅಥವಾ ಶಿಫ್ಟ್ ಒಳ್ಳೆಯದಾ, ಬೋಧನಾ ರೀತಿ ಹೇಗಿರಬೇಕು ಎಂಬಿತ್ಯಾದಿ ಹಲವು ವಿಷಯಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಈ ನಡುವೆ ಆನ್‌ಲೈನ್ ತರಗತಿ ಬಗ್ಗೆ ಈಗ ಹೆಚ್ಚು ಕೇಳುತ್ತಿದ್ದೇವೆ. ಯಾವ ಹಂತದ ಮಕ್ಕಳಿಗೆ ಆನ್‌ಲೈನ್ ಸೂಕ್ತ ಎನ್ನುವ ಬಗ್ಗೆ ಅಧ್ಯಯನ ವರದಿ ನೀಡುವಂತೆ ನಿಮ್ಹಾನ್ಸ್ ಸಂಸ್ಥೆಗೆ ಮನವಿ ಮಾಡಿದ್ದೆವು. ಅವರ ಅಭಿಪ್ರಾಯದಲ್ಲಿ 6 ವರ್ಷದವರೆಗೆ ಆನ್‌ಲೈನ್ ಪಾಠ ಸೂಕ್ತವಲ್ಲ ಎಂಬ ವಿವರಣೆ ನೀಡಿದ್ದಾರೆ ಎಂದು ತಿಳಿಸಿದರು.