ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಮೂವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಗೆ ಹಾಜರಾಗಿದ್ದ ಡಿ. ಶ್ರೀನಿವಾಸ್, ಸುಭಾಷ ನಾಯ್ಕ, ತಿಪ್ಪೇಶ ನಾಯ್ಕ ಆಧುನಿಕ ತಂತ್ರಜ್ಞಾನ ಬಳಸಿ, ನಕಲು ಮಾಡುತ್ತಿದ್ದ ಆರೋಪದಡಿ ಬಂಧಿತರಾಗಿದ್ದು, ಇವರಿಗೆ ಸಹಾಯ ಮಾಡಿದ ಜಿ.ಎಂ.ಪ್ರದೀಪ್, ಕೃಷ್ಣನಾಯ್ಕ ತಲೆಮರೆಸಿಕೊಂಡಿದ್ದಾರೆ.
Advertisement
“ಮುನ್ನಾಭಾಯ್ ಎಂಬಿಬಿಎಸ್’ ಚಿತ್ರದಲ್ಲಿ ಸಂಜಯ್ ದತ್ ಕಿವಿಯಲ್ಲಿ ಮೊಬೈಲ್ ಇಟ್ಟುಕೊಂಡು ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ಓದಿ ಆಯಾ ವಿಷಯಕ್ಕೆ ಸಂಬಂಧಿಸಿದ ಶಿಕ್ಷಕರಿಂದ ಉತ್ತರ ಕೇಳಿಸಿಕೊಂಡು ಬರೆಯುತ್ತಿದ್ದ. ಆದರೆ, ಇಲ್ಲಿ ಆರೋಪಿಗಳು ಬನಿಯನ್‌ನಲ್ಲಿ ಬ್ಯಾಟರಿ ಚಾಲಿತ ಸಿಮ್ ಇಟ್ಟುಕೊಂಡಿದ್ದರು. ಅದಕ್ಕೆ ಹೊಂದಿಕೊಂಡಂತೆ ಮೈಕೊಂದನ್ನು ಅಂಗಿಯ ತೋಳಿನ ಒಳಭಾಗದಲ್ಲಿ ಜೋಡಿಸಿಕೊಂಡಿದ್ದರು. ಇನ್ನು ಕಿವಿಯಲ್ಲಿ ವಾಚ್‌ನ ಶೆಲ್‌ಗೂ ಸಣ್ಣದಾದ ಗಾತ್ರದ ಸ್ಪೀಕರ್ ಇಟ್ಟುಕೊಂಡಿದ್ದರು. ಇದರ ಮಾಸ್ಟರ್ ಮೈಂಡ್ ಎನ್ನಲಾಗಿರುವ ಕೃಷ್ಣ ನಾಯ್ಕ, ಎಂ.ಜಿ. ಪ್ರದೀಪ್ ಎಂಬುವರು ನಗರದ ದರ್ಶನ್ ಲಾಡ್ಜ್ನಲ್ಲಿ ರೂಂ ಮಾಡಿಕೊಂಡು ಅಲ್ಲಿಂದ ಈ ಮೂವರಿಗೆ ಸಹಾಯ ಮಾಡುತ್ತಿದ್ದರು. ಈ ಮೂವರ ಪೈಕಿ ಶ್ರೀನಿವಾಸ, ಸುಭಾಷ್ ನೂತನ ಕಾಲೇಜಿನಲ್ಲಿನ ಪರೀಕ್ಷೆ ಬರೆಯುತ್ತಿದ್ದರೆ, ತಿಪ್ಪೇಶ ನಾಯ್ಕ ಮಿಲ್ಲತ್ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ. ಈ ಮೂವರು ಪ್ರದೀಪ್‌ಗೆ ಪ್ರಶ್ನೆಪತ್ರಿಕೆಯ ಬ್ಯಾಚ್ ಸಂಖ್ಯೆ ಮಾತ್ರ ಹೇಳುತ್ತಿದ್ದರು.
ಕಾಲ್ಕಿತ್ತಿದ್ದಾರೆ. ಪ್ರಶ್ನೆಪತ್ರಿಕೆ ಲೀಕ್ ಶಂಕೆ
ನಕಲು ಮಾಡಿ ಸಿಕ್ಕಿ ಹಾಕಿಕೊಂಡಿರುವ ಅಭ್ಯರ್ಥಿಗಳು ಹೇಳಿಕೆ ಗಮನಿಸಿದರೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಸಂಶಯ ಬರುತ್ತದೆ. ಅಭ್ಯರ್ಥಿಗಳು ಹೇಳುವಂತೆ ಕೇವಲ ಶ್ರೇಣಿ ಹೇಳಿದರೆ ಸಾಕು ಆರೋಪಿಗಳು ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಅರಿತು, ಉತ್ತರ ಹೇಳುತ್ತಿದ್ದರು. ಅಂದರೆ ಪ್ರಶ್ನೆಪತ್ರಿಕೆ ಲೀಕ್ ಆಗಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ.