ರಾಮನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕ್ಷೇಂದ್ರಗಳಾಗುವ ಜತೆಗೆ ಸುರಕ್ಷತೆ ಕೇಂದ್ರಗಳೂ ಆಗಿವೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದರು. ಬುಧವಾರ ಜಿಲ್ಲೆಯ ವಿವಿಧ ಪರೀಕ್ಷೆ ಕೇಂದ್ರಗಳಿಗೆ ಭೇಟಿಕೊಟ್ಟು ಪರಿಶೀಲಿಸಿ, ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಗೆ ತಮ್ಮ ಭೇಟಿ ಬಗ್ಗೆ ಮಾತನಾಡಿದ ಅವರು ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.
ಮುಂಜಾಗ್ರತೆ ಕ್ರಮಗಳು ಯಾವ ಮಟ್ಟದಲ್ಲಿ ಪಾಲನೆಯಾ ಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೇಗಿದೆ ಎಂಬುದರ ಬಗ್ಗೆ ಖುದ್ದ ಅರಿವು ಮೂಡಿಸಿಕೊಳ್ಳಲು ಭೇಟಿ ನೀಡಿರುವುದಾಗಿ ಸಚಿವರು ತಿಳಿಸಿದರು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ತಾವು ಖುದ್ದು ಭೇಟಿ ಮಾಡಿರುವುದಾಗಿ, ವಿದ್ಯಾರ್ಥಿಗಳು ಈವರೆಗೆ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಿಗೆ ಈಗಾಗಲೇ ಪರೀಕ್ಷೆ ಬರೆದಿದ್ದಾರೆ. ಅವರು ಲವಲವಿಕೆಯಿಂದ ಪರೀಕ್ಷೆಗೆ ತೆರಳಿದ್ದನ್ನು ತಾವು ನೋಡಿರುವುದಾಗಿ ತಿಳಿಸಿದರು.
ರಾಮನಗರ ಜಿಲ್ಲೆ ಯಲ್ಲಿ ಮಕ್ಕಳ ಹಾಜರಾತಿ ಚೆನ್ನಾಗಿದೆ ಎಂದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಪರೀಕ್ಷೆ ಅರಂಭಕ್ಕೆ ಮುನ್ನ ಪರೀಕ್ಷೆ ಬಗ್ಗೆ ಊಹಾಪೋಹದ ಮಾತುಗಳು ಕೇಳಿದವು. ಈಗ ಮೌಲ್ಯಮಾಪನದ ಬಗ್ಗೆ ಕೇಳಿ ಬರುತ್ತಿದೆ. ಮಕ್ಕಳು ಪರಿಶ್ರಮ ಪಟ್ಟು ಓದಿದ್ದಾರೆ. ಛಲದಿಂದ ಪರೀಕ್ಷೆ ಬರೆ ಯುತ್ತಿದ್ದಾರೆ. ಅವರು ಅಂಕ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ಮಕ್ಕಳ ಪರಿಶ್ರಮದ ಬಗ್ಗೆ ತಿರಸ್ಕಾರ ಸಲ್ಲದು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಿನಾಂಕ ನಿರ್ಧರಿಸುವ ಮುನ್ನ ತಾವು ವಿರೋಧ ಪಕ್ಷಗಳ ಮುಖಂಡ ಸಿದ್ದರಾಮಯ್ಯ, ಎಚ್ .ಡಿ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಮಾಜಿ ಶಿಕ್ಷಣ ಸಚಿವ ರ ಬಳಿ ಚರ್ಚಿಸಿದ್ದಾಗಿ, ಎಚ್.ಡಿ.ಕುಮಾರಸ್ವಾಮಿ ಮತ್ತು ತನ್ವಿರ್‌ಸೇಠ್ ಅವರು ಪರೀಕ್ಷೆ ಮುಂದಕ್ಕೆ ಹಾಕಿ ಎಂದು ಅಭಿ ಪ್ರಾಯ ವ್ಯಕ್ತಪಡಿಸಿದರು. ಅವರ ಅಭಿಪ್ರಾಯ ತಾವು ಗೌರವಿಸುವುದಾಗಿ, ಅವರ ಕಾಳಜಿ ಅರ್ಥ ಮಾಡಿಕೊಂಡು ಪರೀಕ್ಷೆಗೆ ಸಿದ್ದತೆ ಇನ್ನಷ್ಟು ಎಚ್ಚರಿಕೆ ಮತ್ತು ಹೆಚ್ಚಿನ ರೀತಿ ಕ್ರಮವಹಿಸಿರುವು ದಾಗಿ ತಿಳಿಸಿದರು. ಜಿಲ್ಲೆಯ ಕನಕಪುರ, ಚನ್ನಪಟ್ಟಣ ಮತ್ತು ರಾಮನಗರ ತಾಲೂಕಿನ ಕೆಲವು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಸಚಿವರ ಪ್ರವಾಸದ ವೇಳೆ ಜಿಪಂ ಸಿಇಒ ಇಕ್ರಂ, ಡಿಡಿಪಿಐ ಸೋಮಶೇಖರಯ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪೂರಕ ಪರೀಕ್ಷೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಮುಂದಾಗಿದ್ದ, ಕೆಲವು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ಅವರು ಆತಂಕ ಪಡುವ ಅಗತ್ಯವಿಲ್ಲ. ಆಗಸ್ಟ್ ತಿಂಗಳಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಅವರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಅವರನ್ನು ಫ್ರೆಶ್ ಕ್ಯಾಂಡಿಡೇಟ್ ಅಂತಲೇ ಪರಿಗಣಿಸಲಾ ಗುತ್ತದೆ. ವಿದ್ಯಾರ್ಥಿಗಳು ಆತಂಕ ಪಡುವುದು ಬೇಡ ಎಂದು ಭರವಸೆ ನೀಡಿದರು.