Advertisement

6 ಅಡಿ ಅಂತರವಿರುವ 1 ಡೆಸ್ಕ್ನನಲ್ಲಿ ಓರ್ವ ವಿದ್ಯಾರ್ಥಿಗೆ ಮಾತ್ರ ಅವಕಾಶ

08:08 PM Jul 19, 2021 | Team Udayavani |

ಚಾಮರಾಜನಗರ: ಜಿಲ್ಲೆಯ 85 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ತಿಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿಈ ಬಾರಿ 6,440 ಬಾಲಕರು , 5,749 ಬಾಲಕಿಯರು ಸೇರಿದಂತೆ 12,189ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 115 ದಿವ್ಯಾಂಗ ವಿದ್ಯಾರ್ಥಿಗಳು ಇದ್ದಾರೆ..

Advertisement

ಚಾಮರಾಜನಗರ ತಾಲೂಕಿನಲ್ಲಿ27, ಗುಂಡ್ಲುಪೇಟೆ21, ಹನೂರು16,ಕೊಳ್ಳೇಗಾಲ14, ಯಳಂದೂರು ತಾಲೂಕಿನ 7 ಪರೀûಾ ಕೇಂದ್ರಗಳು ಇವೆ. ಪ್ರತಿ ತಾಲೂಕಿನಲ್ಲಿ 2ಪರೀಕ್ಷಾ ಕೇಂದ್ರಗಳಂತೆ ಒಟ್ಟು10ಕಾಯ್ದಿರಿಸಿದ ಪರೀûಾಕೇಂದ್ರಗಳು ಸಹ ಇವೆ.ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರತಿಡೆಸ್ಕ್ಗೆ ಒಬ್ಬ ವಿದ್ಯಾರ್ಥಿಯಂತೆ ಅಭ್ಯರ್ಥಿಗಳ ನಡುವೆ 6 ಅಡಿ ಸಾಮಾಜಿಕ ಅಂತರಕಾಪಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ 2 ವಿಶೇಷ ಕೊಠಡಿಗಳು ಇರಲಿವೆ.

ಪ್ರತಿಕೇಂದ್ರದಲ್ಲಿ ಕೆಮ್ಮು, ಜ್ವರ, ನೆಗಡಿ ಲಕ್ಷಣವಿರುವ ಮಕ್ಕಳು ಪರೀಕ್ಷೆ ಬರೆಯಲು ವಿಶೇಷಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಾಸಿಟಿವ್‌ ವಿದ್ಯಾರ್ಥಿ ಇಚ್ಛೆಪಟ್ಟಲ್ಲಿ ಪೋಷಕರಒಪ್ಪಿಗೆ ಹಾಗೂ ವೈದ್ಯಕೀಯ ಸಲಹೆ ಮೇರೆಗೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಪರೀಕ್ಷೆಬರೆಯಲು ಅವಕಾಶಕಲ್ಪಿಸಲಾಗುವುದು ಎಂದರು.

ಸಕಾಲದಲ್ಲಿ ಪರೀಕ್ಷೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯಿಂದ ಬಸ್‌ಸೌಕರ್ಯ ಕಲ್ಪಿಸಲಾಗಿದೆ. ಯಾವುದೇ ವಿದ್ಯಾರ್ಥಿ ವಾಹನ ಸೌಲಭ್ಯದ ಕೊರತೆಯ ಕಾರಣದಿಂದ ಪರೀಕ್ಷೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next