ನವದೆಹಲಿ: ಕೇಂದ್ರ ಮಾಜಿ ಸಚಿವ ಪಿಆರ್ ಕುಮಾರಮಂಗಲಂ ಅವರ ಪತ್ನಿಯನ್ನು ದೆಹಲಿಯ ನಿವಾಸದಲ್ಲಿ ಕಳೆದ ರಾತ್ರಿ (ಜುಲೈ 06) ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಸಂಪುಟ ಸರ್ಜರಿ : ರಮೇಶ ಪೊಕ್ರಿಯಾಲ್, ಸದಾನಂದ ಗೌಡ ಸೇರಿ 12 ಮಂದಿ ರಾಜಿನಾಮೆ..!
ದಕ್ಷಿಣ ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿರುವ ನಿವಾಸದಲ್ಲಿ ಕಿಟ್ಟೈ ಕುಮಾರಮಂಗಲಂ (67ವರ್ಷ) ಅವರ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಕುಮಾರಮಂಗಲಂ ಪತ್ನಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವುದಾಗಿ ವಿವರಿಸಿದೆ.
ಮಂಗಳವಾರ ರಾತ್ರಿ 9ಗಂಟೆ ಸುಮಾರಿಗೆ ಕಿಟ್ಟೈ ಕುಮಾರಮಂಗಲಂ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ. ಮನೆಯ ಧೋಬಿ (ಬಟ್ಟೆ ತೊಳೆಯುವ ವ್ಯಕ್ತಿ), ಇಬ್ಬರು ವ್ಯಕ್ತಿಗಳೊಂದಿಗೆ ದರೋಡೆ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಕೆಯನ್ನು ಮನೆಯ ಕೋಣೆಯೊಂದರಲ್ಲಿ ಒತ್ತೆಯಾಳನ್ನಾಗಿ ಇರಿಸಿ ನಂತರ ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ಸಹಾಯ ಮಾಡಿದ್ದ ಇಬ್ಬರು ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಕಿಟ್ಟೈ ಕುಮಾರಮಂಗಲಂ ಅವರು ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಪತಿ ಕುಮಾರಮಂಗಲಂ ಅವರು 1984ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ಕೇಂದ್ರ ಸಚಿವರಾಗಿದ್ದರು.