Advertisement

ಮಾಜಿ ಯೋಧರಿಗೂ ಆಧಾರ್‌ ಕಡ್ಡಾಯ

02:06 AM Apr 01, 2017 | Karthik A |

ಹೊಸದಿಲ್ಲಿ: ಸರಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್‌ ಕಡ್ಡಾಯ ಅಲ್ಲವೆಂದು ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಆದರೆ ಮಾಜಿ ಸೈನಿಕರು ನಿವೃತ್ತಿ ವೇತನ ಪಡೆಯಲು ಆಧಾರ್‌ ಸಂಖ್ಯೆ ಹೊಂದಿರಬೇಕಾದದ್ದು ಕಡ್ಡಾಯ ಎಂದು ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ. ಅದಕ್ಕೆ ಸಂಬಂಧಿಸಿದಂತೆ ಮಾ.3ರಂದೇ ಅಧಿಸೂಚನೆ ಹೊರಡಿಸಲಾಗಿತ್ತು ಎಂದು ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಷ್‌ ಭಾಮ್ರೆ ಈ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಆಧಾರ್‌ ಇಲ್ಲದೇ ಇದ್ದರೆ ಜೂ.30ರ ಒಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next