ನವದೆಹಲಿ: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಹಿರಿಯ ಸಂಸದ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (89ವರ್ಷ) ಅವರು ಸೋಮವಾರ (ಜುಲೈ 18) ಲೋಕಸಭೆಯೊಳಗೆ ಗಾಲಿ ಕುರ್ಚಿಯಲ್ಲಿ ಆಗಮಿಸಿ ಮತ ಚಲಾಯಿಸಿದ್ದಾರೆ.
ಇದನ್ನೂ ಓದಿ:ವಿದೇಶಿಗರಿಂದ ಸಂಚಿನ ಮೇಘಸ್ಪೋಟ!; ಕೆಸಿಆರ್ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್ ಲೇವಡಿ
ಡಾ.ಮನಮೋಹನ್ ಸಿಂಗ್ ವೀಲ್ ಚೇರ್ ನಲ್ಲಿ ಕುಳಿತು ಲೋಕಸಭೆಯೊಳಗೆ ಬರುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೋಕಸಭೆಯ ಎರಡನೇ ಅಂತಸ್ತಿನ ರೂಂ ನಂಬರ್ 63ರಲ್ಲಿ ರಾಷ್ಟ್ರಪತಿ ಚುನಾವಣೆಯ ಮತದಾನ ಕೇಂದ್ರ ಇದ್ದಿದ್ದು, ಮನಮೋಹನ್ ಸಿಂಗ್ ಅವರು ಬ್ಯಾಲೆಟ್ ಬಾಕ್ಸ್ ಬಳಿ ತೆರಳಿದಾಗ, ಸಿಂಗ್ ಅವರು ವೀಲ್ ಚೇರ್ ನಿಂದ ಎದ್ದೇಳಲು ನಾಲ್ವರು ಅಧಿಕಾರಿಗಳು ನೆರವು ನೀಡಿದ್ದರು ಎಂದು ವರದಿ ವಿವರಿಸಿದೆ.
ಅಕ್ಟೋಬರ್ 13ರಂದು ನಿಶ್ಯಕ್ತಿ ಮತ್ತು ಜ್ವರದಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಮಾಜಿ ಪ್ರಧಾನಿ ಅವರ ಖಾಸಗಿ ವೈದ್ಯರಾದ ಡಾ.ನಿತೀಶ್ ನಾಯಕ್ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಅನಾರೋಗ್ಯದ ಕಾರಣದಿಂದ ಮನಮೋಹನ್ ಸಿಂಗ್ ಅವರು ಕಳೆದ ವರ್ಷದ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿರಲಿಲ್ಲವಾಗಿತ್ತು. ಕಳೆದ ವರ್ಷ ಏಪ್ರಿಲ್ ನಲ್ಲಿಯೂ ಕೋವಿಡ್ ನಿಂದಾಗಿ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.