ಗಂಗಾವತಿ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶೇಕಡಾ 10ರಷ್ಟು ಕಮಿಷನ್ ಸರ್ಕಾರ ಎಂದು ಘೋಷಣೆ ಮಾಡಿದ್ದರು. ಈಗ ಸ್ವತಃ ಗುತ್ತಿಗೆದಾರರು ಮತ್ತು ಕೆಲವು ಮಠಾಧೀಶರು ಹೇಳುವಂತೆ ಕರ್ನಾಟಕದ ಬಿಜೆಪಿ ಸರ್ಕಾರ ಶೇ.40 ರಷ್ಟು ಕಮಿಷನ್ ಲಂಚ ಹಾಗೂ ಮಂಚ ಕುರಿತು ಸಹ ಪ್ರಧಾನ ಮಂತ್ರಿ ಮೋದಿಯವರು ಮಾತನಾಡಲೇ ಬೇಕು ಎಂದು ಮಾಜಿ ಸಂಸದ ಶಿವರಾಮಗೌಡ ಒತ್ತಾಯಿಸಿದ್ದಾರೆ .
ಅವರು ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೇವಲ ಜಾತಿ ಧರ್ಮದ ಮೇಲೆ ನೈತಿಕ ಪೊಲೀಸ್ ಗಿರಿಯ ಮೂಲಕ ಕೆಲ ಸಂಘ ಪರಿವಾರ ಮತ್ತು ಮುಖಂಡರು ರಾಜ್ಯದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೌನಕ್ಕೆ ಶರಣಾಗಿರುವುದು ಖಂಡನೀಯ ಎಂದು ಹೇಳಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಕೆಲವು ಮಠಾಧೀಶರು ಶೇಕಡ 40 ರಷ್ಟು ಕಮಿಷನ್ ಲಂಚ ಪ್ರಕರಣ ಹಾಗೂ 575 ಪಿಎಸೈ ನೇಮಕದ ನಡೆದಿರುವ ಅಕ್ರಮದ ಬಗ್ಗೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ, ನಿಯಮ ಉಲ್ಲಂಘಿಸಿದರೆ 500 ರೂ. ದಂಡ: ಡಿಡಿಎಂಎ
ಮುಖ್ಯಮಂತ್ರಿ ಸಚಿವರುಗಳು ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಕೆಲ ಮುಖಂಡರು ಉಡಾಫೆಯಾಗಿ ಮಾತನಾಡುತ್ತಿರುವುದು ಸರಿಯಲ್ಲ . ವಿಪಕ್ಷ ನಾಯಕರು ಸರ್ಕಾರದ ಮೇಲೆ ಕೆಲವು ಆರೋಪಗಳನ್ನು ಅಂಕಿ ಸಂಖ್ಯೆ ಸಮೇತ ಮಾಡಿದರೂ ನಿಮ್ಮ ಅವಧಿಯಲ್ಲಿ ಮಾಡಿಲ್ಲವೇ ಎಂಬ ಮರು ಉತ್ತರ ನೀಡುವುದು ಸರಿಯಲ್ಲ . ಆಗಿನ ಸರಕಾರದ ತಪ್ಪು ಮಾಡಿದ್ದರಿಂದಲೇ ಇಂದು ಬಿಜೆಪಿಗೆ ಜನರು ಅಧಿಕಾರ ನೀಡಿದ್ದಾರೆ . ನೀವು ಸಹ ಹಾಗೆ ಮಾಡಿ ಹಳೆಯ ಸರಕಾರದ ತಪ್ಪುಗಳ ಸಮರ್ಥ ಮಾಡಿಕೊಂಡರೆ ಆಡಳಿತ ನಡೆಸುವ ನೈತಿಕತೆ ನಿಮಗೆ ಇರುವುದಿಲ್ಲ. ಆದ್ದರಿಂದ ಸರ್ಕಾರ ಜನಪರವಾಗಿ ಮತ್ತು ಕೋಮುದ್ವೇಷ ರಹಿತವಾಗಿ ಆಡಳಿತ ನಡೆಸಬೇಕು. ಪೋಲಿಸ್ ನೈತಿಕಗಿರಿಯನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು . ಕೇವಲ ಜಾತಿ ಧರ್ಮದ ಮೇಲೆ ಆಡಳಿತ ನಡೆಸದೆ ಅಭಿವೃದ್ಧಿ ಮತ್ತು ಜನೋಪಕಾರದ ಯೋಜನೆ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಗೌಡ ಮಾಲಿಪಾಟೀಲ’ ಶರಣಗೌಡ,ಶಶಿಧರಗೌಡ ರೇಣುಕನಗೌಡ, ಮಲ್ಲಿಕಾರ್ಜುನ್ ಗೌಡ, ಲೋಕೇಶ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಇದ್ದರು