Advertisement

ಇವಿಎಂ ತಿರುಚುವಿಕೆ: ಯಾರೂ ಪುರಾವೆ ಕೊಟ್ಟಿಲ್ಲ

11:25 AM May 21, 2017 | |

ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ತಿರುಚಲು ಸಾಧ್ಯ ಎಂದು ಆರೋಪಿಸಿರುವ ರಾಜಕೀಯ ಪಕ್ಷಗಳ ಪೈಕಿ ಯಾರೂ ಈವರೆಗೆ ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

Advertisement

ದಿಲ್ಲಿಯಲ್ಲಿ ಶನಿವಾರ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಪ್ರಾತ್ಯಕ್ಷಿಕೆ ನಡೆಸಿದ ಸಂದರ್ಭದಲ್ಲಿ ಆಯೋಗ ಈ ವಿಚಾರ ತಿಳಿಸಿದೆ. ಜತೆಗೆ, ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಎಂಬ ಮಾತನ್ನು ಪುನರುಚ್ಚರಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ, “ಉತ್ಪಾದನಾ ಹಂತದಲ್ಲೂ ಇವಿಎಂಗಳನ್ನು ತಿರುಚ ಬಹುದು ಎಂಬ ಆರೋಪವನ್ನು ನಾವು ಒಪ್ಪುವುದಿಲ್ಲ. ಏಕೆಂದರೆ, ಆ ಸಮಯದಲ್ಲೇ ಅತ್ಯಂತ ಭದ್ರತಾ ಕ್ರಮಗಳನ್ನು ಕೈಗೊಂಡಿರ ಲಾಗುತ್ತದೆ. ಇವಿಎಂನಲ್ಲಿರುವ ಚಿಪ್‌ ಒಂದು ಬಾರಿ ಪ್ರೋಗ್ರಾಂ ಮಾಡಲು ಸಾಧ್ಯವಿರುವಂಥದ್ದು ಹಾಗೂ ಅದರಲ್ಲಿ ವೈಫೈ ಚಿಪ್‌ ಇರುವುದಿಲ್ಲ. ಹೀಗಾಗಿ, ಇವಿಎಂನೊಳಗೆ ಟ್ರೋಜನ್‌ ಹಾರ್ಸ್‌ ತುರುಕಲು ಸಾಧ್ಯವಿಲ್ಲ’ ಎಂದಿದ್ದಾರೆ.

ನಮ್ಮ ಇವಿಎಂಗಳು ಉನ್ನತ ತಾಂತ್ರಿಕ ಅಂಶಗಳನ್ನು ಒಳಗೊಂಡಿದ್ದು, ಅವುಗಳ ಇಂಟರ್ನಲ್‌ ಸರ್ಕ್ನೂಟ್‌ ಅನ್ನು ಬದಲಿಸಲು ಆಗುವುದಿಲ್ಲ. ಒಟ್ಟಾರೆಯಾಗಿ, ಇವಿಎಂಗಳನ್ನು ತಿರುಚಲು ಸಾಧ್ಯವೇ ಇಲ್ಲ ಎಂದಿದ್ದಾರೆ ಜೈದಿ. ಜತೆಗೆ, ಮತಯಂತ್ರಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಯೆತ್ತಿದ ಯಾರೂ ಈವರೆಗೆ ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ನಮಗೆ ಒದಗಿಸಿಲ್ಲ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next