Advertisement

ಬೈನಾದಲ್ಲಿ ಕನ್ನಡಿಗರ ಮನೆತೆರವಿಗೆ ಸಿದ್ಧತೆ

11:17 AM Aug 12, 2018 | Team Udayavani |

ಪಣಜಿ: ಗೋವಾದ ಬೈನಾದಲ್ಲಿರುವ ಅಕ್ರಮ ಗುಡಿಸಲುಗಳ ವಿರುದ್ಧ ಕ್ರಮ ಕೈಗೊಳ್ಳಲು ಗೋವಾ ಕರಾವಳಿ ವಲಯ ಪ್ರಾಧಿಕಾರಕ್ಕೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ಬೈನಾ ಬೀಚ್‌ನಲ್ಲಿರುವ ಮನೆಗಳು ಅಕ್ರಮ ಎಂದು ಹಸಿರು ಪೀಠ ಹೇಳಿದೆ. ಇದರಿಂದಾಗಿ ಮತ್ತೆ ಬೈನಾ ಆಪರೇಷನ್‌ ಕಾರ್ಯಾಚರಣೆ ನಡೆಯುವ ಆತಂಕ ಎದುರಾಗಿದೆ.

Advertisement

ಗೋವಾ ಸರ್ಕಾರವು ಬೈನಾದಲ್ಲಿರುವ ಮನೆಗಳು ಅಕ್ರಮ, ಈ ಮನೆಗಳನ್ನು ತೆರವುಗೊಳಿಸುವು ದಾಗಿ ನೋಟಿಸ್‌ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೈನಾ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಾದ, ಪ್ರತಿವಾದ ಪರಿಶೀಲಿಸಿದ ನಂತರ ರಾಷ್ಟ್ರೀಯ ಹಸಿರು ಪೀಠವು ಬೈನಾದಲ್ಲಿ ಯಾವುದೇ ಮನೆಗಳ ನಿರ್ಮಾಣದ ಸಂದರ್ಭದಲ್ಲಿ ಪೂರ್ವ ಪರವಾನಗಿ ಪಡೆದುಕೊಂಡಿಲ್ಲ, ಮನೆಗಳ ನಿರ್ಮಾಣ ಕಾನೂನು ಬಾಹಿರ ಎಂದು ಕಂಡು ಬಂದಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next