ಬೆಲ್ಟ್ ಫ್ಯಾಶನ್ ಆಗಿ ಉಪಯೋಗಿಸುವುದಕ್ಕಿಂತ ಹೆಚ್ಚಾಗಿ ಪ್ಯಾಂಟ್‌ನ ಜತೆ ಧರಿಸುತ್ತಿದ್ದರು. ಆದರೆ ಈಗ ಬೆಲ್ಟ್ ಫ್ಯಾಶನ್ ಆಗಿದೆ. ಉಡುಪಿನ ಅಂದ ಚೆಂದ ಹೆಚ್ಚಿಸಲೂ ಬಳಸಲಾಗುತ್ತದೆ. ಶರ್ಟ್ ಪ್ಯಾಂಟ್ ಅಲ್ಲದೆ ಮಹಿಳೆಯರ ಡ್ರೆಸ್ ಗೂ ಈಗ ಬೆಲ್ಟ್ ಹಾಕಿಕೊಳ್ಳಲಾಗುತ್ತದೆ.
ಮಹಿಳೆಯರು ತಮ್ಮ ಡ್ರೆಸ್ ಮೇಲೆ ಬಣ್ಣ ಬಣ್ಣದ, ವಿಭಿನ್ನ ಆಕಾರದ, ವಿಶಿಷ್ಟ ಶೈಲಿಯ ಬೆಲ್ಟ್ ಗಳನ್ನು ಹಾಕುತ್ತಿದ್ದಾರೆ. ಈಗಿನ ಲೇಟೆಸ್ಟ್ ಟ್ರೆಂಡ್, ಸೀರೆ ಮೇಲೆ ಬೆಲ್ಟ್ ತೊಡುವುದು! ಹೌದು, ಸಿಂಪಲ್ ಆದ ಸೀರೆಯೂ ಗ್ರ್ಯಾಂಡ್ ಆಗಿರೋ ಬೆಲ್ಟ್ ನಿಂದಾಗಿ ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಹೆವಿ ಎಂಬ್ರಾಯ್ಡ್ ರಿ ಇರುವ ಸೀರೆಗಳ ಮೇಲೆ ಫ್ಲೈ ನ್ ಬೆಲ್ಟ್ ಮತ್ತು ಫ್ಲೈನ್ ಸೀರೆಗಳ ಮೇಲೆ ಗ್ರಾಂಡ್ ಬೆಲ್ಟ್ ತೊಡಬೇಕೆಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಸೀರೆಗಳ ಮೇಲೆ ಹಾಕಿಕೊಳ್ಳುವ ಬೆಲ್ಟ್ ಗಳಲ್ಲಿ ಅದೆಷ್ಟು ವಿಧಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೊದಲಿಗೆ ಸೀರೆಯನ್ನು ಉಟ್ಟು, ನಂತರ ಅದರ ಮೇಲೆ ಕಾಲರ್ ಇರುವ ಜಾಕೆಟ್ ರವಿಕೆಯನ್ನು ತೊಟ್ಟು, ಅದರ ಮೇಲೆ ಬೆಲ್ಟ್ ಅನ್ನು ತೊಡಬಹುದು. ಈ ಲುಕ್ ಪಡೆಯಲು ಫ್ಲೈನ್ ಸೀರೆಗೆ ಎಂಬ್ರಾಯ್ಡ್ ರಿ ಇರುವ ಜಾಕೆಟ್ ಬ್ಲೌಸ್ ಉಟ್ಟು, ಸ್ವರ್ಣ ಬಣ್ಣದ ಬೆಲ್ಟ್ ಧರಿಸಿಸಬಹುದು. ಸೀರೆಗೆ ಬೆಲ್ಟ್ ಹಾಕಿಕೊಳ್ಳುವುದರಿಂದ ನೆರಿಗೆ ಮತ್ತು ಸೆರಗು ಅಚ್ಚುಕಟ್ಟಾಗಿ ನಿಲ್ಲುತ್ತವೆ. ಫ್ಲೈನ್ ಡ್ರೆಸ್ ಹಾಕಿಕೊಳ್ಳುವುದಾದರೆ ಮೆಟಲ್ ಬೆಲ್ಟ್ , ಗೋಲ್ಡ್ ಬೆಲ್ಟ್ , ಚೈನ್ ಬೆಲ್ಟ್ ಸೇರಿದಂತೆ ಟಾಸ್ಸೆಲ್ ಬೆಲ್ಟ್ ಗಳನ್ನು ಬಳಸಬಹುದು. ಇದರಿಂದ ಬೋರಿಂಗ್ ಬಟ್ಟೆಗಳಿಗೆ ಮೆರಗು ಸಿಗುತ್ತದೆ. ಎಲಾಸ್ಟಿಕ್ ಬೆಲ್ಟ್ ಗಳಲ್ಲೂ ಲೋಹದ ಬಕಲ್ ಗಳಿದ್ದು, ಇವು ತೊಡಲು ಸರಳ ಹಾಗು ಸುಲಭವಾಗಿರುತ್ತವೆ.
ಪದೇ ಪದೇ ಸಡಿಲ ಅಥವಾ ಬಿಗಿ ಮಾಡಿಕೊಳ್ಳಬೇಕಿಲ್ಲ. ಮಾರುಕಟ್ಟೆಯಲ್ಲಿ ಒರಿಜಿನಲ್ ಲೆದರ್‌ಗಿಂತ ಸ್ವಲ್ಪವೂ ಭಿನ್ನವಾಗಿ ಕಾಣದ ಫೇಕ್ ಲೆದರ್‌ನಿಂದ ಮಾಡಿದ ಸುಂದರ ಬೆಲ್ಟ್ ಗಳು ಲಭ್ಯವಿವೆ! ಇನ್ನು ಮುತ್ತು, ರತ್ನ, ಹವಳ, ವಜ್ರ ಸೇರಿದಂತೆ ಅಮೂಲ್ಯ ಕಲ್ಲುಗಳಂತೆ ಕಾಣುವ ಪ್ಲಾಸ್ಟಿಕ್, ಕುಪ್ಪಿ ಮತ್ತು ಇತರ ವಸ್ತುಗಳಿಂದ ಸರ, ಹಾರದಂತೆ ಪೋಣಿಸಿ ಬೆಲ್ಟ್ ಗಳನ್ನು ಮಾಡಲಾಗುತ್ತದೆ. ಇವು ಚೈನ್ ಬೆಲ್ಟ್ ಗಳ ಸಾಲಿಗೆ ಸೇರುತ್ತವೆ. ಇವುಗಳಿಗೆ ಮ್ಯಾಚಿಂಗ್ ಕಿವಿಯೋಲೆ, ಸರ ಮತ್ತು ಬಳೆಗಳನ್ನು ಹಾಕಿಕೊಳ್ಳಬಹುದು. ತಲೆಕೂದಲಿಗೆ ಕಟ್ಟಿಕೊಳ್ಳುವ ರಿಬ್ಬನ್‌ಗಳನ್ನೂ ಬಳಸಿ ಬೆಲ್ಟ್ ನಂತೆ ತೊಡಬಹುದು.
ಸುಶ್ಮಿತಾ ಶೆಟ್ಟಿ