Advertisement

ಶಿಕ್ಷಣ ಹಕ್ಕಿನಿಂದ ಎಲ್ಲೆಡೆ ಆಮೂಲಾಗ್ರ ಬದಲಾವಣೆ: ಸಚಿವ ರೈ 

03:32 PM Dec 20, 2017 | |

ಕೊಳ್ನಾಡು: ಶಿಕ್ಷಣ ಹಕ್ಕು ಎಂದು ಸರಕಾರ ಘೋಷಿಸಿದ ಬಳಿಕ ಎಲ್ಲೆಡೆ ಆಮೂಲಾಗ್ರ ಬದಲಾವಣೆ ಸಾಧಿಸಲಾಗಿದೆ. ಶಿಕ್ಷಣದಿಂದ ವಂಚಿತರಾಗಲು ಸಾಧ್ಯವೇ ಇಲ್ಲದಾಯಿತು. ವಿದ್ಯೆ ಎಲ್ಲರಿಗೂ ಸಿಕ್ಕುವಂತಾಗಿದೆ ಎಂದು ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದರು. ಅವರು ತಾಳಿತ್ತನೂಜಿ ಶಾಲೆಯಲ್ಲಿ ನಡೆದ 20ರ ಸಂಭ್ರಮದಲ್ಲಿ ಸಂಜೆ ನಡೆದ ಅಭಿನಂದನೆ, ಗುರುವಂದನೆ ಸಮಾರಂಭದಲ್ಲಿ ಮಾತನಾಡಿದರು.

Advertisement

ಬೆಳಗ್ಗೆ ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌ ಕಾರ್ಯಕ್ರಮ ಉದ್ಘಾಟಿಸಿದರು. ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಕೊಳ್ನಾಡು ಗ್ರಾ.ಪಂ. ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಸದಸ್ಯರಾದ ಸುನಂದಾ, ಗಂಗಾಧರ ಚೌಟ, ಇಸ್ಮಾಯಿಲ್‌, ಧ.ಗ್ರಾ. ಯೋಜನೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ, ಸಂಯೋಜಕಿ ರೂಪಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ಮುಖ್ಯ ಶಿಕ್ಷಕ ಸುಂದರ ನಾಯ್ಕ ಸ್ವಾಗತಿಸಿದರು. ಸಹಶಿಕ್ಷಕ ಪ್ರದೀಪ್‌ ವಂದಿಸಿದರು. ಸಹಶಿಕ್ಷಕಿ ಬೇಬಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಹೂಹಾಕುವ ಕಲ್ಲು ಪ್ರಾಥಮಿಕ ಶಾಲೆ ಸಹಶಿಕ್ಷಕ ನಾಗರಾಜ ಪದಕಣ್ಣಾಯ ಅವರಿಂದ ವಚನ ಸಂಭ್ರಮ, ಸತೀಶ್‌ ನಡ್ತಿಕಲ್ಲು ವೇಣೂರು ಅವರಿಂದ ಸ್ವರ ನಾದ ಸಂಭ್ರಮ ನಡೆಯಿತು.

ಅಭಿನಂದನೆ , ಗುರುವಂದನೆ
ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಜಿಲ್ಲಾ ಪಂಚಾಯತ್‌ ಸದಸ್ಯ ಎಂ.ಎಸ್‌. ಮಹಮ್ಮದ್‌, ಕೊಳ್ನಾಡು ಗ್ರಾಮ ಪಂಚಾಯತ್‌ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ, ಎಸ್‌ಡಿಎಂಸಿ ಸ್ಥಾಪಕಾಧ್ಯಕ್ಷ ಯೂಸುಫ್‌ ಟಿ., ಮಂಚಿ ವಲಯ ಇಸಿಒ ಪ್ರಕಾಶ್‌, ಕೊಳ್ನಾಡು ಕ್ಲಸ್ಟರ್‌ ಸಿಆರ್‌ಪಿ ಗಂಗಾಧರ, ನಾರ್ತ್‌ ಮಲಬಾರ್‌ ಗ್ರಾಮೀಣ ಬ್ಯಾಂಕ್‌ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್‌ ಹಾಜಿ ನಾರ್ಶ, ಕೊಳ್ನಾಡು ಗ್ರಾ.ಪಂ. ಮಾಜಿ ಸದಸ್ಯ ಸಂಕಪ್ಪ ಗೌಡ,  ಪ್ರಗತಿಪರ ಕೃಷಿಕ ಲಿಂಗಪ್ಪ ಗೌಡ, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘದ ನಿರ್ದೇಶಕ ಮೋಹನ್‌ ಗೌಡ ಕಲ್ಮಂಜ ಮೊದಲಾದವರು ಭಾಗವಹಿಸಿದ್ದರು. 

ಇದೇ ಸಂದರ್ಭ ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್‌, ರಸ್ತೆ ವಿಸ್ತರಣೆಗೆ ಸ್ಥಳದಾನ ಮಾಡಿದವರನ್ನು, ಶಾಲೆಯಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಮತ್ತು ಹಲವರನ್ನು ಸಮ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಸುಂದರ ನಾಯ್ಕ ಸ್ವಾಗತಿಸಿದರು. ಸಹಶಿಕ್ಷಕ ಪ್ರದೀಪ್‌ ವರದಿ ಮಂಡಿಸಿದರು. ಸಹಶಿಕ್ಷಕಿ ಬೇಬಿ ವಂದಿಸಿದರು. ತೌಸೀಫ್‌ ಅಹ್ಮದ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ಸುಶಿಕ್ಷಿತರ ಸಂಖ್ಯೆ ಹೆಚ್ಚಳ
ಇಂದು ಸುಶಿಕ್ಷಿತರ ಸಂಖ್ಯೆ ಹೆಚ್ಚಳವಾಗಿದೆ. ದೇಶದ ಬೆಳವಣಿಗೆಗೆ ಅದು ಅತ್ಯಗತ್ಯ. ಹಿಂದೆ ಧನಿಕರ ಮಕ್ಕಳು ಮಾತ್ರ ಎಂಜಿನಿಯರ್‌, ಡಾಕ್ಟರ್‌ ಆಗಿದ್ದರೆ ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರ ಮಕ್ಕಳೂ ಎಂಜಿನಿಯರಿಂಗ್‌, ಮೆಡಿಕಲ್‌ ಕಲಿಯುವಂತಾಗಿದೆ. 
ರಮಾನಾಥ ರೈ ,
  ಉಸ್ತುವಾರಿ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next