Advertisement

ದೇಶ ಕಟ್ಟುವಲ್ಲಿ ಎಲ್ಲರ ಪಾತ್ರ ಮುಖ್ಯ

11:31 AM Aug 22, 2017 | Team Udayavani |

ಜೇವರ್ಗಿ: ದೇಶ ಕಟ್ಟುವ ಕಾರ್ಯದಲ್ಲಿ ಕೇವಲ ಸರಕಾರ ಮಾತ್ರವಲ್ಲ ಪ್ರತಿಯೊಬ್ಬರ ಪಾತ್ರ ಕೂಡ ಬಹು ಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ ಶಿವಶರಣಪ್ಪ ಪಾಟೀಲ ಹೇಳಿದರು. ಪಟ್ಟಣದ ಬಸವೇಶ್ವರ ನಗರದಲ್ಲಿರುವ ಗುರು ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಾಲೂಕು ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಹಾವಾಡಿಗರ ದೇಶ, ದರಿದ್ರ ದೇಶ ಎಂಬ ಅಪಪ್ರಚಾರದಿಂದ
ಹೊರಬಂದು ಜಗತ್ತಿನ ಗೌರವಕ್ಕೆ ಪಾತ್ರರಾಗುವ ಕಾಲ ಕೂಡಿ ಬಂದಿದೆ. ಭಾರತ ಒಂದು ಆರ್ಥಿಕ ಶಕ್ತಿಯಾಗಿ ಮೇಲೇಳುತ್ತಿರುವುದನ್ನು ಜಗತ್ತೇ ಗುರುತಿಸಲಾರಂಭಿಸಿದೆ. ಈ ಎಲ್ಲ ಉತ್ತಮ ಅಂಶಗಳ ಬಲದಿಂದ ಸಮಾಜದಲ್ಲಿ ನಮ್ಮನ್ನು ಕಾಡುತ್ತಿರುವ ಒಳ-ಹೊರಗಿನ ಸಮಸ್ಯೆಗಳಿಂದ ದೇಶ ಮುಕ್ತಗೊಳಿಸಬೇಕಿದೆ. ಭಯೋತ್ಪಾದನೆ,
ಲವ್‌ ಜಿಹಾದ್‌ ನಿರ್ಮೂಲನೆಗೊಳಿಸುವ ಕಾರ್ಯ ಹೆಚ್ಚು ಹೆಚ್ಚು ನಡೆಯಬೇಕಿದೆ. ಅಡೆತಡೆ ಇಲ್ಲದೇ ನಡೆಯುತ್ತಿರುವ ಗೋ ಹತ್ಯೆ ಸಮಸ್ಯೆ ನಿವಾರಿಸಬೇಕಿದೆ. ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ಅಸ್ಪ್ರಶ್ಯತೆ, ಜಾತಿಯತೆ
ಕಿತ್ತೂಗೆದು ಕುಟುಂಬಗಳಲ್ಲಿ, ಶಾಲೆಗಳಲ್ಲಿ ಸಿಗಬೇಕಾದ ಸಂಸ್ಕಾರಗಳನ್ನು ಇನ್ನಷ್ಟು ಬಲಪಡಿಸಿ ಮನುಷ್ಯ ನಿರ್ಮಾಣದ ಕಾರ್ಯಕ್ಕೆ ವೇಗ ಕೊಡಬೇಕಿದೆ. ರಕ್ಷಾ ಬಂಧನ ಬಂಧುತ್ವದ ಸಂದೇಶ ಸಾರುವ ಮಹತ್ವದ ಹಬ್ಬ ಎಂದು ಹೇಳಿದರು.
ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮುಖಂಡ ರಮೇಶಬಾಬು ವಕೀಲ, ಮಲ್ಲಿನಾಥಗೌಡ ಪಾಟೀಲ ಯಲಗೋಡ, ಜಿಪಂ ಸದಸ್ಯರಾದ ಶಿವರಾಜ ಪಾಟೀಲ ರದ್ಧೇವಾಡಗಿ, ರೇವಣಸಿದ್ಧಪ್ಪ
ಸಂಕಾಲಿ, ತಪಂ ಸದಸ್ಯ ಗುರುಶಾಂತಪ್ಪ ಸಿಕ್ಕೇದ್‌ ಕೋಳಕೂರ, ಮಾಜಿ ಸದಸ್ಯ ಬಸವರಾಜಗೌಡ ಕುಕನೂರ, ವಿಎಚ್‌ಪಿ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಆದ್ವಾನಿ, ನಿವೃತ್ತ ಶಿಕ್ಷಕ ಚಿತ್ರಶೇಖರ ತುಂಬಗಿ, ಶ್ರೀನಿವಾಸ ವಕೀಲ, ಪಾಂಡುರಂಗ ಕುಲಕರ್ಣಿ, ಸಂಗನಗೌಡ ಪಾಟೀಲ ರದ್ಧೇವಾಡಗಿ, ರಾಕೇಶ ಹರಸೂರ, ರೋಮನಗೌಡ ಮಲ್ಲಾಬಾದ, ಎ.ಜಿ.ಫುಲಾರೆ, ರಾಜು ರದ್ಧೇವಾಡಗಿ, ಶರಣು ವಡಗೇರಿ ಭಾಗವಹಿಸಿದ್ದರು. ಆರ್‌ಎಸ್‌ಎಸ್‌ ತಾಲೂಕು ಪ್ರಮುಖ ಧರ್ಮು ಚಿನ್ನಿ ರಾಠೊಡ ನಿರೂಪಿಸಿ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next