Advertisement

ಅಖಂಡತೆ ಬೆಲೆ ಒಡಕಿಗಿಲ್ಲ: ರಂಭಾಪುರಿ ಶ್ರೀ

11:14 AM Dec 14, 2018 | Team Udayavani |

ಕಲಬುರಗಿ: ಅಖಂಡತೆಯಲ್ಲಿ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯ ಅರಿತು ಬಾಳಬೇಕು. ಜತೆಗೆ ಭೌತಿಕ ಸಂಪತ್ತಿನ ಜೊತೆಗೆ ಒಂದಿಷ್ಟು ಆತ್ಮ ಜ್ಞಾನದ ಅರಿವು
ಪಡೆಯುವುದು ಮುಖ್ಯ ಎಂದು ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಜೇವರ್ಗಿ ತಾಲೂಕಿನ ಮಾರಡಗಿ (ಎಸ್‌. ಎಂ.) ಗ್ರಾಮದಲ್ಲಿ ಶ್ರೀ ಮಲ್ಲಪ್ಪ ಶರಣರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶರಣ ಬಸವೇಶ್ವರ ಪುರಾಣ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರು ಪರೋಪಕಾರಿ ಜೀವನ ನಡೆಸುವ ಮೂಲಕ ಸನ್ಮಾರ್ಗದ ಹಾದಿಯಲ್ಲಿ ನಡೆಯಬೇಕಾಗಿದೆ ಎಂದರು.
 
ಧರ್ಮ ಆಚರಣೆ ಅರಿವಿಲ್ಲದೇ ದಾರಿ ತಪ್ಪಿಸುವವರಿದ್ದಾರೆ. ಎಷ್ಟೆ ವೈಚಾರಿಕತೆಯಿದ್ದರೂ ಸಂಸ್ಕೃತಿಗೆ, ಧರ್ಮಕ್ಕೆ ತೊಂದರೆಯಾಗಬಾರದು. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸುತ್ತಾ ಬಂದಿದೆ ಎಂದು ನುಡಿದರು. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎಂದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಮಾತನಾಡಿ, ಜೇವರ್ಗಿ ತಾಲೂಕು ಶರಣರು, ಸಂತರು, ದಾರ್ಶನಿಕರು, ಜನ್ಮ ತಾಳಿದ ಪುಣ್ಯ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ರಂಭಾಪುರಿ ಪೀಠದ ಜಗದ್ಗುರುಗಳು ಆಗಮಿಸಿ ನಮ್ಮೆಲ್ಲರಿಗೆ ಭಕ್ತಿಯ ಮಾರ್ಗದರ್ಶನ ನೀಡುವ ಮೂಲಕ ಸನ್ಮಾರ್ಗದ ನಡೆ ತೋರಿಸಿಕೊಟ್ಟಿದ್ದಾರೆ ಎಂದರು.

ಮಾರಡಗಿಯ ಶ್ರೀ ಮಲ್ಲಪ್ಪ ಶರಣರು ನೇತೃತ್ವ ವಹಿಸಿದ್ದರು. ಮಾಗಣಗೇರಿಯ ಡಾ| ವಿಶ್ವಾರಾಧ್ಯ ಶಿವಾಚಾರ್ಯರು, ಆಲೂರಿನ ಕೆಂಚವೃಷಬೇಂದ್ರ ಶಿವಾಚಾರ್ಯರು,
ಭೋರಗಿ ಪುರದಾಳದ ಮಹಾಲಿಂಗೇಶ್ವರ ಮಹಾಸ್ವಾಮೀಜಿ, ಬಾಡಿಯಾಲ ಚನ್ನವೀರ ಶಿವಾಚಾರ್ಯರು, ಮದ್ದರಕಿ ಶೀಲವಂತೇಶ್ವರ ಶಿವಾಚಾರ್ಯರು, ಶಹಾಪುರ ಸೂಗುರೇಶ್ವರ ಶಿವಾಚಾರ್ಯರು, ಹೆಡಗಿಮುದ್ರಿ ಶಾಂತಮಲ್ಲಿಕಾರ್ಜುನ ಶಿವಾಚಾರ್ಯರು ಹಾಗೂ ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಮಲ್ಲಣ್ಣಗೌಡ ಪಾಟೀಲ ಉಕ್ಕಿನಾಳ, ಮಲ್ಲಿನಾಥಗೌಡ ಪಾಟೀಲ ಯಲಗೋಡ, ಶಾಂತಪ್ಪ ಕೂಡಲಗಿ, ಮಹಾದೇವಪ್ಪ ದೇಸಾಯಿ, ಷಣ್ಮುಖಪ್ಪ ಸಾಹು ಗೋಗಿ, ರೇವಣಸಿದ್ದಪ್ಪ ಸಂಕಾಲಿ, ದೇವಿಂದ್ರಪ್ಪಗೌಡ ಮಾಗಣಗೇರಿ, ಹಂಪ್ಪಣ್ಣಗೌಡ ಹಾಲಗಡ್ಲಾ,ಬಸಣ್ಣಗೌಡ ಹೊನ್ನಾಗೋಳ, ರಾಜುಗೌಡ ಹರನಾಳ, ಗೌಡಪ್ಪಗೌಡ ಅಂಬರಖೇಡ, ಅರುಣ ರಡ್ಡಿ ಶಿವಪುರ, ಶರಣಗೌಡ ಪಾಟೀಲ, ಮಲ್ಲಣ್ಣಗೌಡ ನೇರಡಗಿ, ಪ್ರಭುಗೌಡ ಅವಳೆಗೋಳ ಪಾಲ್ಗೊಂಡಿದ್ದರು. ಅಮರಯ್ಯ ಸ್ವಾಮಿ ಜಾಲಿಬೆಂಚ್ಚಿ ನಿರೂಪಿಸಿ ವಂದಿಸಿದರು. ಧರ್ಮ ಸಭೆಗೂ ಮುನ್ನ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next