Advertisement

ಸಾಮಾಜಿಕ ಪಿಡುಗುಗಳ ನಾಶ ಎಲ್ಲರ ಹೊಣೆ: ಜಿಗಜಿಣಗಿ

03:13 PM Aug 31, 2017 | |

ವಿಜಯಪುರ: ಸಾಮಾಜಿಕ ಪಿಡುಗುಗಳಾದ ಜಾತೀಯತೆ, ಕೋಮುವಾದ ಮತ್ತು ಭ್ರಷ್ಟಾಚಾರವನ್ನು ಸಮಾಜದಿಂದ ಕಿತ್ತೆಸೆಯಲು ಪ್ರತಿಯೊಬ್ಬರು ಪಣ ತೊಡಬೇಕು ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಕರೆ ನೀಡಿದರು.

Advertisement

ಕನ್ನೂರ ಗ್ರಾಮದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನೆ‌ಹರು ಯುವ ಕೇಂದ್ರ, ತಾಪಂ, ಶಿಶು ಅಭಿವೃದ್ಧಿ ಯೋಜನೆ, ಸೈನಿಕ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕಣ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವತ್ಛ ಭಾರತ ಸಂಸ್ಥೆ
ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನವಭಾರತ ನಿರ್ಮಾಣ-ಸಂಕಲ್ಪದಿಂದ ಸಿದ್ಧಿ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಬಡತನ, ಅನಕ್ಷರತೆ, ಜಾತೀಯತೆ, ಕೋಮುವಾದ, ಭಯೋತ್ಪಾದನೆ ಹೀಗೆ ಸಾಮಾಜಿಕ ಅನಿಷ್ಟಗಳಿಂದ ಭಾರತ ಮುಕ್ತವಾಗಿಲ್ಲ. ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಇಂಥ ಸಾಮಾಜಿಕ ಅನಿಷ್ಟಗಳನ್ನು ಬುಡಸಮೇತ ಕಿತ್ತೆಸೆಯಬೇಕಿರುವ ಇಂದಿನ ತುರ್ತು ಅನಿವಾರ್ಯ ಎಂದರು.

ದೇಶವನ್ನು ಎಲ್ಲಾ ರಂಗದಲ್ಲೂ ಅಭಿವೃದ್ಧಿಪಡಿಸಬೇಕಾದರೆ ನಮ್ಮಲ್ಲಿ ಮೊದಲು ಸ್ವತ್ಛತೆ ಇರಬೇಕು. ಸ್ವತ್ಛತೆ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು ಅವರಿಂದಲೇ ಸ್ವತ್ಛ ಭಾರತ ಅಭಿಯಾನಕ್ಕೆ ಇನಷ್ಟು ವೇಗ ಸಿಗಬೇಕಾಗಿದೆ. ಬಡ ರಾಷ್ಟ್ರಗಳಾದ ಇಸ್ಥಾನ್‌ಬುಲ್‌ ಸೇರಿದಂತೆ ಅನೇಕ ದೇಶಗಳಲ್ಲಿ ಸ್ವತ್ಛತೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಅದರಂತೆ ನಮ್ಮ ದೇಶದಲ್ಲೂ ಸ್ವತ್ಛತೆ ಕಾಪಾಡಬೇಕಿದೆ ಎಂದರು.

ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಪ್ರೊ|ರಾಜು ಆಲಗೂರ ಮಾತನಾಡಿ, ಸರ್ಕಾರದ ಯೋಜನೆಗಳ ಸದ್ಬಳಕೆ ಆಗಬೇಕು. ಆಗಲೇ ದೇಶಕ್ಕೆ ಉತ್ತಮ ಭವಿಷ್ಯ ಇದ್ದು, ಜನಸಮುದಾಯದ ಸಮಗ್ರ ಅಭಿವೃದ್ಧಿಯೂ ಸಾಧ್ಯ ಎಂದರು.

Advertisement

ಕನ್ನೂರ ಗ್ರಾಪಂ. ಅಧ್ಯಕ್ಷ ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ|ಶರಣಗೌಡ ಪಾಟೀಲ, ಭಾರತಿ ಪಾಟೀಲ ಉಪನ್ಯಾಸ ನೀಡಿದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಅಧಿಕಾರಿ ತುಕಾರಾಮಗೌಡ, ಮಾಜಿ ಸೆ„ನಿಕ ಮಲ್ಲಿಕಾರ್ಜುನ ಮೇತ್ರಿ ಅವರನ್ನು ಸನ್ಮಾನಿಸಲಾಯಿತು.

ಕಾಳಪ್ಪ ಬೆಳ್ಳುಂಡಗಿ, ಸಂಗೀತಾ ಕನ್ನೂರ, ಡಿ.ಎಲ್‌. ಚವ್ಹಾಣ,ಕೆ.ಕೆ. ಚವ್ಹಾಣ, .ಎಚ್‌.ಹೂಗಾರ, ಎನ್‌ವೈಕೆ ಯುವ ಸಮನ್ವಯಾಧಿಕಾರಿ ಎಸ್‌.ಡಿ. ದಯಾನಂದ ವೇದಿಕೆ ಮೇಲಿದ್ದರು . ಸಿ.ಕೆ. ಸುರೇಶ ನಿರೂಪಿಸಿದರು. ಮುರುಗೆಪ್ಪ ಬೆಳ್ಳುಂಡಗಿ ಸ್ವಾಗತಿಸಿದರು. ಮುರಳಿಧರ ಕಾರಭಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next