ಪ‹ಧಾನಿ ನರೇಂದ್ರ ಮೋದಿ ಅವರ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆ ಯಂತೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಬಜೆಟ್‌ನಲ್ಲಿ “ಸರ್ವರೊಂದಿಗೆ ಸರ್ವರ ವಿಕಾಸ’ದ ಕನಸು ಕಂಡಿದ್ದಾರೆ. ಅನ್ನದಾತರ ಕ್ಷೇತ್ರವಾದ ಕೃಷಿ ಆವಿಷ್ಕಾರಕ್ಕೂ ಪಟತೊಟ್ಟಿದ್ದಾರೆ. ಆರ್ಥಿಕ ಹಿಂಜರಿತ, ಕೇಂದ್ರದ ತೆರಿಗೆ ಅನುದಾನದಲ್ಲಿ ಕಡಿತ, ಉತ್ತರ ಕರ್ನಾಟಕದಲ್ಲಿ ಉಂಟಾದ ಮಳೆ- ಪ್ರವಾಹ ಸೇರಿ ಹಲವು ಸಮಸ್ಯೆಗಳ ನಡು ವೆಯೂ ತಮ್ಮಲ್ಲಿ ಇರುವಂತಹ ಸಂಪ ನ್ಮೂಲವನ್ನೇ ಗಮನದಲ್ಲಿಟ್ಟುಕೊಂಡು ಕೃಷಿಯ ವಲಯದ ಏಳ್ಗೆಗೆ ಪೂರಕ ಯೋಜನೆಗಳನ್ನು ರೂಪಿಸಿದ್ದಾರೆ.
ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಗೆ ಪೂರಕ ವಾದಂತಹ ಅಂಶಗಳು ಬಜೆಟ್‌ನಲ್ಲಿ ಗೋಚರಿಸಿದೆ ಇದ್ದರೂ, ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಂತಹ ಅನುಪಮ ಯೋಜನೆಗಳನ್ನು ಕಾಣಬಹುದಾಗಿದೆ. “ಜೀವ ಸಂಕುಲದ ಉಳಿವಿಗೆ, ಎಲ್ಲರ ಕೃಷಿಗೆ ಕೃಷಿಯೇ ಆಧಾರ. ಅನ್ನದಾತ ಮೊದಲು ಉಳಿದರೆ ಇತರರೂ ಉಳಿದರೂ’ ಎಂಬ ಲೋಕೋಕ್ತಿ ಯನ್ನು ಮನಗಂಡಿರುವ ಯಡಿಯೂರಪ್ಪ ಅವರು ನೀರಿನ ಭದ್ರತೆ, ಭೂ ಸಂಚಯ, ಸಾಮೂಹಿಕ ಕೃಷಿಯನ್ನು ಪ್ರೋತ್ಸಾಹಿಸುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 10 ಸಾವಿರ ರೂ. ವಾರ್ಷಿಕ ಹಣಕಾಸು ನೆರವು ನೀಡುವ ಭರವಸೆ ನೀಡಿದ್ದಾರೆ.
ಬರ ನಿರೋಧಕ ಬೆಳೆಗಳನ್ನು ಪ್ರೋತ್ಸಾಹಿ ಸಲು “ರೈತ ಸಿರಿ’ಯೋಜನೆ. ಕಾಲಕಾಲಕ್ಕೆ ಕೃಷಿ ಬಗ್ಗೆ ಮಾಹಿತಿ ನೀಡಲು “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್’, “ಜಲಾನಯನ ನಿರ್ವಹಣಾ’ ಯೋಜನೆ, ನೀರಿನ ಕೊರತೆ ನೀಗಿಸಲು “ಜಲಗ್ರಾಮ ಕ್ಯಾಲೆಂಡರ್’, “ಕಿಂಡಿ ಅಣೆಕಟ್ಟು’ ಯೋಜನೆ ಸೇರಿ ರೈತ ಬಾಂಧವರಿಗೆ ಅನುಕೂಲವಾಗುವಂತಹ ಹಲವು ಉತ್ತಮ ಯೋಜನೆಗಳನ್ನು ಘೋಷಿಸಿದ್ದಾರೆ.
ಎತ್ತಿನ ಹೊಳೆ ಯೋಜನೆಗೆ ಆದ್ಯತೆ ನೀಡಲಾಗಿದೆ. ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾಗಳ ಕಾಮ ಗಾರಿಗೆ 500 ಕೋಟಿ ರೂ. ಮೀಸಲಿ ಡಲಾಗಿದೆ. ಜತೆಗೆ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಕೊರತೆ ನೀಗಿಸುವ ವಾಗ್ಧಾನ ಮಾಡಲಾಗಿದೆ. ಹಿನ್ನೀರು ಜಲ ಕೃಷಿಗೆ ಆದ್ಯತೆ ನೀಡಿದೆ. ಭದ್ರಾ ಮೇಲ್ದಂಡೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯತ್ತ ಗಮನ ಹರಿಸಿದೆ. “ಕೃಷಿ ಕ್ಲಿನಿಕ್’ ಮೂಲಕ ರೈತರ ಮನೆಬಾಗಿಲಿಗೆ ಔಷಧಿಗಳನ್ನು ನೀಡುವ ಯೋಜನೆ ರೂಪಿ ಸಿದೆ. ಈ ಎಲ್ಲಾ ಯೋಜ ನೆಗಳು ಕೃಷಿಯ ಅಭಿ ವೃದ್ಧಿಗೆ ಪೂರಕವಾ ಗುವಂತಹ ಯೋಜನೆಗಳಾಗಿವೆ.
ಇದರ ಜತೆಗೆ ಗ್ರಾಮಗಳ ಅಭಿವೃದ್ಧಿಯನ್ನು ಕೇಂದ್ರೀಕರಿಸಿ “ಗ್ರಾಮ ಒನ್’ ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ ತೋಟಗಾರಿಕೆ ವಿಚಾರಕ್ಕೆ ಬಂದಾಗ ಸರ್ಕಾರ ಕೊಂಚ ಎಡ ವಿದಂತೆ ಕಾಣುತ್ತದೆ. ಬಜೆಟ್‌ನಲ್ಲಿ ಯಡಿ ಯೂ ರಪ್ಪ ಅವರ ತೋಟಗಾರಿಕೆಯನ್ನು ಉದ್ಯಮವನ್ನಾಗಿ ಪರಿಗಣಿಸುವ ಬಗ್ಗೆ ಹೇಳಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಕೃಷಿಯನ್ನು ಕೈಗಾರಿಕೆಯನ್ನಾಗಿ ಪರಿಗಣಿಸಿದರೆ ನೂರಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆ ಹಿನ್ನೆಲೆಯಲ್ಲಿ ಇದನ್ನು ಸರ್ಕಾರ ಕೈಬಿಡಬೇಕು.
* ಪ್ರೊ.ನರಸಿಂಹಪ್ಪ, ಕೃಷಿ ತಜ್ಞ