Advertisement

ನೊಂದವರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಿ: ವಸ್ತ್ರಮಠ

03:05 PM Jul 22, 2017 | Team Udayavani |

ಚಿತ್ರದುರ್ಗ: ಸಮಾಜದಲ್ಲಿನ ನೊಂದವರ ಕಣ್ಣೀರು ಹೊರೆಸುವ ಕೆಲಸಕ್ಕೆ ಪ್ರಜ್ಞಾವಂತ ಸಮಾಜ ಕೈಜೋಡಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಹೇಳಿದರು.

Advertisement

ತಾಲೂಕಿನ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಶುಕ್ರವಾರ ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಿರಾಶ್ರಿತರು ಎನ್ನುವ ಭಾವನೆ ಬೇಡ. ಇಲ್ಲಿ ಮನೆಗಿಂತ ಹೆಚ್ಚಿನ ಸುಂದರ, ಸ್ವತ್ಛ ಪರಿಸರವಿದೆ. ಮನೆಗೆ ಹೋಗಲು ಇಷ್ಟವಿಲ್ಲದವರು ಇಲ್ಲೇ ಆರಾಮವಾಗಿದ್ದಾರೆ. ಭಜನೆ, ಧ್ಯಾನ, ಪುಸ್ತಕ ಓದುವ ಹವ್ಯಾಸ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ನೆಮ್ಮದಿ ಜೀವನ ಸಾಗಿಸಬಹುದು ಎಂದರು.

ಇಲ್ಲಿನ ಕೆಲವರಿಗೆ ವೃದ್ಧಾಪ್ಯ ವೇತನ ಸಿಕ್ಕಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಅದಕ್ಕಾಗಿ ಪಟ್ಟಿ ತಯಾರಿಸಿ ಪರಿಶೀಲಿಸಿದ ನಂತರ ಶೀಘ್ರ ವೃದ್ಧಾಪ್ಯ ವೇತನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವಕಾಶವಿದ್ದರೆ ಬೇರೆ ಸೌಲಭ್ಯಗಳನ್ನು ಕೊಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್‌.ಎಸ್‌.ಪರಮೇಶ್ವರಪ್ಪ ಮಾತನಾಡಿ, ಇಲ್ಲಿರುವ ಯಾರೂ ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರ ನಿಮ್ಮ ಜತೆಗೆ
ಇದೆ. ವಿವಿಧ ಇಲಾಖೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲು ಅವಕಾಶವಿದೆ. ನಿಮ್ಮಂತವರು ನೆಮ್ಮದಿಯಿಂದ ಬದುಕಲು ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶ್ರೇಣಿ ನ್ಯಾಯಾಧೀಶಎಸ್‌.ಆರ್‌. ಡಿಂಡಲಕೊಪ್ಪ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವುಯಾದವ್‌, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಿ. ವೈಶಾಲಿ, ಡಿಡಿಆರ್‌ಸಿ ನೋಡಲ್‌ ಅಧಿಕಾರಿ ಮಂಜುನಾಥ ಎಸ್‌.ನಾಡರ್‌, ನಿರಾಶ್ರಿತರ ಕೇಂದ್ರದ ಅಧೀಕ್ಷಕ ಮಹಾದೇವಯ್ಯ ಇದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಿವೃತ್ತ ನೌಕರರ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ನಿರಾಶ್ರಿತರು ಎನ್ನುವ ಭಾವನೆ ಬೇಡ. ಇಲ್ಲಿ ಮನೆಗಿಂತ ಹೆಚ್ಚಿನ ಸುಂದರ, ಸ್ವತ್ಛ ಪರಿಸರವಿದೆ. ಮನೆಗೆ ಹೋಗಲು ಇಷ್ಟವಿಲ್ಲದವರು ಇಲ್ಲೇ ಆರಾಮವಾಗಿದ್ದಾರೆ. ಭಜನೆ, ಧ್ಯಾನ, ಪುಸ್ತಕ ಓದುವ ಹವ್ಯಾಸ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ನೆಮ್ಮದಿ ಜೀವನ ಸಾಗಿಸಬಹುದು. 
ನ್ಯಾ| ಎಸ್‌.ಬಿ. ವಸ್ತ್ರಮಠ

Advertisement

Udayavani is now on Telegram. Click here to join our channel and stay updated with the latest news.

Next