Advertisement

BJP ಹೈಕಮಾಂಡ್‌ ನೇಮಕ ಮಾಡಿದ ಮೇಲೆ ಎಲ್ಲರೂ ಒಪ್ಪಬೇಕು: ಶ್ರೀರಾಮುಲು

09:57 PM Nov 20, 2023 | Team Udayavani |

ಬೆಂಗಳೂರು: ಯಾರಿಗೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಹೈಕಮಾಂಡ್‌ ಒಂದು ಬಾರಿ ರಾಜ್ಯಾಧ್ಯಕ್ಷರ ನೇಮಕ ಮಾಡಿದ ಮೇಲೆ ಎಲ್ಲರೂ ಒಪ್ಪಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.

Advertisement

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬಹಿರಂಗ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಒಂದು ಬಾರಿ ಘೋಷಣೆ ಮಾಡಿದ ನಂತರ ಮುಗಿಯಿತು. ಬದಲಾಯಿಸಲು ಸಾಧ್ಯವಿಲ್ಲ. ಯತ್ನಾಳ್‌ ಅವರು ಹಿರಿಯ ನಾಯಕ. ಒಂದು ಬಾರಿ ಪಕ್ಷ ನಿರ್ಧಾರ ಮಾಡಿದ ಮೇಲೆ ಎಲ್ಲವನ್ನು ಸರಿ ಮಾಡಿಕೊಂಡು ಪಕ್ಷ ಮುನ್ನಡೆಸಬೇಕು ಎಂದರು.

ವಿಧಾನಸಭೆಯ ವಿಪಕ್ಷ ನಾಯಕರಾಗಿ ಆರ್‌. ಆಶೋಕ್‌ ನೇಮಕಗೊಂಡಿದ್ದಾರೆ. ಅದೇ ರೀತಿ ಬಿ.ವೈ. ವಿಜಯೇಂದ್ರ ಕಿರಿಯರು ಎಂಬುದನ್ನು ಒಪ್ಪಿಕೊಳ್ಳುವೆ. ಇಲ್ಲಿ ನನ್ನ ಅಥವಾ ಇನ್ನೊಬ್ಬರ ಇಷ್ಟ, ಕಷ್ಟ ಮುಖ್ಯವಲ್ಲ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು. ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ರಾಷ್ಟ್ರೀಯ ಪಕ್ಷದಲ್ಲಿ ಅದು ಪರಿಗಣನೆಗೆ ಬರುವುದಿಲ್ಲ ಎಂದು ತಿಳಿಸಿದರು.

ಈಗ ವಿಜಯೇಂದ್ರ ಅವರಿಗೆ ಹೈಕಮಾಂಡ್‌ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಾನು ಸೇರಿದಂತೆ ಎಲ್ಲರೂ ಅವರಿಗೆ ಸಹಕಾರ ಕೊಡಬೇಕು. ಆಗ ಮಾತ್ರ ಪಕ್ಷ ಕಟ್ಟಲು ಸಾಧ್ಯ. ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next