Advertisement

UV Fuison: ಪ್ರತಿಯೊಬ್ಬರೂ ಶಿಕ್ಷಕರೇ

04:02 PM Jan 24, 2024 | Team Udayavani |

ಎಲ್ಲರೂ ತಮ್ಮ ಜೀವನದ ಒಂದಲ್ಲ ಒಂದು ಹಂತದಲ್ಲಿ ಶಿಕ್ಷಕರಾಗಿರುತ್ತಾರೆ.

Advertisement

ಅಡುಗೆ ಹೇಗೆ ಮಾಡಬೇಕು, ಬಟ್ಟೆ ಹೇಗೆ ತೊಳೆಯಬೇಕು, ಮನೆ ಕಸ ಹೇಗೆ ಗೂಡಿಸಬೇಕು ಎಂದೆಲ್ಲ ಹೇಳಿಕೊಡುವ ಪ್ರತಿ ತಾಯಿಯು ಒಬ್ಬ ಶಿಕ್ಷಕಿ. ಹೊಲವನ್ನು ಹೇಗೆ ಉಳಿಮೆ ಮಾಡಬೇಕು, ಬೀಜಗಳನ್ನು ಹೇಗೆ ಬಿತ್ತಬೇಕು, ಬೆಳೆಯನ್ನು ಹೇಗೆ ಪೋಷಿಸಬೇಕು ಎಂದೆಲ್ಲ ತನ್ನ ಮಗ/ಮಗಳಿಗೆ ಹೇಳಿಕೊಡುವ ಪ್ರತಿಯೊಬ್ಬ ರೈತನು ಶಿಕ್ಷಕನೆ.

ಹಾಗೆ ಪ್ರತೀ ಕ್ಷೇತ್ರದ ಜ್ಞಾನವನ್ನು ತನ್ನ ಮುಂದಿನ ತಲೆಮಾರಿಗೆ ವರ್ಗಾಯಿಸುವ ಪ್ರತಿಯೊಬ್ಬರು ಶಿಕ್ಷಕರೆ. ಒಬ್ಬ ದರ್ಜಿ, ಒಬ್ಬ ಕಂಬಾರ, ಒಬ್ಬ ಕಮ್ಮಾರ, ಒಬ್ಬ ಅಕ್ಕಸಾಲಿಗ, ಒಬ್ಬ ಶಿಲ್ಪಿ, ಒಬ್ಬ ಎಂಜಿನಿಯರ್‌ ಒಬ್ಬ ವಿಜ್ಞಾನಿ ಹೀಗೆ ಎಲ್ಲರೂ ಶಿಕ್ಷಕರು. ಶಿಕ್ಷಣವನ್ನು ಈ ಅರ್ಥದಲ್ಲಿ ನೋಡುವುದು ತಿಳಿದುಕೊಳ್ಳುವುದು ಹಿಂದಿನಗಿಂತಲೂ ಇಂದು ಹೆಚ್ಚು ಅಗತ್ಯವಿದೆ.

ತಮಗೆ ಗೊತ್ತಿದೆ ನಮ್ಮಲ್ಲಿ ಗುರುಕುಲ ಪದ್ದತಿಯ ಶಿಕ್ಷಣವಿತ್ತೆಂದು. ಅಲ್ಲಿ ಶಿಕ್ಷಣವೆಂಬುದು ಕೇವಲ ಓದು ಬರಹವಾಗಿರಲಿಲ್ಲ ಬದಲಿಗೆ ಬದುಕಿಗೆ ಒಂದು ವೃತ್ತಿಯನ್ನು ಕೈಗೊಳ್ಳಲು ಬೇಕಾದ ತರಬೇತಿ ನೀಡುವುದು ಮತ್ತು ಜೀವನ ನಿರ್ವಹಣೆಯ ಕೌಶಲಗಳನ್ನು ಕಲಿಸುವುದು ಅಲ್ಲಿನ ವ್ಯವಸ್ಥೆಯಾಗಿತ್ತು. ಅಂತಹ ಶಿಕ್ಷಣ ನಮ್ಮ ವಿಶೇಷತೆಯಾಗಿತ್ತು.

ಆ ಕಾರಣಕ್ಕಾಗಿ ಭಾರತ ಕ್ರಿ.ಶ 1700ರ ವರೆಗೂ ಭಾರತ ಜಗತ್ತಿನ ಅತ್ಯಂತ ಶ್ರೀಮಂತ ದೇಶವಾಗಿತ್ತು. ಆದರೆ ತಮಗೆಲ್ಲ ಗೊತ್ತಿರುವಂತೆ ನಮ್ಮ ಇಂತಹ ಶ್ರೇಷ್ಠ ಶಿಕ್ಷಣ ವ್ಯವಸ್ಥೆ ಇಂದಿಲ್ಲ. ಹೀಗಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ಕೇವಲ ಅಕ್ಷರ ಅಭ್ಯಾಸ ಮಾಡಿಸುವ ಮತ್ತು ಪದವಿ ಪತ್ರ ನೀಡುವ ಕೇಂದ್ರಗಳಾದವು. ಇದರಿಂದ ನಮ್ಮಲ್ಲಿ ಒಂದು ಶ್ರೇಷ್ಠ ವ್ಯವಸ್ಥೆ ಇತ್ತು ಎಂಬುದನ್ನು ನಾವು ಮರೆತುಬಿಡುವಂತಾಯಿತು.

Advertisement

ಈಗ ಮತ್ತೆ ಭಾರತದ ಪಾರಂಪರಿಕ ಶಿಕ್ಷಣ ವ್ಯವಸ್ಥೆಯ ಸುವರ್ಣ ಯುಗ ಆರಂಭವಾಗಿದೆ. ಇಲ್ಲಿ ಕೌಶಲಗಳ ಕಲಿಕೆಗೆ ಆದ್ಯತೆ ದೊರೆಯಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಇದನ್ನೇ ಹೇಳಿದೆ. ಈ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ನಮ್ಮ ಕರ್ನಾಟಕ ಎಂಬುದು ಒಂದು ಹೆಗ್ಗಳಿಕೆಯಾಗಿತ್ತು.

ನಮಗೆ ನಿಜವಾಗಿ ಬೇಕಾಗಿರುವುದು ಗುಲಾಮಿ ಮನಸ್ಥಿತಿಯನ್ನು ಬೆಳೆಸುವ ಶಿಕ್ಷಣವಲ್ಲ, ಬದಲಾಗಿ ಸ್ವಾಭಿಮಾನದ ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸುವ ಶಿಕ್ಷಣ. ಹಾಗೆ ಶಿಕ್ಷಣವೆಂಬುದು ಕೇವಲ ದೇಶದ ಭೌತಿಕ ಸಂಪತ್ತನ್ನು ಹೆಚ್ಚಿಸುವ ಸಾಧನವಲ್ಲ ಅದು ನಮ್ಮ ಸಂಸ್ಕೃತಿಯನ್ನು ರಚಿಸುವ ಸಾಧನವು ಹೌದು. ಸತ್ಯ ನಿಷ್ಠೆ ಸದಾಚಾರ ಸಹಿಷ್ಣುತೆಗಳೇ ನಮ್ಮ ಸಂಸ್ಕೃತಿಯ ತಿರುಳು. ಸಾಧನೆಗೆ ಎದುರಾಗುವ ವಿಘ್ನಗಳನ್ನು ಮೆಟ್ಟಿನಿಂತು ನಮ್ಮ ಗುರಿಯಿಂದ ವಿಚಲಿತರಾಗದೆ ಸಾಗಬೇಕು. ಅಂತಹ ಭದ್ರತೆಯ ಮನಸ್ಥಿತಿ ಇದ್ದರೆ ಎಂತದೆ ಸೋಲು ನಮ್ಮನ್ನು ಅಧೀರರನ್ನಾಗಿಸುವುದಿಲ್ಲ. ಅದಕ್ಕೆ ತಾಜಾ ಉದಾಹರಣೆ ಭಾರತದ ಚಂದ್ರಯಾನ-3 ಯಶಸ್ಸು ಆದ್ದರಿಂದ ಪ್ರಯತ್ನಂ ಸರ್ವತ್ರ ಸಾಧನಂ ಅಂತಹ ಪ್ರಯತ್ನದ ಜತೆಗೆ ಯಶಸ್ಸಿನ ಬೆನ್ನತ್ತಿ ಸಾಗುತ್ತಿರುವ ನಿಮ್ಮೊಳಗೊಬ್ಬ…

-ಕಾರ್ತಿಕ್‌ ಹಳಿಜೊಳ

ಎಂ.ಎಂ., ಕಾಲೇಜು ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next