Advertisement
ಅಷ್ಟಮಿ, ತೆನೆ ಹಬ್ಬ, ಚೌತಿ ಹೀಗೆ ಸಾಲಾಗಿ ಹಬ್ಬಗಳು ಆಗಮಿಸುತ್ತಿರುವುದರಿಂದ ಹೊರ ಜಿಲ್ಲೆಗಳ ಹೂವು ಮಾರಾಟಗಾರರು ನಗರಕ್ಕಾಗಮಿಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಮೂಡೆ, ಹೂವು, ತರಕಾರಿ, ಸಿಹಿ ತಿಂಡಿ ವ್ಯಾಪಾರ ಜೋರಾಗಿ ನಡೆಯುತ್ತಿರುವುದು ಕಂಡುಬಂತು. ನಗರದ ಸೆಂಟ್ರಲ್ ಮಾರುಕಟ್ಟೆ, ಸ್ಟೇಟ್‌ಬ್ಯಾಂಕ್, ಕಾರ್‌ಸ್ಟ್ರೀಟ್ ಭಾಗದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು.
ಅಷ್ಟಮಿ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಸ್ಥಳೀಯ ಬೆಂಡೆ ಕೆ.ಜಿ.ಗೆ ಈ ಹಿಂದೆ 100 ರೂ. ಇದ್ದರೆ ಶನಿವಾರ 160 ರೂ.ಕ್ಕೆ ತಲುಪಿದೆ. ಸ್ಥಳೀಯ ಹಾಗಲಕಾಯಿ 70 ರೂ. ನಿಂದ 100, ಅಲಸಂಡೆ 50ರಿಂದ ನಿಂದ 75 ರೂ., ಮೆಣಸು 80 ರೂ. 100, ಸ್ಥಳೀಯ ಮುಳ್ಳುಸೌತೆ 50 ರೂ. ನಿಂದ 80 ರೂ. ಹೆಚ್ಚಾಗಿದೆ. ಮೂಡೆಗೆ ಹೆಚ್ಚಿದ ಬೇಡಿಕೆ
ಅಷ್ಟಮಿಗೆ ಮೂಡೆ ತಯಾರಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಮೂಡೆ ಖರೀದಿ ಸುವವರ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದಾಗಿ ಮೂಡೆ ದರದಲ್ಲಿ ಏರಿಕೆಯಾಗಿದೆ. 100 ರೂ.ಗೆ ದೊಡ್ಡ ಗಾತ್ರದ 5, ಸಣ್ಣ ಗಾತ್ರದ 7, ಹಲಸಿನ ಎಲೆಯ ಗುಂಡ 100 ರೂ.ಗೆ 8 ಲಭ್ಯವಾಗುತ್ತಿವೆ.
Related Articles
ಹೆಚ್ಚಾಗಿ ಬಳಸಲ್ಪಡುವ ಹೂ, ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಕೆಲವು ಹಣ್ಣುಗಳಿಗೆ 10ರಿಂದ 15 ರೂ. ನಷ್ಟು ಏರಿಕೆಯಾಗಿದೆ. ಆ್ಯಪಲ್ ಕಿ.ಗ್ರಾಂ. ಗೆ 100-120 ರೂ., ಮುಸಂಬಿ 30, ದ್ರಾಕ್ಷಿ 50, ಕಿತ್ತಳೆ 40, ದಾಳಿಂಬೆ 60, ಚಿಕ್ಕು 40, ಕಲ್ಲಂಗಡಿ 15, ಅನಾನಸು 30, ಚಿಪ್ಪಡ್ 20, ಪೇರಳೆ 60, ಬಾಳೆಹಣ್ಣು ಕದಳಿ 60 ರೂ. ಇದೆ. ಗುಲಾಬಿ 100, ಜೀನ್ಯ 100 ರೂ., ಶುಂಠಿ ಗಿಡಕ್ಕೆ 30, ಸೇವಂತಿಗೆ ಮಾರ್ ಒಂದಕ್ಕೆ 100 ರೂ., ಬಿಳಿ ಸೇವಂತಿಗೆ 80, ಕಾಕಡ ಮಲ್ಲಿಗೆ 60 ಇದೆ.
Advertisement
ಅಷ್ಟಮಿ, ಮೊಸರು ಕುಡಿಕೆ ಅಷ್ಟಮಿ ಹಾಗೂ ಮೊಸರು ಕುಡಿಕೆಗೆ ವಿವಿಧ ಸಂಘ – ಸಂಸ್ಥೆಗಳ ಯುವಕರು ಸಿದ್ಧತೆ ನಡೆಸುತ್ತಿದ್ದಾರೆ. ರವಿವಾರ ಶ್ರೀ ಕ್ಷೇತ್ರ ಕದ್ರಿ ಹಾಗೂ ವಿವಿಧ ಭಾಗಗಳಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ಹಾಗೂ ಇತರ ಕಾರ್ಯಕ್ರಮಗಳು, ಸೋಮವಾರ ಮೊಸರು ಕುಡಿಕೆ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಲಿವೆ.