Advertisement
ಪಾಲಿಕೆಯ 39ನೇ ವಾರ್ಡ್ ಆಗಿರುವ ಫಳ್ನೀರ್‌ನಲ್ಲಿ ಐದು ವರ್ಷದ ಅವಧಿಯಲ್ಲಿ ಗಮನಾರ್ಹ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಆಗಿರುವುದು ಕಾಣಿಸುತ್ತದೆ. ಏಕೆಂದರೆ, ಈ ವಾರ್ಡ್ ನಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಕೋಟಿ ಚೆನ್ನಯ ವೃತ್ತದವರೆಗೆ ಮಂಗಳೂರಿನಲ್ಲಿಯೇ ಮಾದರಿಯಾಗಿರುವ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆಕರ್ಷಕ ವಿದ್ಯುತ್ ದೀಪಗಳ ವ್ಯವಸ್ಥೆಯ ಮೂಲಕ ಈ ರಸ್ತೆ ಗಮನ ಸೆಳೆಯುತ್ತಿದೆ. ಈ ರಸ್ತೆಯ ಕೆಲ ವೆಡೆ ಫುಟ್‌ಪಾತ್ ಹಾಗೂ ಒಳಚರಂಡಿ ಕಾಮಗಾರಿ ಮಾಡಲಾಗಿದೆಯಾ ದರೂ, ಇನ್ನೂ ಇಲ್ಲಿ ಕಾಮಗಾರಿ ನಡೆಯಲು ಬಾಕಿ ಇವೆ. ಅದು ಕೂಡ ಪೂರ್ಣವಾದರೆ ಇದು ಮಾದರಿ ರಸ್ತೆಯಾಗಿ ಇನ್ನಷ್ಟು ಗಮನಸೆಳೆಯುವುದರಲ್ಲಿ ಅನು ಮಾನವಿಲ್ಲ.
ಈ ವಾರ್ಡ್‌ನಲ್ಲಿ ಬಹುತೇಕ ಒಳರಸ್ತೆಗಳು ಕಾಂಕ್ರೀಟ್ ಭಾಗ್ಯ ಕಂಡಿಲ್ಲ; ಕನಿಷ್ಠ ಡಾಮರು ರಸ್ತೆಯ ಹೊಂಡ ಮುಚ್ಚುವ ಕಾರ್ಯವೂ ಇಲ್ಲಿ ಸಮರ್ಪಕವಾಗಿ ನಡೆದಿಲ್ಲ ಎಂಬುದು ಕೆಲವರು ದೂರು. ವೆಲೆನ್ಸಿಯಾದಿಂದ ಗೋರಿಗುಡ್ಡೆ ರಸ್ತೆ ಸೇರಿದಂತೆ ಬಹುತೇಕ ಒಳರಸ್ತೆಗಳಿಗೆ ಕಾಂಕ್ರೀಟ್ ಹಾಕಿದ್ದರೆ ವಾಹನ ಸವಾರರಿಗೆ ಉಪಯೋಗವಾಗುತ್ತಿತ್ತು ಎಂಬುದು ಅವರ ಆಗ್ರಹ.
Related Articles
Advertisement
ಪ್ರಮುಖ ಕಾಮಗಾರಿ– ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಕೋಟಿ ಚೆನ್ನಯ ವೃತ್ತದವರೆಗೆ ಮಾದರಿ ರಸ್ತೆ ನಿರ್ಮಾಣ
– ವೆಲೆನ್ಸಿಯಾದಲ್ಲಿ ವಾರ್ಡ್ ಕಚೇರಿ ನಿರ್ಮಾಣ
– ವೆಲೆನ್ಸಿಯಾದಲ್ಲಿ ಪಾರ್ಕ್ ಅಭಿವೃದ್ಧಿ
– ಜೋಸೆಫ್ ನಗರದಲ್ಲಿ ರಸ್ತೆ ಅಭಿವೃದ್ಧಿ
– ಮರಿಯಾ ನಗರದಲ್ಲಿ ರಸ್ತೆ ಅಭಿವೃದ್ಧಿ
– ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸೂಕ್ತ ಪೈಪ್‌ಲೈನ್
– ಬಹುತೇಕ ಒಳರಸ್ತೆಗಳ ಅಭಿವೃದ್ಧಿ ಫಳ್ನೀರ್ ವಾರ್ಡ್
ಭೌಗೋಳಿಕ ವ್ಯಾಪ್ತಿ: ಅತ್ತಾವರ ಸರಕಾರಿ ಶಾಲೆಯ ಹಿಂಭಾಗದಿಂದ ನಂದಿಗುಡ್ಡ ಸರ್ಕಲ್, ಸೈಂಟ್ ಜೋಸೆಫ್ ನಗರ, ಜೆಪ್ಪು ಸೆಮಿನರಿ, ಬಿ.ವಿ ರೋಡ್, ರೋಶನಿ ನಿಲಯ, ಸೂಟರ್‌ಪೇಟೆ 1 ಹಾಗೂ 2ನೇ ಕ್ರಾಸ್, ಗೋರಿಗುಡ್ಡೆ, ನೆಹರೂ ರೋಡ್‌ನಿಂದಾಗಿ ರಾ.ಹೆ. 66ಕ್ಕೆ ಸಂಪರ್ಕಿಸುವ ವ್ಯಾಪ್ತಿಯವರೆಗೆ ಈ ವಾರ್ಡ್ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ. ಒಟ್ಟು ಮತದಾರರು 6500
ನಿಕಟಪೂರ್ವ ಕಾರ್ಪೊರೇಟರ್-ಜೆಸಿಂತಾ ವಿಜಯ ಆಲ್ಫೆ†ಡ್ (ಕಾಂಗ್ರೆಸ್-ಮಾಜಿ ಮೇಯರ್) “ಸಮಗ್ರ ವಾರ್ಡ್ ಅಭಿವೃದ್ಧಿ’
ವಾರ್ಡ್‌ನ ಸರ್ವತೋಮುಖ ಅಭಿವೃದ್ಧಿಗೆ ವಿಶೇಷವಾಗಿ ಶ್ರಮ ವಹಿಸಿದ್ದೇನೆ. ರೋಶನಿ ನಿಲಯ ಮುಂಭಾಗದಲ್ಲಿ ಮಾದರಿ ರಸ್ತೆ, ಪಾರ್ಕ್ ಸಹಿತ ವಿವಿಧ ಒಳರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಜನವಸತಿ ಸ್ಥಳದ ಬಹುತೇಕ ಸಮಸ್ಯೆ ನಿವಾರಣೆ ಹಾಗೂ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಈ ಮೂಲಕ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
-ಜೆಸಿಂತಾ ವಿಜಯ ಅಲ್ಫ್ರೆಡ್, - ದಿನೇಶ್ ಇರಾ