Advertisement

ಅಂತೂ ಕಣಿವೆ ರಾಜ್ಯ ಜಿಎಸ್‌ಟಿ ಬಸ್ಸೇರಿತು

09:39 AM Jul 08, 2017 | |

ಶ್ರೀನಗರ/ಹೊಸದಿಲ್ಲಿ: ದೇಶಾದ್ಯಂತ ಜಾರಿಯಾದ ಏಕರೂಪದ ತೆರಿಗೆ ವ್ಯವಸ್ಥೆಗೆ ಇದೀಗ ಜಮ್ಮು ಮತ್ತು ಕಾಶ್ಮೀರವೂ ಸೇರ್ಪಡೆಗೊಂಡಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಕಣಿವೆ ರಾಜ್ಯ ಜಿಎಸ್‌ಟಿ ವ್ಯಾಪ್ತಿಗೆ ಬಂದಿದೆ.

Advertisement

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರಕ್ಷಿಸುವಂಥ ಆದೇಶಕ್ಕೆ ಶುಕ್ರವಾರ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಅಂಕಿತ ಹಾಕಿದ್ದು, ಅದರ ಬೆನ್ನಲ್ಲೇ ರಾಜ್ಯ ವಿಧಾನಸಭೆಯಲ್ಲಿ ಜಿಎಸ್‌ಟಿ ವಿಧೇಯಕ ಅಂಗೀಕಾರವಾಗಿದೆ.
ಪಿಡಿಪಿ-ಬಿಜೆಪಿ ಸರಕಾರವು ರಾಜ್ಯದ ವಿಶೇಷ ಸ್ಥಾನಮಾನವನ್ನು ಹೀಗಳೆಯುತ್ತಿದೆ ಎಂದು ಆರೋಪಿಸಿ ವಿಪಕ್ಷಗಳೆಲ್ಲ ಸಭಾತ್ಯಾಗ ಮಾಡಿ ದರೂ, ಅದನ್ನು ಲೆಕ್ಕಿಸದೇ ವಿಧೇಯಕ ಅಂಗೀ ಕರಿಸಲಾಯಿತು. ಈ ಮೂಲಕ ಜಿಎಸ್‌ಟಿ ವ್ಯಾಪ್ತಿಗೆ ಸೇರ್ಪಡೆಯಾದ ಕೊನೆಯ ರಾಜ್ಯ ಎಂಬ ಹೆಗ್ಗಳಿಕೆಗೆ ಜಮ್ಮು-ಕಾಶ್ಮೀರ ಪಾತ್ರವಾ ಯಿತು. ಈ ಕುರಿತು ಮಾತನಾಡಿದ ಸಿಎಂ ಮೆಹಬೂಬಾ ಮುಫ್ತಿ, “ದೇಶಕ್ಕೆ ಒಳ್ಳೆಯದಾ ಗಿರುವ ಯಾವುದೇ ವಿಚಾರವು ಜಮ್ಮು-ಕಾಶ್ಮೀರಕ್ಕೆ ಕೆಟ್ಟದ್ದು ಆಗಲು ಸಾಧ್ಯವಿಲ್ಲ’ ಎಂದರು.

ಶಿಕ್ಷಣ ವೆಚ್ಚದಾಯಕವಲ್ಲ: ಏತನ್ಮಧ್ಯೆ, ಜಿಎಸ್‌ಟಿ ಜಾರಿ ಬಳಿಕ ಶಿಕ್ಷಣ ದುಬಾರಿಯಾಗಲಿದೆ ಎಂಬ ವಾದವನ್ನು ವಿತ್ತ ಸಚಿವಾಲಯ ಅಲ್ಲಗಳೆದಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲೂ ಬದಲಾವಣೆ ಮಾಡಿಲ್ಲ. ಶಾಲಾ ಬ್ಯಾಗ್‌ ಸೇರಿ ಕೆಲವು ವಸ್ತುಗಳ ತೆರಿಗೆ ಇಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿನ ಬಹುತೇಕ ಸೇವೆಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದಿದೆ.

ಚಿದಂಬರಂ ಅವರಿಗೆ ಜಿಎಸ್‌ಟಿ ಜಾರಿ ಸಫ‌ಲವಾಗಿದ್ದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಎಸ್‌ಟಿಯನ್ನು ಕುರುಡಾಗಿ ವಿರೋಧಿಸುವ ಬದಲು ಕಾಂಗ್ರೆಸ್‌, ಅದಕ್ಕೆ ಸಂಬಂಧಿಸಿದ ರಚನಾತ್ಮಕ ಸಲಹೆಗಳನ್ನು ನೀಡಬಹುದಲ್ಲವೇ?
ಎಂ. ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ಜೂನ್‌ನ ವೆಚ್ಚಕ್ಕೆ ಜುಲೈಯಲ್ಲಿ ಟ್ಯಾಕ್ಸ್‌!
ಜೂನ್‌ನಲ್ಲಿ ನೀವು ಮಾಡಿದ ವೆಚ್ಚಕ್ಕೆ ಜುಲೈನಲ್ಲಿ ಬಿಲ್‌ ಪಾವತಿಸುವುದಿದ್ದರೆ ಅದಕ್ಕೆ ಜಿಎಸ್‌ಟಿಯನ್ನು ಸೇರಿಸಿಯೇ ಪಾವತಿಸ ಬೇಕು. ಕ್ರೆಡಿಟ್‌ ಕಾರ್ಡ್‌, ದೂರವಾಣಿ ಸೇರಿದಂತೆ ಇತರೆ ಸೇವೆಗಳಿಗೆ ಸರಕು ಮತ್ತು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ. ನೀವು ವೆಚ್ಚ ಮಾಡಿದ್ದು ಜೂನ್‌ನಲ್ಲಾದರೂ, ಅದರ ಬಿಲ್‌ ಜುಲೈನಲ್ಲಿ ಸಿದ್ಧವಾಗಿದ್ದರೆ, ನೀವು ಬಿಲ್‌ ಮೇಲೆ ಜಿಎಸ್‌ಟಿಯನ್ನು ತೆರಲೇ ಬೇಕು ಎಂದು ಸರಕಾರ ಸ್ಪಷ್ಟಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next