Advertisement
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೇ ನಡೆಸುವ ವೇಳೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದು ಈವ ರೆಗೆ ಸ್ಪಷ್ಟವಾಗಿಲ್ಲ. ದೇಶದಲ್ಲಿಯೇ ಶೇ.50 ತ್ಯಾಜ್ಯ ವಿಂಗಡಣೆ ಮಾಡಿ ಸಂಸ್ಕರಿಸುತ್ತಿರುವುದು ಬೆಂಗಳೂರು ಮಾತ್ರ. ಜತೆಗೆ ಪಾಲಿಕೆಯಿಂದ ಏಳು ಭಾಗಗಳಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲಾಗಿದ್ದು, ನಿತ್ಯ 2 ಸಾವಿರ ಟನ್ ಹಸಿ ಕಸ ಸಂಸ್ಕರಿಸಲಾಗುತ್ತಿದೆ. ಆದರೂ ಬೆಂಗಳೂರಿಗೆ ಅತ್ಯಂತ ಕೆಳಗಿನ ಸ್ಥಾನ ನೀಡಲಾಗಿದೆ ಎಂದು ಬೇಸರಿಸಿದರು.ಕಳೆದ 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸ್ವತ್ಛತೆ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಸರ್ವೇ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಅದರಂತೆ ತ್ಯಾಜ್ಯ ವಿಂಗಡಣೆ ಮತ್ತು ಸಾಗಣೆಗೆ ಸಂಬಂಧಿಸಿದಂತೆ 1 ಸಾವಿರ ಅಂಕಗಳಿಗೆ 900 ಅಂಕ ನೀಡಲಾಗಿದೆ. ಜತೆಗೆ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ವಹಣೆ ಮತ್ತು ನಗರದಲ್ಲಿನ ಬ್ಲ್ಯಾಕ್‌ಸ್ಪಾಟ್‌ಗಳಿಗೆ ಸಂಬಂಧಿಸಿದಂತೆ 1 ಸಾವಿರ ಅಂಕಗಳಿಗೆ ಕೇವಲ 200 ಅಂಕ ನೀಡಲಾಗಿದೆ ಎಂಬ ಮಾಹಿತಿಯಿದೆ ಎಂದರು.