Advertisement

ಹಿಂದೂ ಸಮಾಜ ಎಂದೂ ಅಶಾಂತಿಯ ಬೆಂಬಲಿಸದು

08:20 AM Jul 24, 2017 | Team Udayavani |

ಮಂಗಳೂರು: ಮುಖ್ಯಮಂತ್ರಿ ತನ್ನ ಕುರ್ಚಿಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಆದರೆ ಹಿಂದೂ ಸಮಾಜ ಎಂದಿಗೂ ಅಶಾಂತಿಯನ್ನು ಬೆಂಬಲಿಸುವುದಿಲ್ಲ. ಇದನ್ನು ವಿರೋಧಿಸಿದ ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲಿಸುವ ಕಾರ್ಯವನ್ನು  ರಾಜ್ಯ ಸರಕಾರ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಅವರು ಆರೋಪಿಸಿದರು.

Advertisement

ರಾಜ್ಯ ಸರಕಾರದ ಹಿಂದೂ ದಮನ ನೀತಿಯನ್ನು ಖಂಡಿಸಿ ಮಂಗಳೂರು ವಿಶ್ವ ಹಿಂದೂ ಪರಿಷತ್‌-ಬಜರಂಗ ದಳ ರವಿವಾರ ನಗರದ ಸಂಘನಿಕೇತನದಲ್ಲಿ ಆಯೋಜಿಸಿದ್ದ ಖಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋ ಕಳ್ಳತನ, ಮಹಿಳೆಯರ ಮೇಲೆ ಕಿರುಕುಳದಂತಹ ಪ್ರಕರಣಗಳನ್ನು ಹಿಂದೂ ಸಂಘಟನೆಗಳು ಎಂದಿಗೂ ಸಹಿಸುವುದಿಲ್ಲ. ಇಂದು ಕೆಲವು ಮತಾಂಧ ಶಕ್ತಿಗಳು ಹಿಂದೂ ಸಮಾಜ ವನ್ನು ಒಡೆಯುವ ಪ್ರಯತ್ನ ಮಾಡು ತ್ತಿವೆ. ಆದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸುಳ್ಳು ಸುದ್ದಿಗೆ ಕಿವಿಕೊಡದೆ ಶಾಂತಿ ನೆಲೆಸಲು ಶ್ರಮಿಸಬೇಕಿದೆ ಎಂದರು.

ಆರ್‌ಎಸ್‌ಎಸ್‌ ಮಂಗಳೂರು ವಿಭಾಗ ಕಾರ್ಯವಾಹ ನಾ. ಸೀತಾರಾಮ ಮಾತನಾಡಿ, ಹಿಂದೂ ಸಮಾಜ ವನ್ನು ಒಡೆಯುವ ಪ್ರಯತ್ನ ಗಳು ನಡೆದರೂ ಅದಕ್ಕೆ ಏನೂ ಆಗುವುದಿಲ್ಲ. ಇದೊಂದು ಚಿರಂ ಜೀವಿ ಸಮಾಜವಾಗಿದೆ. ಪ್ರಸ್ತುತ ರಾಜ್ಯ ಸರಕಾರ ಹಿಂದೂಗಳ ಅಂತಃಶಕ್ತಿಯನ್ನು ಪರೀಕ್ಷೆ ಮಾಡುವ ಕಾರ್ಯ ಮಾಡುತ್ತಿದೆ. ಮತೀಯ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಒಗ್ಗಟ್ಟಾಗಬೇಕಿದೆ. ನಮ್ಮ ಬದ್ಧತೆ, ನಿಷ್ಠೆಯ ಆತುರತೆಯೇ ಕೆಲವೊಂದು ಅವಘಡಗಳಿಗೆ ಕಾರಣವಾಗುತ್ತಿದ್ದು, ಈ ಕುರಿತು ಎಚ್ಚರಿಕೆಯ ಅಗತ್ಯವಿದೆ ಎಂದು ಹೇಳಿದರು.

ಬಜರಂಗ ದಳ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ, ವಿಹಿಂಪ ದ.ಕ. ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಕಾರ್ಯದರ್ಶಿ ಗೋಪಾಲ ಕುತ್ತಾರ್‌, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್‌ ಉಪಸ್ಥಿತರಿದ್ದರು.

ಪೋಸ್ಟ್‌ಕಾರ್ಡ್‌ ಚಳವಳಿ
ಹಿಂದೂ ದಮನ ನೀತಿಯ ವಿರುದ್ಧ ರಾಜ್ಯಪಾಲರಿಗೆ ಪೋಸ್ಟ್‌ಕಾರ್ಡ್‌ ಚಳವಳಿಗೆ ಚಾಲನೆ ನೀಡಲಾಯಿತು. ಆರಂಭ ದಲ್ಲಿ ಮೃತ ಶರತ್‌ ಮಡಿವಾಳ ಅವರಿಗೆ ಶ್ರದ್ಧಾಂಜಲಿ ಅರ್ಪಿಸ ಲಾಯಿತು. ವಿಭಾಗ ಸಂಯೋಜಕ ಸುನಿಲ್‌ ಕೆ.ಆರ್‌. ಖಂಡನಾ ನಿರ್ಣಯ ವಾಚಿಸಿದರು.

Advertisement

ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ ಸ್ವಾಗತಿಸಿದರು. ವಾಸುದೇವ ಗೌಡ ಅವರು ವಂದಿಸಿದರು. ಬಜರಂಗ ದಳ ಜಿಲ್ಲಾ ಸಹ ಕಾರ್ಯ ದರ್ಶಿ ಶಿವಾನಂದ ಮೆಂಡನ್‌ ಕಾರ್ಯ ಕ್ರಮ ನಿರ್ವಹಿಸಿದರು.

ಖಂಡನಾ ನಿರ್ಣಯ
ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕು, ಹಿಂದೂ ನಾಯಕರಾದ ಶರಣ್‌ ಪಂಪು ವೆಲ್‌, ಸತ್ಯಜಿತ್‌ ಸುರತ್ಕಲ್‌, ಮುರಳಿಕೃಷ್ಣ ಹಸಂತಡ್ಕ, ಹರೀಶ್‌ ಪೂಂಜ, ಪ್ರದೀಪ್‌ ಪಂಪ್‌ವೆಲ್‌ ಅವರ ವಿರುದ್ಧ ದಾಖಲಾದ ಸುಳ್ಳು ಮೊಕದ್ದಮೆಗಳನ್ನು ಕೂಡಲೇ ಹಿಂಪಡೆಯಬೇಕು. ಹಿಂದೂ ನಾಯಕರ ಮೇಲೆ ಗೂಂಡಾ ಕಾಯ್ದೆಯನ್ನು ಹೇರುವ ಪ್ರಯತ್ನವನ್ನು ತತ್‌ಕ್ಷಣ ಕೈಬಿಡಬೇಕು. ರಾಜ್ಯ ಸರಕಾರ ಹಿಂದೂ ದಮನ ನೀತಿ, ಪೊಲೀಸ್‌ ಇಲಾಖೆಯಿಂದ ನಡೆಯು ತ್ತಿರುವ ತಾರತಮ್ಯ ನೀತಿಯನ್ನು ತತ್‌ಕ್ಷಣ ನಿಲ್ಲಿಸಬೇಕು ಎಂಬ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next