Advertisement

ಚಮಕ್‌ಗೆ ಪೂಜೆ ಆಯ್ತು

11:19 AM Apr 08, 2017 | |

“ಮುಗುಳು ನಗೆ’ ಚಿತ್ರ ಬಹುತೇಕ ಮುಗಿಯುತ್ತಾ ಬಂದಿದೆ. ಹೀಗಿರುವಾಗಲೇ ಗಣೇಶ್‌ ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಅದೇ “ಚಮಕ್‌’. “ಸಿಂಪಲ್‌’ ಸುನಿ ನಿರ್ದೇಶನದ ಒಂದು ಚಿತ್ರದಲ್ಲಿ ಗಣೇಶ್‌ ನಟಿಸುತ್ತಾರೆ ಮತ್ತು ಆ ಚಿತ್ರಕ್ಕೆ “ಚಮಕ್‌’ ಎಂಬ ಹೆಸರಿಡಲಾಗಿದೆ ಎಂಬ ಸುದ್ದಿ ಕಳೆದ ವರ್ಷದ್ದು. ಈಗ ಆ ಚಿತ್ರಕ್ಕೆ ಚಾಲನೆ ಸಿಕ್ಕಿದೆ. 

Advertisement

ಗುರುವಾರ ಬೆಳಿಗ್ಗೆ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿದಿದೆ. ಇನ್ನು ಚಿತ್ರದ ಚಿತ್ರೀಕರಣ ಶುರುವಾಗುವುದೊಂದೇ ಬಾಕಿ. ಅದೂ ಸಹ ಸದ್ಯದಲ್ಲೇ ಆಗಲಿದೆ. “ಚಮಕ್‌’ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನಡಿ ಟಿ.ಆರ್‌. ಚಂದ್ರಶೇಖರ್‌ ನಿರ್ಮಿಸುತ್ತಿದ್ದಾರೆ. ಇದು ಅವರ ನಿರ್ಮಾಣದ ಮೊದಲ ಚಿತ್ರ. ಈ ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ.

ಇನ್ನು ಪ್ರಮುಖ ಪೋಷಕ ಪಾತ ರದಲ್ಲಿ ಸಾಧು ಕೋಕಿಲ ನಟಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಗಣೇಶ್‌ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದುವರೆಗೂ ಹೆಚ್ಚಾಗಿ ಲವ್ವರ್‌ ಬಾಯ್‌ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಗಣೇಶ್‌, ಇದೇ ಮೊದಲ ಬಾರಿಗೆ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ,

“ಚಮಕ್‌’ ಚಿತ್ರವನ್ನು ಸುನಿ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಕಥೆ, ಚಿತ್ರಕಥೆಯನ್ನೂ ಅವರೇ ರಚಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಅವರು ಸಂಗೀತ ಸಂಯೋಜಿಸುತ್ತಿದ್ದು, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿ ಅರ್ಜುನ್‌ ಮತ್ತು ಸಂತೋಷ್‌ ಇಬ್ಬರೂ ಸುನಿ ಜೊತೆಗೆ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next