Advertisement
ಮುಂದಿನ ವಿಧಾನ ಸಭಾ ಚುನಾವಣೆ ಮುನ್ನ ಡಾಂಬರು ಕಾಣಬಹುದು ಎಂಬ ಆಶಯವನ್ನು ಪುರನಾಗರಿಕರು ವ್ಯಕ್ತಪಡಿಸಿದ್ದಾರೆ. ಮಾಗಡಿ ಪಟ್ಟಣದ ತಿರುಮಲೆ ಹೊಸ ಬಡಾವಣೆ 1972ರಲ್ಲಿ ಪುರಸಭೆ ವತಿಯಿಂದ ಪ್ರಥಮವಾಗಿ ನಿರ್ಮಿಸಿ, ನಿವೇಶನ ಹಂಚಿಕೆ ಮಾಡಿದ್ದರು. ಇತಿಹಾಸ ಪ್ರಸಿದ್ಧ ಮಾಂಡವ್ಯ ಕ್ಷೇತ್ರದ ತಿರುಮಲೆ ರಂಗನಾಥಸ್ವಾಮಿ ಬಡಾವಣೆ ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿನವಾಗಿದೆ. ಈ ಬಡಾವಣೆಯ ನಾಗರಿಕರು ತುಂಬ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಗಳ ನಿವಾರಣೆಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪುರ ನಾಗರಿಕರು ಆರೋಪಿಸಿದ್ದಾರೆ.
Related Articles
Advertisement
ನಿತ್ಯ ಈ ರಸ್ತೆಯಲ್ಲಿ ಪ್ರಸಿದ್ಧ ರಂಗನಾಥಸ್ವಾಮಿ ದರ್ಶನಕ್ಕೆ ಭಕ್ತರ ದಂಡೇ ಆಗಮಿಸುತ್ತದೆ. ರಸ್ತೆ ಬದಿಯಲ್ಲಿ ಮುಳ್ಳಿನ ಬೇಲಿ ಬೆಳೆದು ನಿಂತಿದ್ದು, ನಗರದಿಂದ ಬರುವ ಜನರು ಈ ರಸ್ತೆ ಬದಿ ಗಮನಿಸಿ, ಕಾಡಿನಂತೆ ಬಾಸವಾಗುತ್ತಿದೆ ಎಂಬ ನಗೆಪಾಟಿಲಿಗೆ ಪುರಸಭೆ ಒಳಗಾಗಿದೆ. ದೂರದೃಷ್ಟಿಯಿಂದ ನಿರ್ಮಾಣವಾಗಿರುವ ಈ ಬಡಾವಣೆಯ ಸ್ಥಿತಿಯೇ ಹೀಗಾದರೆ, ಉಳಿದ ಬಡಾವಣೆಗಳ ಸ್ಥಿತಿಯೂ ಹೊರತಾಗಿಲ್ಲ. ಅದರಲ್ಲೂ ಖಾಲಿ ನಿವೇಶನಗಳಂತೂ ನಿಜಕ್ಕೂ ವಿಷಜಂತುಗಳ ಆವಾಸ ಸ್ಥಾನವಾಗಿದೆ.
ಮೂಲ ಸೌಲಭ್ಯ ಕಲ್ಪಿಸದಿದ್ದರೆ ಪ್ರತಿಭಟನೆ : ಕಾಲಕಾಲಕ್ಕೆ ಮನೆ, ನೀರು, ಒಳಚರಂಡಿ ಸೇರಿದಂತೆ ಇತರೆ ಕಂದಾಯವನ್ನು ಪುರಸಭೆಗೆ ಜಮಾ ಮಾಡಿಕೊಂಡು ಬರುತ್ತಿದ್ದೇವೆ. ಆದರೂ, ಪುರಸಭೆ ತಮಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುತ್ತಿಲ್ಲ. ಹೀಗೆ ಮುಂದುವರಿದರೆ, ಬಡಾವಣೆ ನಾಗರಿಕರಲ್ಲೆರೂ ಸೇರಿ ಪುರಸಭೆ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದ ನಾಗರಿಕರಾದ ರಮೇಶ್, ಶಿವರಾಜು, ರಾಮಣ್ಣ, ನವೀನ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ರಸ್ತೆ ಡಾಂಬರೀಕರಣಕ್ಕೆ 40 ಲಕ್ಷ ರೂ. ಹಣ ಮೀಸಲಿಡಲಾಗಿದೆ. ಮುಖ್ಯಾಧಿಕಾರಿಗಳು ವರ್ಗಾವಣೆಯಾಗಿರುವುದರಿಂದ ವಿಳಂಬವಾಗಿದೆ. ನೂತನ ಮುಖ್ಯಾಧಿಕಾರಿಗಳು ಬರಲಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಸಭೆ ಕರೆದು, ರಸ್ತೆ ಡಾಂಬರೀಕರಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು. – ಎ.ಮಂಜುನಾಥ್, ಶಾಸಕ, ಮಾಗಡಿ ವಿಧಾನಸಭಾ ಕ್ಷೇತ್ರ
ರಂಗನಾಥಸ್ವಾಮಿ ಬಡಾವಣೆಗೆ ಡಾಂಬರೀಕರಣಕ್ಕೆ ಅನುದಾನ ಮಂಜುರಾಗಿದೆ. ಕೆಲವು ತಾಂತ್ರಿಕತೆ ಸಮಸ್ಯೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು. ಖಾಲಿ ನಿವೇಶನದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಪುರಸಭೆ ವತಿಯಿಂದ ನಿವೇಶನ ಮಾಲಿಕರಿಗೆ ನೋಟಿಸ್ ಜಾರಿ ಮಾಡಿ, ಗಿಡಗಂಟಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. – ವಿಜಯ ರೂಪೇಶ್, ಪುರಸಭಾ ಅಧ್ಯಕ್ಷೆ, ಮಾಗಡಿ
– ತಿರುಮಲೆ ಶ್ರೀನಿವಾಸ್