Advertisement
ಬೆಳಕು ಹರಿಯಲಿನಿಮ್ಮ ಕೋಣೆಗೆ ನೈಸರ್ಗಿಕ ಬೆಳಕಿಗೆ ಪ್ರವೇಶವಿದ್ದರೆ ಉತ್ತಮ. ಅದನ್ನು ಡಾರ್ಕ್ ಪರದೆಗಳಿಂದ ನಿರ್ಬಂಧಿಸಬೇಡಿ. ಸ್ಥಳವು ಹೆಚ್ಚು ಗಾಳಿಯಾಡಬಲ್ಲ ಮತ್ತು ಮುಕ್ತವಾಗಿರುವಂತೆ ಮಾಡಲು ನೈಸರ್ಗಿಕ ಬೆಳಕು ಬೀಳಲು ಬಿಡಿ. ಒಂದು ವೇಳೆ ನಿಮ್ಮ ಕಿಟಕಿ ಸೂರ್ಯನ ಬೆಳಕು ಬೀಳುವಷ್ಟು ದೊಡ್ಡದಾಗಿರದಿದ್ದರೆ, ನೀವು ಉತ್ತಮ ಬೆಳಕುಳ್ಳ ಬಲ್ಬ್ಗಳನ್ನು ಆರಿಸಿಕೊಳ್ಳಿ.
ನಿಮ್ಮ ಕೋಣೆಗೆ ಗಾಢವಾದ ಬಣ್ಣವನ್ನು ಆರಿಸಿಕೊಳ್ಳಿ. ಹೊಳಪು ಗೋಡೆಗಳು ಸರಳವಾದ, ಸ್ವತ್ಛವಾಗಿ ವರ್ಣರಂಜಿತ, ದಪ್ಪ ವಸ್ತುಗಳಿಗೆ ಅತ್ಯಾಧುನಿಕ ಹಿನ್ನೆಲೆಯನ್ನು ಸೃಷ್ಟಿಸುತ್ತವೆ.
Related Articles
ಜಾಗವನ್ನು ಬೆಳಗಿಸಲು ಗೋಡೆಗಳು ಮತ್ತು ಮಹಡಿಗಳನ್ನು ಬಿಳಿ ಬಣ್ಣದ ಪೇಯಿಂಟ್ ಮಾಡಿಕೊಳ್ಳಿ. ಬಿಳಿ ಬಣ್ಣ ಮಾಡುವುದರಿಂದ ಗೋಡೆಯ ಮೇಲಿನ ದೊಡ್ಡ ಕಲಾಕೃತಿಗಳು ಕಣ್ಣಿಗೆ ಕಟ್ಟುವಂತಿರುತ್ತವೆ. ಆ ರೀತಿಯಲ್ಲಿ ನೀವು ವರ್ಣರಂಜಿತ ಪೀಠೊಪಕರಣಗಳನ್ನು ಕೋಣೆಯ ಕೇಂದ್ರ ಬಿಂದುವನ್ನಾಗಿ ಮಾಡಬಹುದು.
Advertisement
ಸೀಲಿಂಗ್ ಕುರ್ಚಿಗಳುಸೀಲಿಂಗ್ ಕುರ್ಚಿಗಳು ಸಣ್ಣ ಕೋಣೆಯನ್ನು ಅಲಂಕರಿಸುವ ಟ್ರೆಂಡ್ ಆಗಿದೆ. ಈ ಚಯರ್‌ಗಳು ಮನೆಗೆ ಒಳ್ಳೆಯ ವಿನ್ಯಾಸವನ್ನು ನೀಡುತ್ತದೆ ಮತ್ತು ಜಾಗವನ್ನು ಉಳಿಸುತ್ತದೆ. – ಪೂರ್ಣಿಮಾ ಪೆರ್ಣಂಕಿಲ