Advertisement
ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದ್ದರೂ, ರೈತರ ಜಮೀನಿನಲ್ಲಿ ಇದು ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿವಿಶ್ವವಿದ್ಯಾಲಯಗಳ ಸಾಮರ್ಥ್ಯ ಸುಧಾರಣೆ ಆಗಬೇಕಿದೆ ಎಂದ ಅವರು, ವಿಶ್ವವಿದ್ಯಾಲಯಗಳ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಮೌಲ್ಯಮಾಪನ ವ್ಯವಸ್ಥೆ
ಪರಿಚಯಿಸುವ ಅಗತ್ಯವಿದೆ. ಈ ಸಂಬಂಧ ನೀತಿಗಳಲ್ಲಿ ಬದಲಾವಣೆ ತರುವ ಚಿಂತನೆಯಿದೆ ಎಂದು ಹೇಳಿದರು. ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಆವರಣದಲ್ಲಿ ಮಂಗಳವಾರ ಕೃಷಿ ಇಂಜಿನಿಯರಿಂಗ್ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕೃಷಿ ಕ್ಷೇತ್ರ ಎದುರಿಸುತ್ತಿರುವ ಅತಿದೊಡ್ಡ ಸವಾಲು ನೀರಿನ ನಿರ್ವಹಣೆ ಮತ್ತು ಭೂಮಿಯ ಸದ್ಬಳಕೆ. ಇದಕ್ಕಾಗಿ ಈಗಿರುವ ನಮ್ಮ ನೀತಿಗಳು ಪರಿಹಾರ
ಆಗಬಹುದೇ? ಈ ಬಗ್ಗೆ ಚಿಂತನೆ ನಡೆಸುವ ಅವಶ್ಯಕತೆಯಿದೆ. ಅಷ್ಟೇ ಅಲ್ಲ, ಕೃಷಿ ವಿವಿಗಳ ದೃಷ್ಟಿಕೋನ ಕೂಡ ಬದಲಾಗಬೇಕು. ಕೃಷಿ ಎದುರಿಸುತ್ತಿರುವ ಈ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಈಗಾಗಲೇ ಘೋಷಿಸಿದಂತೆ ಮಾದರಿ ಕೃಷಿ ನೀತಿ ರೂಪಿಸಲು ಸಿದ್ಧತೆ ನಡೆಸಿದೆ. ಈ ಸಂಬಂಧ ಇಸ್ರೇಲ್‌ಗೆ ತೆರಳಿ, ಅಧ್ಯಯನ ಕೂಡ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಇಸ್ರೇಲ್‌ನಲ್ಲಿ ಶೇ. 60ರಷ್ಟು ಮರುಭೂಮಿ ಪ್ರದೇಶವಿದೆ. ಗರಿಷ್ಠ ಮಳೆ ಅಲ್ಲಿ ಸಾವಿರ ಮಿ.ಮೀ. ಕೂಡ ದಾಟುವುದಿಲ್ಲ. ಆದಾಗ್ಯೂ ಅಲ್ಲಿನ ನೀರಿನ
ನಿರ್ವಹಣಾ ವ್ಯವಸ್ಥೆ ಮತ್ತು ತಂತ್ರಜ್ಞಾನಗಳ ಸಮರ್ಪಕ ಬಳಕೆಯಿಂದ ಅತ್ಯಧಿಕ ಉತ್ಪಾದನೆ ಮಾಡಲಾಗುತ್ತಿದೆ. ನೀರಿನ ಮರುಬಳಕೆ ಪ್ರಮಾಣ ಅಲ್ಲಿ ಶೇ. 85ರಷ್ಟಿದ್ದು, ಇದನ್ನು ಶೇ. 90ಕ್ಕೆ ಹೆಚ್ಚಿಸುವ ಗುರಿಯನ್ನು ಇಸ್ರೇಲ್ ಹೊಂದಿದೆ. ಇದು ನಮಗೆ ಮಾದರಿ ಆಗಬೇಕು ಎಂದು ಹೇಳಿದರು.