Advertisement

ಟಾಟಾಗ್ರೂಪ್‌ನಿಂದ ಬ್ರಿಟನ್‌ನಲ್ಲಿ EV ಬ್ಯಾಟರಿ ಸ್ಥಾವರ

09:43 PM Jul 19, 2023 | Team Udayavani |

ನವದೆಹಲಿ: ಭಾರತೀಯ ಮೂಲದ ಉದ್ದಿಮೆ ದಿಗ್ಗಜ ಟಾಟಾ ಸಮೂಹ ಸಂಸ್ಥೆಯು ಮೊಟ್ಟ ಮೊದಲ ಬಾರಿಗೆ ಸಾಗರೋತ್ತರ ಗಿಗಾಫ್ಯಾಕ್ಟರಿ (ವಿದ್ಯುದೀಕರಣಕ್ಕೆ ಸಂಬಂಧಿಸಿದ ಬಿಡಿಭಾಗಗಳ ಉತ್ಪಾದನಾ ಘಟಕ) ಸ್ಥಾಪನೆಗೆ ಮುಂದಾಗಿದ್ದು, ಬ್ರಿಟನ್‌ನಲ್ಲಿ ಇ-ವಾಹನಗಳ ಬ್ಯಾಟರಿ ಉತ್ಪಾದನೆ ಘಟಕ ಸ್ಥಾಪನೆಗೆಂದು 5.2 ಶತಕೋಟಿ ಡಾಲರ್‌ಗಳ ಹೂಡಿಕೆ ಮಾಡಲಿದೆ.

Advertisement

ನೈಋತ್ಯ ಇಂಗ್ಲೆಂಡ್‌ನ‌ಲ್ಲಿರುವ ಸೋಮರ್‌ಸೆಟ್‌ನಲ್ಲಿ ಬ್ಯಾಟರಿಗಳ ಉತ್ಪಾದನಾ ಘಟಕ ಸ್ಥಾಪಿಸಲು ಉದ್ದೇಶಿಸಿ, ಟಾಟಾ ಸಮೂಹದ ವತಿಯಿಂದ ಹೂಡಿಕೆ ಮಾಡಲಾಗುತ್ತಿದೆ. ಇದು ಯುರೋಪಿನಲ್ಲೇ ಅತಿದೊಡ್ಡ ಇವಿ ಬ್ಯಾಟರಿ ಸೆಲ್‌ ಉತ್ಪಾದಕ ಘಟಕವಾಗಿರಲಿದೆ. ಈ ಹೂಡಿಕೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸುವುದರ ಜತೆಗೆ ಉದ್ಯೋಗ ಸೃಷ್ಟಿಯಲ್ಲೂ ಮಹತ್ವದ ಪ್ರಗತಿ ಸಾಧಿಸಲಿದೆ ಎಂದು ಟಾಟಾ ಅಧ್ಯಕ್ಷ ಚಂದ್ರಶೇಖರನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next