Advertisement
ಬಿಳಿ ಕೊಕ್ಕರೆ ಬೇಸಿಗೆ ಹಕ್ಕಿ.European-White Stork (Cocinia Ciconia) M -Vulture+ಉತ್ತರ ಭಾರತದ ಪೂರ್ವ ಭಾಗ ಹಾಗೂ ಪೆನ್ಸಿಲ್ವೇನಿಯಾದಿಂದ ಆರಂಭಿಸಿ- ಶ್ರೀಲಂಕಾವರೆಗೂ ಬೇಸಿಗೆ ಕಳೆಯಲು ಬರುತ್ತದೆ. ‘ಸಿಕೋನಿಡಿಯಾ’ ಕುಟುಂಬಕ್ಕೆ ಸೇರಿದ ಹಕ್ಕಿ ಇದು. ಉದ್ದ ಕಾಲು, ಉದ್ದ ಚುಂಚು, ಎತ್ತರದ ನಿಲುವು- ಹದ್ದಿಗಿಂತಲೂ ಒಂದು ಕೈ ಮೇಲು ಅನ್ನೋ ರೀತಿ ಇದೆ. ದೂರದಿಂದ ನೋಡಿದರೆ ಬಿಳಿಬಣ್ಣ ಎದ್ದು ಕಾಣುತ್ತದೆ. ಈ ಕಾರಣಕ್ಕೆ ಇದನ್ನು ಬಿಳಿ ಕೊಕ್ಕರೆ ಎಂದೂ ಕರೆಯುತ್ತಾರೆ. ಇದು ದೊಡ್ಡ ಕೊಕ್ಕಿನ ಹಕ್ಕಿ- ಅಂದರೆ ದೊಡ್ಡ ಬಿಳಿ ಕೊಕ್ಕರೆಗಿಂತ ಇದರ ಕೊಕ್ಕು ದೊಡ್ಡದು. ಬಾಲ ಮತ್ತು ರೆಕ್ಕೆಯ ತುದಿ ಕಪ್ಪಾಗಿರುತ್ತದೆ.
ಇದು ಏಕಾಂಗಿಯಾಗಿ ಅಥವಾ ಸಣ್ಣ ಗುಂಪಿನಲ್ಲಿ ಪ್ರವಾಸ ಮಾಡುತ್ತಿರುತ್ತದೆ. ಚುಂಚು ಉದ್ದ ಮತ್ತು ಚೂಪಾಗಿದ್ದರೂ ಇದರ ಬಣ್ಣ ಕಪ್ಪು ಮಿಶ್ರಿತ ಬೂದು ಬಣ್ಣದಿಂದ ಕೂಡಿರುತ್ತದೆ. ಕಾಲು ಮಾತ್ರ ಗುಲಾನಿ ಬಣ್ಣದ್ದು. ಇದರ ಬಾಲ ಕಪ್ಪಾಗಿ, ಚೂಪಾಗಿದೆ.
ದೊಡ್ಡ ಹಕ್ಕಿಯಾಗಿರುವುದರಿಂದ ಒಮ್ಮೆಲೆ ಹಾರದೇ, ಸ್ವಲ್ಪ ಸುತ್ತಿ ಮೇಲೇರಿ ಅನಂತರ ಕೆಲವೊಮ್ಮೆ ಗಾಳಿಯಲ್ಲಿ ತೇಲುತ್ತಾ ಇರುತ್ತದೆ. ಈ ಹಕ್ಕಿ ಹಾಗೂ ಹದ್ದಿನ ಹಾರಿಕೆಗೆ ತುಂಬಾ ಸಾಮ್ಯತೆ ಇದೆ. ಕೊಕ್ಕರೆಗಳಂತೆ ಇದಕ್ಕೂ ಸಹ ದೊಡ್ಡ ಕಾಲು, ಉದ್ದ ಕುತ್ತಿಗೆ, ಚೂಪಾದ ಕೊಕ್ಕು ಇದೆ. ಚಿಕ್ಕ ತಲೆ ಮತ್ತು ಸೂಕ್ಷ್ಮ ನೋಟದ ಹಕ್ಕಿ ಇದು. ಸಾಮಾನ್ಯವಾಗಿ ಗಂಡು -ಹೆಣ್ಣು ಒಂದೇ ಬಣ್ಣ. ಆದರೆ ಇತರ ಕೊಕ್ಕರೆಗಳಂತೆ ಗಂಡು ಹಕ್ಕಿ, ಹೆಣ್ಣಿಗಿಂತ ಆಕಾರದಲ್ಲಿ ದೊಡ್ಡದು ಮತ್ತು ಹೆಚ್ಚು ಭಾರದಿಂದ ಕೂಡಿದೆ. ವಿಶ್ರಾಂತಿ ಪಡೆಯುವಾಗ ಇದು ಕುತ್ತಿಗೆಯನ್ನು ಭುಜ¨ಲ್ಲಿ ಹುದುಗಿಸಿಕೊಳ್ಳುತ್ತದೆ. ಇದು ವಲಸೆ ಬರುವಾಗ 1,500 ರಿಂದ 3,000 ಮೀ. ಎತ್ತರದವರೆಗೂ ಹಾರುತ್ತದೆ. ವಿಶಾಲ ಹುಲ್ಲುಗಾವಲು ಗೂಡು ಕಟ್ಟಲು ಪ್ರಿಯವಾದ ಜಾಗ. ಪ್ರತಿ ಗೂಡೂ ಒಂದರಿಂದ 2 ಮೀಟರ್ ದೊಡ್ಡದು, 0.8 ರಿಂದ 1.5 ಮೀ.ಸುತ್ತಳತೆಯಿಂದ ಕೂಡಿರುತ್ತದೆ. ಗೂಡು ನಿರ್ಮಾಣಕ್ಕೆ ಜಾಗ ಆರಿಸುವಾಗ ಗಂಡು ಹೆಣ್ಣಿನ ವರ್ತನೆ -ಕೂಗು ಸಂಭಾಷಣೆ ಅಧ್ಯಯನಕ್ಕೆ ಅತಿ ಒಳ್ಳೆ ವಿಷಯ. ದಕ್ಷಿಣ ಯುರೋಪಿನಲ್ಲಿ ಜನವಸತಿಯ ಸಮೀಪದಲ್ಲೇ ಇದು ಗೂಡನ್ನು ಕಟ್ಟಿರುವುದು ಉಂಟು.
Related Articles
Advertisement
ಪಿ.ವಿ.ಭಟ್ ಮೂರೂರು