Advertisement

ಕೊರೊನಾ ವೈರಸ್‌; ಯೂರೋಪ್‌ ಬಾಕ್ಸಿಂಗ್‌ ಕೂಟ ರದ್ದು

01:52 PM Feb 28, 2020 | keerthan |

ನವದೆಹಲಿ: ಇಟಲಿಯಲ್ಲಿ ನಡೆಯಬೇಕಾಗಿರುವ ಯೂರೋಪ್‌ ವಲಯ ಬಾಕ್ಸಿಂಗ್‌ ಕೂಟವನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ (ಎಐಬಿಎ)
ರದ್ದುಪಡಿಸಿದೆ.

Advertisement

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೇಳಾಪಟ್ಟಿ ಪ್ರಕಾರ ಅಸ್ಸಿಸಿನಲ್ಲಿ ಬಾಕ್ಸಿಂಗ್‌ ಕೂಟ ನಡೆಯಬೇಕಿತ್ತು. ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಒಂದೊಂದೇ ರಾಷ್ಟ್ರಗಳಿಗೆ ನಿಧಾನವಾಗಿ ಹಬ್ಬುತ್ತಿದೆ.

ಈ ಬಗ್ಗೆ ಮಾತನಾಡಿದ ಎಐಬಿಎ ಹಂಗಾಮಿ ಅಧ್ಯಕ್ಷ ಡಾ ಮೊಹಮ್ಮೆದ್‌ ಮೌಸ್ಟಸನೆ “ಕೊರೊನಾ ವೈರಸ್‌ ಮಾರಕವಾಗಿ ಹಬ್ಬುತ್ತಿದೆ. ಇದೆಲ್ಲ ಕಾರಣಗಳಿಂದ ಕೂಟವನ್ನು ಮುಂದೂಡಲು ನಿರ್ಧರಿಸಿದ್ದೇವೆ. ಈ ವರ್ಷದ ಕೊನೆಯಲ್ಲಿ ಕೂಟವನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ತನಕ ಕೂಟ ನಡೆಸಲು ಸಾಧ್ಯವಾಗುವುದಿಲ್ಲ. ಕೂಟಕ್ಕೆ ಬರುವ ಸ್ಪರ್ಧಿಗಳ, ಸಿಬ್ಬಂದಿಗಳ ಆರೋಗ್ಯ ಮೊದಲು’ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್‌ ಇಟಲಿಯ ಸುತ್ತಲೂ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಇಟಲಿಯಲ್ಲಿರುವ ಭಾರತ ಬಾಕ್ಸಿಂಗ್‌ ತಂಡ ಶುಕ್ರವಾರ ಅಲ್ಲಿಂದ ತೆರಳಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next