ಸತ್ತ ಪ್ರಾಣಿಗಳ ಮಾಂಸವನ್ನು ತಿಂದು ಹಾಕುವ ಮೂಲಕ ಇದು ಪರಿಸರ ಸಂರಕ್ಷಣೆಯನ್ನು ಮಹತ್ವದ ಪಾತ್ರ ವಹಿಸುತ್ತದೆ….
Advertisement
ಇದು ಯುರೋಪ್ ಮತ್ತು ಏಷಿಯಾ ಖಂಡದಲ್ಲಿ ಕಾಣಸಿಗುವ ಸಿಂಹ ಮುಖದ ರಣಹದ್ದು. ಇದಕ್ಕೆ ಸಿಂಹಕ್ಕೆ ಇರುವಂತೆ ಕತ್ತಿನ ಮುಂಭಾಗದ ಸುತ್ತಲೂ ಬಿಳಿ ರೋಮ ಇರುತ್ತದೆ. ಭಾರತದ ಬಿಳಿ ಹದ್ದಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಿದೆ. ಶ್ರೀಲಂಕಾದಲ್ಲಿರುವ ಸಿನಿಮೊನ್ ಹೆಸರಿನ ಮರದ ತೊಗಟೆಯ ಬಣ್ಣ ಇದರ ರೆಕ್ಕೆಯನ್ನು ತುಂಬಾ ಹೋಲುತ್ತದೆ. ಸ್ವಲ್ಪ ಕೆಂಪು ಛಾಯೆಯ ಕಂದುಬಣ್ಣದ ರೆಕ್ಕೆ ಇದಕ್ಕಿದೆ. ಇದು ಹಾರುವಾಗ ರೆಕ್ಕೆಯ ಅಡಿಯಲ್ಲಿರುವ ಬಿಳಿಗೆರೆ ಮತ್ತು ಚುಕ್ಕಿ ಎದ್ದು ಕಾಣುತ್ತದೆ. ಎದೆಯ ಎರಡೂ ಪಾರ್ಶ್ವದಲ್ಲಿ ಗರಿಗಳಿಲ್ಲದ ಕೆಂಪು ಚರ್ಮ- ವರ್ತುಲಾಕಾರದಲ್ಲಿ ಇದೆ. ಭಾರತದ ಉದ್ದ ಕೊಕ್ಕಿನ ಬಿಳಿ ಕಾಲರಿನ ಹದ್ದಿನ ಗುಂಪಿನಲ್ಲೂ -ಎದೆ ಭಾಗದಲ್ಲಿ ಹೀಗೆ ಗರಿಗಳಿಲ್ಲದ ಎರಡು ವರ್ತುಲ ಇರುತ್ತದೆ.
ಈ ಹಕ್ಕಿಯು ಉತ್ತರಭಾಗದಲ್ಲಿ ಚಳಿ ಹೆಚ್ಚಾದರೆ, ರಕ್ಷಣೆ ಪಡೆಯಲು ದಕ್ಷಿಣದ ಕಡೆಗೆ ವಲಸೆ ಬರುತ್ತವೆ. ಇದರ ಎತ್ತರ ಸುಮಾರು 110 ರಿಂದ 122 ಸೆಂ.ಮೀ. ತಲೆ ಬಿಳಿ ಬಣ್ಣದಿಂದ ಕೂಡಿರುತ್ತದೆ. ಕಣ್ಣಿನ ಸುತ್ತ -ಬೂದು ಬಣ್ಣದ ಮಚ್ಚೆ ಇದೆ. ತಲೆ ಹಳದಿಛಾಯೆಯ ಬಿಳಿಬಣ್ಣ ಇದೆ. ರೆಕ್ಕೆಯ ಅಗಲ 2.3 ಇಂದ 2.8 ಸೆಂ.ಮೀ. ಗಂಡು ಹಕ್ಕಿ 6.2 ದಿಂದ 10 ಕೆ.ಜಿ ಮತ್ತು ಹೆಣ್ಣು ಹಕ್ಕಿ 5.6 ರಿಂದ 11 ಕೆ.ಜಿ ಭಾರ ಇರುತ್ತದೆ.
ಭಾರತದ ರಣ ಹದ್ದಿನಂತೆ ಇದಕ್ಕೆ ಉದ್ದ ಕುತ್ತಿಗೆ ಇದೆ. ಕುತ್ತಿಗೆಯ ಹಿಂಭಾಗದ ಕೂದಲಿನಂತೆ ಇರುವ ಗರಿ ಕಿರೀಟದಂತೆ ತೋರುತ್ತದೆ. ಬಿಳಿ ಕಾಲರಿನ ರಣಹದ್ದು ಇದರ ಹತ್ತಿರದ ಸಂಬಂಧಿ. ನೀಳ ಕತ್ತು , ಕುಳ್ಳ ಕಾಲು, ಕಾಲಿನ ತುದಿ ಭಾಗದಲ್ಲಿ ರೋಮದಂಥ ಗರಿ ಇಲ್ಲ. ಕಾಲಿನ ಬುಡದಲ್ಲಿ ಕಂದು ಬಣ್ಣದ ಗರಿ ಇದರ ಕಾಲನ್ನು ಮುಚ್ಚಿದಂತೆ ಕಾಣುತ್ತದೆ.
ರಣಹದ್ದಿನಂತೆ -ಇದು ಸಹ ಪರಿಸರವನ್ನು ಶುಚಿಗೊಳಿಸುವ ಜಾಡಮಾಲಿ ಕೆಲಸವನ್ನು ಮಾಡುತ್ತದೆ. ಹಸು, ಕಾಡೆಮ್ಮೆ, ಆಡು, ಕಡವೆ, ಕರಡಿಯಂಥ ಪ್ರಾಣಿಗಳು ಸತ್ತಾಗ -ಅಲ್ಲಿಗೆ ಬಂದು ಸತ್ತಪ್ರಾಣಿಗಳ ಮಾಂಸವನ್ನು ತಿನ್ನುತ್ತದೆ.
Related Articles
Advertisement
ಪಿ. ವಿ. ಭಟ್ ಮೂರೂರು