Advertisement

ನಪುಂಸಕ ಎಂದರೆ ನಿಂದನೆ: ಹೈಕೋರ್ಟ್‌

08:41 AM Nov 12, 2018 | Harsha Rao |

ಮುಂಬಯಿ: ವ್ಯಕ್ತಿಯೊಬ್ಬನನ್ನು ನಪುಂಸಕ ಎಂದರೆ ಅದು ಆ ವ್ಯಕ್ತಿಗೆ ಅವಮಾನ ಮಾಡಿದಂತೆ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಕೇಸ್‌ ದಾಖಲಿಸಿಕೊಳ್ಳಲು ನಿರಾಕರಿಸಿದೆ. ಇಂತಹ ಪ್ರಕರಣವು ಮೇಲ್ನೋಟಕ್ಕೆ ಮಾನಹಾನಿಕರವಾಗಿರುತ್ತದೆ. ಪತ್ನಿ ತನ್ನನ್ನು ನಪುಂಸಕ ಎಂದು ಕರೆದಿದ್ದಾರೆ ಎಂಬುದಾಗಿ ಆಂಧ್ರಪ್ರದೇಶದ ರಾಜಮುಂಡ್ರಿ ಮೂಲದ ವ್ಯಕ್ತಿ ಹೈಕೋರ್ಟ್‌ ಮೊರೆ ಹೋಗಿದ್ದರು.

Advertisement

ತನ್ನ ಪತಿ ನಪುಂಸಕನಾಗಿದ್ದು, ಐವಿಎಫ್ ವಿಧಾನದ ಮೂಲಕ ನಾನು ಮಗು ಪಡೆದಿದ್ದೇನೆ. ಹೀಗಾಗಿ ವಿಚ್ಛೇದನ ನೀಡಬೇಕು ಎಂದು ವ್ಯಕ್ತಿಯ ಪತ್ನಿ ಕೋರ್ಟ್‌ ಮೊರೆ ಹೋಗಿದ್ದಳು. ಇದನ್ನು ವಿರೋಧಿಸಿದ ಪತಿ ನಪುಂಸಕ ಎಂದು ಕರೆದಿದ್ದಕ್ಕೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್‌, ನಪುಂಸಕ ಎಂದು ಕರೆಯುವುದು ವ್ಯಕ್ತಿಯ ಪುರುಷತ್ವವನ್ನು ಅವಹೇಳನ ಮಾಡಿದಂತೆ. ಇದು ಮಾನಸಿಕ ಆಘಾತ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next