Advertisement
ಅಮೆರಿಕದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದ್ವೇಷದ ಪ್ರಕರಣಗಳು ಮುಂದುವರಿದಿರುವ ಬೆನ್ನಲ್ಲೇ ವಿದೇಶಾಂಗ ಇಲಾಖೆಗೆ ಧಾವಿಸಿದ ಭಾರತೀಯ ರಾಯಭಾರಿಯು, ಇತ್ತೀಚೆಗಿನ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅಮೆರಿಕದ ಸಚಿವಾಲಯ, “ನಮ್ಮ ಸರ್ಕಾರದ ಪರವಾಗಿ ನಾವು ಸಂತ್ರಸ್ತರಾದ ಎಲ್ಲ ಭಾರತೀಯರಿಗೆ ಸಾಂತ್ವನ ಹೇಳಬಯಸುತ್ತೇವೆ ಮತ್ತು ನಿಮಗೆ ನ್ಯಾಯ ಒದಗಿಸಿಕೊಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ,’ ಎಂದಿದೆ.
Related Articles
Advertisement
ದ್ವೇಷದ ವಿಡಿಯೋಅಮೆರಿಕದ ಓಹಿಯೋದ ಕೊಲಂಬಸ್ ನಗರದಲ್ಲಿ ಭಾರತೀಯರು ಆಡುತ್ತಿರುವ, ಪಾರ್ಕ್‌ನಲ್ಲಿ ಸುತ್ತಾಡುತ್ತಿರುವ ಫೋಟೋಗಳು ಹಾಗೂ ವಿಡಿಯೋಗಳನ್ನು ವಲಸಿಗರ ವಿರೋಧಿ ವೆಬ್‌ಸೈಟ್‌ನಲ್ಲಿ ವ್ಯಕ್ತಿಯೊಬ್ಬ ಅಪ್‌ಲೋಡ್ ಮಾಡಿದ್ದಾನೆ. ಜತೆಗೆ, ಭಾರತೀಯರು ಅಮೆರಿಕನ್ನರ ಉದ್ಯೋಗಗಳನ್ನು ಕಿತ್ತುಕೊಂಡು, ಆರಾಮವಾಗಿದ್ದಾರೆ. ಓಹಿಯೋದ ಈ ನಗರದಲ್ಲಿ ಭಾರತೀಯರೇ ತುಂಬಿದ್ದಾರೆ. ಅಮೆರಿಕನ್ನರನ್ನು ಇಲ್ಲಿಂದ ಓಡಿಸಲಾಗಿದೆ ಎಂದು “ಸೇವ್‌ಅಮೆರಿಕನ್ ಐಟಿ ಜಾಬ್ಸ್.ಕಾಮ್’ನಲ್ಲಿ ಹಾಕಲಾಗಿದೆ. ಮಾ.6ರಂದು ಅಪ್‌ಲೋಡ್ ಆದ ಈ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ 41 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.