ಬೆಂಗಳೂರು: ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಪ್ರತಿಲೀಟರ್‌ಗೆ 100 ರೂ. ದಾಟಿದ್ದು ಪರ್ಯಾಯಇಂಧನಕ್ಕಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ.ಅದಕ್ಕೆ ಪೂರಕ ಎನ್ನುವಂತೆ ಅಕ್ಕಿ ಹಾಗೂ ಮೆಕ್ಕೆ ಜೋಳದಿಂದಎಥೆನಾಲ್ ಉತ್ಪಾದನೆ ಯಾಗುತ್ತಿದ್ದು, ಇದರಿಂದ ರೈತರಿಗೆಮುಂದಿನ ದಿನಗಳಲ್ಲಿ ಭತ್ತ ಮತ್ತುಗೋವಿನ ಜೋಳಕ್ಕೆ ಬಂಪರ್‌ಬೆಲೆ ದೊರೆಯಲಿದೆ.
ಸುಮಾರು120ಕೋಟಿ ವೆಚ್ಚದ100 ಕೆಎಲ್‌ಎಥೆನಾಲ್ ಉತ್ಪಾದನಾ ಘಟಕವನ್ನು ಡಿಸಿಎಂ ಲಕ್ಷ ¾ಣ ಸವದಿಯವರು ಖಾಸಗಿಯಾಗಿಸುಮಾರು 40 ಎಕರೆ ಪ್ರದೇಶದಲ್ಲಿ ತಮ್ಮ ತವರು ಕàತ ೆÒ Åಅಥಣಿಯಲ್ಲಿ ಪ್ರಾರಂಭಿಸಲು ಕಾರ್ಯಾರಂಭ ಮಾಡಿದ್ದು,ಈಗಾಗಲೇ ಯೋಜನೆ ಸಿವಿಲ್ ಕಾಮಗಾರಿ ಆರಂಭವಾಗಿದ್ದು 2022ರ ಜನವರಿಯಲ್ಲಿ ಅಧಿಕೃತವಾಗಿ ಚಾಲನೆದೊರೆಯಲಿದೆ.ಈ ಎಥೆನಾಲ್ ಘಟಕಕ್ಕೆ ಪ್ರತಿ ದಿನ ಸುಮಾರು 250ಟನ್ ಅಕ್ಕಿ ಅಥವಾ ಗೋವಿನಜೋಳ ಅಗತ್ಯವಿದೆ. ಹೀಗಾಗಿಎಥೆನಾಲ್ ಉತ್ಪಾದನೆಗೆ ಸಾವಿರಾರು ಟನ್ ಅಕ್ಕಿ ಮತ್ತುಗೋವಿನಜೋಳದ ಅಗತ್ಯ ಇರುವುದರಿಂದ ಉತ್ತರಕರ್ನಾಟಕ ಭಾಗದಲ್ಲಿ ಈ ಬೆಳೆಗಳಿಗೆ ಉತ್ತಮ ಸ್ಪರ್ಧಾತ್ಮಕಬೆಲೆ ದೊರೆಯಲು ಅನುಕೂಲವಾಗುವ ಸಾಧ್ಯತೆ ಇದೆ.
1ಕ್ವಿಂಟಲ್ ಅಕ್ಕಿಯಿಂದ ಸುಮಾರು 400 ಕಿಲೊ ಎಥೆನಾಲ್‌ಉತ್ಪಾದನೆಯಾಗುತ್ತದೆ. ಒಂದು ಮೆಟ್ರಿಕ್ ಟನ್ ಗೋವಿನಗೋಳದಿಂದ 280 ಲೀಟರ್ ಎಥೆನಾಲ್ ಉತ್ಪಾದನೆಯಾಗಲಿದೆ. ಪ್ರತಿ ಲೀಟರ್ ಎಥೆನಾಲ್‌ಗೆ ಕನಿಷ್ಠ 56 ರೂ.ಬೆಲೆ ದೊರೆಯಲಿದೆ. ಅಕ್ಕಿ ಮತ್ತು ಗೋವಿನಜೋಳದಿಂದಎಥೆನಾಲ್ ಉತ್ಪಾದನೆಯ ಜೊತೆಗೆ ಜಾನುವಾರುಗಳಿಗೆಹಿಂಡಿ (ಕ್ಯಾಟಲ್ ಫೀಡ್) ದೊರೆಯುತ್ತದೆ.
ಅಲ್ಲದೇಪಾನೀಯಗಳಲ್ಲಿ ಬಳಕೆಯಾಗುವ ಗ್ಯಾಸ್ ಉತ್ಪಾದನೆಯೂ ಆಗುವುದರಿಂದ ಆದಾಯ ಇನ್ನಷ್ಟು ಹೆಚ್ಚಾಗಲಿದೆ.ಕೇಂದ್ರದ ಪ್ರೋತ್ಸಾಹ: ಕೇಂದ್ರ ಸರ್ಕಾರ ಪೆಟ್ರೋಲ್‌ಹಾಗೂ ಡೀಸೆಲ್ ಮೇಲಿನ ಹೊರೆ ಕಡಿಮೆ ಮಾಡಲುಪರ್ಯಾಯ ಇಂಧನ ಉತ್ಪಾದನೆಗೆ ಹೆಚ್ಚಿನ ಆದ್ಯತೆನೀಡುತ್ತಿದ್ದು, ಪ್ರಮುಖವಾಗಿ ಕಬ್ಬಿನಿಂದ ಸಕ್ಕರೆ ಬದಲುಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆ ಮಾಡಲುಪ್ರೋತ್ಸಾಹ ನೀಡುತ್ತಿದೆ.
ಅಲ್ಲದೇಅದಕ್ಕಾಗಿ ಕೇಂದ್ರ ಸರ್ಕಾರಎಥೆನಾಲ್ ಉತ್ಪಾದನೆಗೆ ಸಾಲದ ಮೇಲಿನ ಬಡ್ಡಿಯನ್ನೂಭರಿಸುತ್ತಿದೆ. ಎಥೆನಾಲ್ ಉತ್ಪಾದನೆಗೆ ಸಾಲ ಪಡೆಯುವಕಂಪನಿಗಳಿಗೆ 5 ವರ್ಷದ ವರೆಗೆ ಶೇ 6 ರಷ್ಟು ಬಡ್ಡಿಯನ್ನುಕೇಂದ್ರ ಸರ್ಕಾರವೇಭರಿಸುತ್ತಿದೆ.ಈಮೂಲಕಪೆಟ್ರೋಲ್,ಡಿಸೇಲ್ ಮೇಲಿನ ಅವಲಂಬನೆ ಕಡಿಮೆ ಮಾಡುವುದರಜೊತೆಗೆ ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ದೊರಕಿಸಿಕೊಡಲುಈ ಯೋಜನೆ ಮೂಲಕ ಸಹಕಾರಿಯಾಗಿದೆ.2025 ರ ಹೊತ್ತಿಗೆ ದೇಶದಲ್ಲಿ ಪೆಟ್ರೋಲ್ ಮತ್ತುಡಿಸೇಲ್‌ನಲ್ಲಿ ಶೇ 20 ರಷ್ಟು ಎಥೆನಾಲ್ ಬಳಕೆಯನ್ನುಕಡ್ಡಾಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಅದಕ್ಕಾಗಿ ಅಕ್ಕಿ ಹಾಗೂ ಗೋವಿನ ಜೋಳದಿಂದಲೂಎಥೆನಾಲ್ ಉತ್ಪಾದನೆ ಗೂ ಪ್ರೋತ್ಸಾಹ ನೀಡುತ್ತಿದೆ.
ಶಂಕರ ಪಾಗೋಜಿ