Advertisement
ಒಂದು ಪ್ರದೇಶದ ಸಂರಕ್ಷಣೆ ಜತೆಗೆ ಸ್ಥಳೀಯ ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರುವುದು ಕೂಡ ಮುಖ್ಯ. ಇದಕ್ಕಾಗಿ ಸ್ಥಳೀಯರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಾದರಿಯಲ್ಲಿ “ಪಶ್ಚಿಮಘಟ್ಟ ಪ್ರದೇಶಾಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸಬೇಕು. ಅಲ್ಲದೆ, ಕಲಂ 371 (ಜೆ) ಅಡಿ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು.
Related Articles
Advertisement
ಪರಿಸರ ಪ್ರವಾಸೋದ್ಯಮಕ್ಕೆ ವಿಶೇಷ ನೀತಿ ರೂಪಿಸಬೇಕು. ಅದರಡಿ ವಾಹನ ಸಂಚಾರವನ್ನು ನಿಯಂತ್ರಿಸಲು ತನಿಖಾಠಾಣೆ ಸ್ಥಾಪಿಸಿ, ಆಗಮನ-ನಿರ್ಗಮನಕ್ಕೆ ಸೂಕ್ತ ಸಮಯ ನಿಗದಿಪಡಿಸಬೇಕು. ನಿಗದಿತ ಸಮಯ ಮೀರಿ ಬರುವ ವಾಹನಗಳನ್ನು ತಡೆದು, ತಿರುಪತಿ ಮಾದರಿಯಲ್ಲಿ ದಂಡ ವಿಧಿಸುವ ವ್ಯವಸ್ಥೆ ಜಾರಿಗೊಳಿಸಬೇಕು.
ಚಿಣ್ಣರ ದರ್ಶನಕ್ಕೆ ಪ್ರೋತ್ಸಾಹ ನೀಡಬೇಕು. ಕೋರ್ ಏರಿಯಾದಲ್ಲಿ ವಾಹನಗಳನ್ನು ಬಿಡಬಾರದು. ಜತೆಗೆ, ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಜೆಸಿಬಿ, ಹಿಟ್ಯಾಚಿ, ಬೋರ್‌ವೆಲ್ ಡ್ರಿಲ್ಲರ್‌ಗಳಂತಹ ಬೃಹತ್ ಯಂತ್ರೋಪಕರಣಗಳಿಗೆ ಮತ್ತು ಅರಣ್ಯ ಇಲಾಖೆಯ ಎಲ್ಲ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು.
ಆಯಾ ಕಾರ್ಯವ್ಯಾಪ್ತಿಯ ಅರಣ್ಯಾಧಿಕಾರಿಗಳ ನಿರಕ್ಷೇಪಣಾ ಪತ್ರ ಪಡೆದು, ಕಾಮಗಾರಿಗಳನ್ನು ನಿರ್ಮಿಸಲು ಕಡ್ಡಾಯಗೊಳಿಸುವ ನಿಯಮ ರೂಪಿಸಬೇಕು. ಪಶ್ಚಿಮಘಟ್ಟಗಳಲ್ಲಿ ಕಾಮಗಾರಿ ವೇಳೆ ನಡೆಯುವ ಮರಗಳ ಕಡಿತಲೆಯ ವಿಡಿಯೋ ಚಿತ್ರೀಕರಣ ಕಡ್ಡಾಯಗೊಳಿಸಬೇಕು.
ಗುತ್ತಿಗೆದಾರರು ಗಮನಕ್ಕೆ ತರದೆ, ಮರಗಳ ಮಾರಣಹೋಮ ಮಾಡಿದ್ದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಟಿಂಬರ್, ರೆಸಾರ್ಟ್, ಮರಳು, ಕ್ರಷರ್ ಮಾಫಿಯಾಗಳನ್ನು ಹತ್ತಿಕ್ಕುವ ಅವಶ್ಯಕತೆ ಇದೆ. ಈ ಅಕ್ರಮಗಳ ಮೇಲೆ ವಿಶೇಷ ನಿಗಾ ಇಡಬೇಕಿದೆ ಎಂದು ಕಾರ್ಯಪಡೆ ಹೇಳಿದೆ.
ವರದಿ ಸ್ವೀಕರಿಸಿ ಮಾತನಾಡಿದ ಅರಣ್ಯ ಸಚಿವ ಸತೀಶ ಜಾರಕಿಹೊಳಿ, “ಉತ್ತಮ ವರದಿಯನ್ನು ಕಾರ್ಯಪಡೆ ಸಲ್ಲಿಸಿದೆ. ಇದನ್ನು ಪರಿಶೀಲಿಸಿ, ಅರಣ್ಯ ರಕ್ಷಣೆಗೆ ಪೂರಕವಾಗಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದರು.
ಈ ವೇಳೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್‌ಸಿಂಗ್ ಮತ್ತಿತರರು ಇದ್ದರು.
ಮಹಶೀರ್‌ಗೆ “ರಾಜ್ಯ ಮೀನು’ ಗರಿ?: ಅಳಿವಿನಂಚಿನಲ್ಲಿರುವ ಮಹಶೀರ್ ಮೀನನ್ನು “ರಾಜ್ಯ ಮೀನು’ ಎಂದು ಘೋಷಿಸುವಂತೆ ಪಶ್ಚಿಮಘಟ್ಟ ಕಾರ್ಯಪಡೆ ಶಿಫಾರಸು ಮಾಡಿದೆ. ಕಾವೇರಿ ನದಿ ಪಾತ್ರದಲ್ಲಿ ಕಂಡು ಬರುವ “ಮಹಶೀರ್ ಮೀನು’ ರಾಜ್ಯದ್ದಾಗಿದೆ. ಆದರೆ, ಇತ್ತೀಚೆಗೆ ಇದು ಅಳಿವಿನಂಚಿನಲ್ಲಿರುವುದು ಕಂಡು ಬಂದಿದೆ. ಅದರ ರಕ್ಷಣೆಗಾಗಿ “ರಾಜ್ಯ ಮೀನು’ ಎಂದು ಘೋಷಿಸುವಂತೆ ಕಾರ್ಯಪಡೆ ಸಲಹೆ ಮಾಡಿದೆ.
ಅದೇ ರೀತಿ, ರಾಜ್ಯದಲ್ಲಿ ಯಥೇತ್ಛವಾಗಿರುವ ಜೇನು ನೊಣಗಳನ್ನು “ರಾಜ್ಯ ಕೀಟ’ ಎಂದು ಘೋಷಿಸಿ, ಜೇನು ಸಾಕಾಣಿಕೆಯನ್ನು ಪ್ರೋತ್ಸಾಹಿಸಬೇಕು. ಅಲ್ಲದೆ, ಕಡಲತೀರಗಳಲ್ಲಿ ಕಾಂಡ್ಲಾ ಅವಳಿಗಳ ನೆಡುತೋಪು ನಿರ್ಮಿಸಿ, ಸ್ವಾಭಾವಿಕವಾಗಿ ಕಂಡು ಬರುವ ಕಡಲಾಮೆ, ನವಿಲು ಮುಂತಾದ ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನಗಳನ್ನಾಗಿ ಪರಿವರ್ತಿಸಬೇಕು ಎಂದೂ ಹೇಳಿದೆ.