Advertisement

ವೃದ್ಧರಿಗೆ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆ: ಸುಧಾಕರ್‌

11:15 PM Feb 29, 2020 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಪ್ರತ್ಯೇಕ ಆಸ್ಪತ್ರೆ ಇರುವ ರೀತಿಯಲ್ಲಿ ವಯೋವೃದ್ಧ ನಾಗರಿಕರ ಆರೈಕೆಗಾಗಿ ಪ್ರತ್ಯೇಕ ಆಸ್ಪತ್ರೆಗಳನ್ನು ಈ ವರ್ಷದಿಂದ ಪ್ರಾರಂಭಿಸಲಾಗುವುದು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಯೋವೃದ್ಧರಿಗೆ ಗುಣಮಟ್ಟದ ಚಿಕಿತ್ಸೆ ತ್ವರಿತಗತಿಯಲ್ಲಿ ಸಿಗುವ ಒತ್ತಾಸೆ ಇಟ್ಟುಕೊಂಡು ಆಸ್ಪತ್ರೆಗಳನ್ನು ತೆರೆಯಲಾಗುವುದು. ಈ ಬಗ್ಗೆ ಬಜೆಟ್‌ನಲ್ಲಿ ಸಿಹಿಸುದ್ದಿ ಸಿಗಲಿದೆ. ಆದರೆ, ಎಲ್ಲವೂ ಬಜೆಟ್‌ನಲ್ಲಿಯೇ ಪ್ರಕಟ ಆಗಬೇಕೆಂದಿಲ್ಲ. ಆ ಬಳಿಕವೂ ಅನುದಾನ ಪಡೆದು ಜನಪರವಾದ ಯೋಜನೆಯನ್ನು ರೂಪಿಸಿ, ಅನುಷ್ಠಾನಕ್ಕೆ ತರಲು ಇಲಾಖೆ ಸಿದ್ಧವಾಗಿದೆ ಎಂದರು.

ನಮ್ಮ ಇಲಾಖೆಯಲ್ಲಿ ಸುಮಾರು 30 ರಿಂದ 40ರಷ್ಟು ಹುದ್ದೆಗಳು ಖಾಲಿ ಇವೆ. ಎಲ್ಲವನ್ನೂ ಹಂತ, ಹಂತವಾಗಿ ತುಂಬಲಾಗುವುದು. ವೈದ್ಯ ಕೀಯ ಶಿಕ್ಷಣದಲ್ಲಿ ಯೋಗ ವಿಜ್ಞಾನವನ್ನು ಅಳವಡಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ವಿಶೇಷವಾಗಿ ನುರಿತ ವೈದ್ಯರನ್ನು ಹೊರ ತರಲು ಅಂತಾರಾಷ್ಟ್ರೀಯ ಗುಣಮಟ್ಟದ ಪಠ್ಯಗಳನ್ನು ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳಲ್ಲಿ ಅಳವಡಿಸ ಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next