ನವದೆಹಲಿ: ದೇಶದ ಪ್ರಮುಖ 7 ರಾಜ್ಯಗಳಲ್ಲಿ ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ತಮಿಳುನಾಡು, ತೆಲಂಗಾಣ, ಕರ್ಣಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ 5 ಎಫ್ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಜವಳಿ ಪಾರ್ಕ್‌ಗಳು ದೇಶದ ಜವಳಿ ವಲಯವನ್ನೇ ಉತ್ತೇಜಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ʻಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್‌ಗಳು ಜವಳಿ ಕ್ಷೇತ್ರಕ್ಕೆ ಉತ್ತಮ ಮೂಲಸೌಕರ್ಯವನ್ನು ಒದಗಿಸಲಿದೆ. ಇದು ಕೋಟ್ಯಾಂತರ ರೂ. ವೆಚ್ಚದ ಹೂಡಿಕೆಗಳನ್ನು ಆಕರ್ಷಿಸುವುದರ ಜೊತೆಗೆ ಲಕ್ಷಾಂತರ ಉದ್ಯೋಗವನ್ನೂ ಸೃಷ್ಟಿಸಲಿದೆ. ಇದು ʻಮೇಕ್ ಇನ್ ಇಂಡಿಯಾʼ ಮತ್ತು ʻಮೇಕ್ ಫಾರ್ ದಿ ವರ್ಲ್ಡ್ʼಗೆ ಉತ್ತಮ ಉದಾಹರಣೆಯಾಗಿದೆʼ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Related Articles
ಇದನ್ನೂ ಓದಿ: ಯಾಕೆ ಕ್ಷಮೆಯಾಚಿಸಬೇಕು? ; ರಾಹುಲ್ ಗಾಂಧಿ ತಪ್ಪು ಮಾತನಾಡಿಲ್ಲ ಎಂದ ತರೂರ್