Advertisement

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

01:48 AM May 18, 2022 | Team Udayavani |

ಬೆಂಗಳೂರು: ನಗರ ನೂತನ ಪೊಲೀಸ್‌ ಆಯುಕ್ತರಾಗಿ ಸಿ.ಎಚ್‌. ಪ್ರತಾಪ್‌ ರೆಡ್ಡಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

Advertisement

ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಆಯುಕ್ತ ಕಮಲ್‌ ಪಂತ್‌, ನೂತನ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಅನಂತರ ಮಾತನಾಡಿದ ಅವರು, ಪೊಲೀಸ್‌ ಅಧಿಕಾರಿ,ಸಿಬಂದಿ ಅಕ್ರಮ ಚಟುವಟಿಕೆ ನಡೆಸುವ ವ್ಯಕ್ತಿಗಳ ಜತೆ ಶಾಮೀಲಾಗಿರುವುದು ಕಂಡು ಬಂದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತಗತಿಯಲ್ಲಿ ತನಿಖೆ ನಡೆಸಿ  ಬಂಧಿತರನ್ನು ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗೆ ಹಾಜರುಪಡಿಸಲು ಕ್ರಮಕೈಗೊಳ್ಳುತ್ತೇವೆ  ಎಂದು ಹೇಳಿದರು.

ಮಾನಿಟರಿಂಗ್‌ ಸೆಲ್‌
ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ನಿರ್ವಹಣೆ ಹಾಗೂ ತ್ವರಿತ ಇತ್ಯರ್ಥಕ್ಕೆ ಕಾನೂನು ಮತ್ತು ವ್ಯವಸ್ಥೆಯ ಎಂಟು ವಿಭಾಗ ಮತ್ತು ಸಿಸಿಬಿ ವ್ಯಾಪ್ತಿಯಲ್ಲಿ ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ ಮಾಡಲಾಗುತ್ತದೆ. ಈ ತಂಡ ಗಂಭೀರ ಪ್ರಕರಣಗಳ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಕೆ, ಸಾಕ್ಷಿ ಸಂಗ್ರಹ, ಕೋರ್ಟ್‌ ವಿಚಾರಣೆ ಹಾಗೂ ಆರೋಪಿಗಳಿಗೆ ಶಿಕ್ಷೆ ಆಗುವವರೆಗೂ ನಿಗಾ ವಹಿಸುತ್ತಾರೆ ಎಂದರು.

ಟೋಯಿಂಗ್‌ ಮತ್ತೆ ಜಾರಿಗೆ?
ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಿಂದ ಸಂಚಾರ ದಟ್ಟಣೆ ಉಂಟಾಗಿದೆ. ಹೀಗಾಗಿ ಸರಕಾರದ ಜತೆ ಮಾತನಾಡಿ ಮತ್ತೆ ಟೋಯಿಂಗ್‌ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತಿಸಲಾಗುತ್ತಿದೆ. ಸಂಚಾರ ನಿಯಂತ್ರಣಕ್ಕೆ ಬಹಳಷ್ಟು ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next