Advertisement
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಭಾನುವಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಮಾಡಲಾಗಿರುವ ಕೋವಿಡ್ ಬೆಡ್ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸಿದ ವೇಳೆ ಈ ವಿಷಯ ತಿಳಿಸಿದರು.
ವೈದ್ಯರಿಗೆ ವೈದ್ಯಕೀಯೇತರ ಕೆಲಸವಿಲ್ಲ:
ಇನ್ನು ಮುಂದೆ ವೈದ್ಯರು ಮತ್ತು ನರ್ಸುಗಳಿಗೆ ಕೋವಿಡ್ ಕೇರ್ ಗಳಲ್ಲಿ ವೈದ್ಯಕೀಯೇತರ ಕೆಲಸಗಳು ಇರುವುದಿಲ್ಲ. ಅದಕ್ಕೆ ಪ್ರತ್ಯೇಕ ವ್ಯವಸ್ಥಾಪಕರನ್ನು ನಿಯೋಜಿಸಲಾಗುವುದು. ವೈದ್ಯರು, ನರ್ಸುಗಳು ಸಂಪೂರ್ಣವಾಗಿ ತಮ್ಮ ಗಮನವನ್ನು ಸೋಂಕಿತರ ಚಿಕಿತ್ಸೆ, ಆರೈಕೆ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.
Related Articles
Advertisement
ಇದೇ ವೇಳೆ, ತಮಗೆ ಮತ್ತು ರೋಗಿಗಳಿಗೆ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟ ಸರಿ ಇಲ್ಲ ಎಂಬ ವಿಷಯವನ್ನು ವೈದ್ಯರು ಉಪ ಮುಖ್ಯಮಂತ್ರಿ ಗಮನಕ್ಕೆ ತಂದರು. ಮರುಕ್ಷಣವೇ, ಆಹಾರ ಪೂರೈಕೆದಾರರಿಗೆ ಫೋನ್ ಕರೆ ಮಾಡಿದ ಡಿಸಿಎಂ, ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ತಾಕೀತು ಮಾಡಿದರಲ್ಲದೆ, ಮತ್ತೆ ದೂರು ಬಂದರೆ ನಿಮ್ಮ ಗುತ್ತಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಔಷಧ ಪೂರೈಕೆಗೆ ಆದೇಶ:ಕೋವಿಡ್ ಕೇಂದ್ರಕ್ಕೆ ಔಷಧಿಗಳ ಕೊರತೆ ಇದೆ ಎಂಬ ಅಂಶವನ್ನು ವೈದ್ಯರು ಇದೇ ವೇಳೆ ಡಿಸಿಎಂ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೂಡಲೇ ತಮಗೆ ಅಗತ್ಯವಿರುವ ಎಲ್ಲ ಔಷಧಗಳನ್ನು ಪೂರೈಕೆ ಮಾಡಲಾಗುವುದು ಎಂದರಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಈ ಬಗ್ಗೆ ಆದೇಶ ನೀಡಿದರು. ನೈಸ್ ರಸ್ತೆ ಬಳಿಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಬಿಬಿಎಂಪಿ ಜಂಟಿ ಆಯುಕ್ತ ನರಸಿಂಹ ಮೂರ್ತಿ ಸೇರಿದಂತೆ ಹಲವಾರು ಅಧಿಕಾರಿಗಳು ಡಿಸಿಎಂ ಜತೆಯಲ್ಲಿದ್ದರು.