Advertisement

ಚನ್ನಪಟ್ಟಣದಲ್ಲಿಯೂ ಆಟಿಕೆ ಕ್ಲಸ್ಟರ್‌ ಸ್ಥಾಪಿಸಿ

02:16 PM Sep 13, 2020 | Suhan S |

ರಾಮನಗರ: ಕರಕುಶಲಕರ್ಮಿಗಳ ತವರೂರು, ಬೊಂಬೆ ನಾಡು ಚನ್ನಪಟ್ಟಣದಲ್ಲಿಯೂ ಆಟಿಕೆ ಕ್ಲಸ್ಟರ್‌ ಸ್ಥಾಪಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಸರ್ಕಾರವನ್ನು ಆಗ್ರಹಿಸಿದರು.

Advertisement

ಇಲ್ಲಿನ ಕನಕಪುರ ರಸ್ತೆಯ ಶಾಂತಿನಿಕೇತನ ರೆಸಿಡೆನ್ಸಿಯಲ್‌ ಪಿಯು ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್‌ಕಿ ಬಾತ್‌ನಲ್ಲಿ ಚನ್ನಪಟ್ಟಣದ ಆಟಿಕೆಗಳಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಚನ್ನಪಟ್ಟಣದ ಬೊಂಬೆ ಉದ್ಯಮಕ್ಕೆ ಹೆಗ್ಗಳಿಕೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ಮೋದಿಯವರಿಗೆ ನೀಡಿದ ಶ್ರೀರಾಮನ ವಿಗ್ರಹವೂ ಚನ್ನಪಟ್ಟಣದ್ದು ಎಂದರು.

ಇದೀಗ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಕೊಪ್ಪಳದಲ್ಲಿ ವಿಶ್ವ ದರ್ಜೆಯ ಸೌಕರ್ಯವುಳ್ಳ ಆಟಿಕೆ ಕ್ಲಸ್ಟರ್‌ ಸ್ಥಾಪಿಸಲು ಉದ್ದೇಶಿಸಿದ್ದಾರೆ. ಬೊಂಬೆ ನಾಡಿನಲ್ಲಿ 15 ಸಾವಿರ ಕರಕುಶಲ ಕರ್ಮಿಗಳಿದ್ದಾರೆ. ಇಲ್ಲೂ ಆಟಿಕೆಗಳ ಕ್ಲಸ್ಟರ್‌ ಸ್ಥಾಪಿಸಲಿ ಎಂಬುದಷ್ಟೇ ಹೋರಾಟದ ಉದ್ದೇಶ ಎಂದರು.

ಪ್ರಧಾನಿ ಭೇಟಿ: ಇಲ್ಲಿನ ಡೀಸಿ ಕಚೇರಿ ಎದುರು ಗೊಂಬೆಗಳ ಪ್ರಾತ್ಯಕ್ಷಿಕೆ ಮಾಡಿ ಕರ ಕುಶಲ ಕಾರ್ಮಿಕರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಮುಖ್ಯ ಮಂತ್ರಿಗಳು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಬೊಂಬೆ ಉದ್ಯಮದ ಸಮಸ್ಯೆ ವಿವರಿಸಲಾಗುವುದು ಎಂದರು.

ಕರಕುಶಲ ಕೈಗಾರಿಕೆ ನಿಗಮದ ಅಧಿಕಾರಿ ದೇವರಮನಿ ಮಾತನಾಡಿ, ಐಟಿ ಬಿಟಿ ಕಂಪನಿಗಳಲ್ಲಿ ಗ್ಲಾಸ್‌ ಮುಂತಾದ ವಸ್ತುಗಳ ಬಳಕೆಯಾಗುತ್ತಿದೆ. ಮರದಲ್ಲಿ ಮಾಡಿರುವ ದಿನಬಳಕೆ ವಸ್ತು ಉಪಯೋಗಿಸುವುದರಿಂದ ಬೊಂಬೆ ಉದ್ಯಮವನ್ನು ಜೀವಂತವಾಗಿಸ ಬಹುದು ಎಂದರು.

Advertisement

ತಾಲೂಕು ಹ್ಯಾಂಡಿಕ್ರಾಫ್ಟ್ ನ ಅಧ್ಯಕ್ಷ ಎನ್‌.ರಮೇಶ್‌, ರೈತ ಸಂಘದ ಸುಜೀವನ್‌ಕುಮಾರ್‌ ಮಾತನಾಡಿದರು. ಗಂಟಲು ಕ್ಯಾನ್ಸರ್‌ನಿಂದ ಗಂಟಲಿನ ಅನ್ನನಾಳ ತೊಂದರೆಗೆ ಒಳಗಾದವರಿಗೆ ಮರದಲ್ಲಿ ಮಾಡಿರುವ ನಳಿಕೆ ಕಂಡುಹಿಡಿದಿರುವ ಕೌಸರ್‌ ಮತ್ತು ಕುಸುರಿ ಕೆಲಸದಲ್ಲಿ ನೈಪುಣ್ಯತೆ ಹೊಂದಿ ರಾಜ್ಯ ಪ್ರಶಸ್ತಿ ಪಡೆದಿರುವ ಕೆಂಚಯ್ಯ, ಶಾಂತಿನಿಕೇತನ ರೆಸಿಡೆನ್ಸಿಯಲ್‌ನ ಮಾಲೀಕರಾದ ಕುಮಾರ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಜಿಲ್ಲಾಧ್ಯಕ್ಷ ಬೇವೂರುಯೋಗೀಶ್‌ ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿಶ್ರೀಧರ್‌, ಡಾ.ರಾಜ್‌ ಕಲಾ ಬಳಗದ ಎಲೆಕೇರಿ ಮಂಜು ನಾಥ್‌, ಕರವೇ ಹೋರಾಟಗಾರ ಬಾಬ್‌ ಜಾನ್‌, ದಸಂಸ ವೆಂಕಟೇಶ್‌ (ಶೇಠು) ಸ್ವರಾಜ್‌ ಸಂಘಟನೆ ಸುಕನ್ಯಾ, ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ವಿಧಾನಸೌಧದ ರಮೇಶ್‌, ಶ್ರೀನಿವಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next