Advertisement

ಸೈನಿಕ ತರಬೇತಿಗೆ ಶೀಘ್ರ ಕೇಂದ್ರ ಸ್ಥಾಪನೆ

04:05 PM Aug 31, 2020 | Suhan S |

ಯಮಕನಮರಡಿ: ಪೊಲೀಸ್‌, ಸೇನೆ ಸೇರುವ ಇಚ್ಛೆಯುಳ್ಳ ಜಿಲ್ಲೆಯ ಹಾಗೂ ಮತಕ್ಷೇತ್ರದ ಯುವಕರಿಗೆ ಉಚಿತ ತರಬೇತಿ ನೀಡಲು ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ವ್ಯಾಪ್ತಿಯಲ್ಲಿ 10 ಎಕರೆ ಜಮೀನಿನಲ್ಲಿ ಒಂದು ತರಬೇತಿ ಕೇಂದ್ರವನ್ನು ತೆರೆದು ಮಾಜಿ ಸೈನಿಕರಿಂದ ತರಬೇತಿ ನೀಡಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಅವರು ರವಿವಾರ ಹುಕ್ಕೇರಿ ತಾಲೂಕಿನ ಬರಗನಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಶ್ರೀ ಅಕ್ಕಮಹಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಂಘಟನೆಯು ಕೇವಲ ತಮ್ಮ ಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗದೆ ಇತರಿಗೂ ಕೂಡ ಅನುಕೂಲ ನೀಡಲು ಮುಂದೆ ಬರಬೇಕು. ಸರಕಾರಿ ಯೋಜನೆಗಳ ಲಾಭ ಪಡೆದು ಮಾದರಿ ಸಂಘವಾಗಿ ಹೊರಹೊಮ್ಮಬೇಕು. ಮಹಿಳಾ ಸಂಘಕ್ಕೆ 5ಲಕ್ಷ ರೂ.ಗಳಲ್ಲಿ ಹೊಸ ಅಡುಗೆ ಕೊಣೆಯನ್ನು ಮಂಜೂರು ಮಾಡಲಾಗಿದೆ. ಸತೀಶ ಫೌಂಡೇಶನ್‌ ಸಹಯೋಗದಲ್ಲಿ 110ಹಳ್ಳಿಗಳಿಗೆ 10 ಸಾವಿರ ಖುರ್ಚಿ ಹಾಗೂ ಮೈಕ್‌ ಸೆಟ್‌ ನೀಡಲಾಗುವುದು. ಮಳೆಗಾಲದಲ್ಲಿ ಪಾಶ್ಚಾಪೂರ-ಕುಂದರಗಿ ಸೇತುವೆ ಮುಳುಗಡೆ ಆಗುತ್ತಿದ್ದು, ಅದನ್ನು ಎತ್ತರಿಸಲು ಹೆಚ್ಚುವರಿ ಅನುದಾನ ನೀಡಲಾಗಿದೆ. ಅಲ್ಲಿ ಇನ್ನೊಂದು ಹೊಸ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ ಮಾಡಲಾಗುವುದು. ಮತಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಬ್ಯಾರೇಜ್‌, 30ಕ್ಕೂ ಹೆಚ್ಚು ಕೆರೆಗೆ ನೀರು ತುಂಬಿಸುವ ಕಾರ್ಯ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಂದರಗಿಯ ಶ್ರೀ ಅಮರೇಶ್ವರ ದೇವರು, ಚಿಕ್ಕಲದಿನ್ನಿಯ ಅದೃಶ್ಯ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯರು, ತಾಪಂ ಸದಸ್ಯರು, ಸಂಘದ ಸದಸ್ಯರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next