Advertisement
ರಾಷ್ಟ್ರೀಯ ಚಂಡ ಮಾರುತ ಅಪಾಯ ಮುನ್ಸೂ ಚನೆ, ಉಪಶಮನ ಯೋಜನೆ (ಎನ್‌ಸಿಆರ್ ಎಂಪಿ) ಯಡಿ ಅನುಷ್ಠಾನ ಗೊಳ್ಳುವ ಯೋಜನೆಯ 26.92 ಕೋ.ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈಗ ಅನುಷ್ಠಾನದ ಹಂತ ತಲುಪಿದೆ.
ಚಂಡುಮಾರುತ ಸಹಿತ ಪ್ರಕೃತಿ ವಿಕೋಪಗಳು ತಲೆದೋರಿದಾಗ ಜನರಿಗೆ ತುರ್ತು ಆಶ್ರಯ ಕಲ್ಪಿಸಲು ದಕ್ಷಿಣ ಕನ್ನಡದಲ್ಲಿ ಉಳ್ಳಾಲ ಮತ್ತು ಹೊಸಬೆಟ್ಟು ಹಾಗೂ ಉಡುಪಿಯಲ್ಲಿ ತೆಕ್ಕಟ್ಟೆ ಮತ್ತು ಕಾಪುನಲ್ಲಿ ಬಹುಉದ್ದೇಶದ ಸಾವಿರ ಜನರ ಸಾಮರ್ಥ್ಯದ ಆಶ್ರಯ ತಾಣಗಳನ್ನು ನಿರ್ಮಿಸಲಾಗುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಇದರ ಜತೆಗೆ ತ್ವರಿತ ಕಾರ್ಯಾಚರಣೆಗೆ ನೆರವಾಗುವಂತೆ ಈ ಯೋಜನೆಯಡಿ ಕರಾವಳಿ ತೀರದಲ್ಲಿ ಸೇತುವೆ ಮತ್ತು ರಸ್ತೆಗಳನ್ನು ಕೂಡ ನಿರ್ಮಿಸಲಾಗಿದೆ.
Related Articles
ಕರಾವಳಿಯಲ್ಲಿ ಚಂಡಮಾರುತ, ತ್ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆಗಳು ಹವಾಮಾನ ಇಲಾಖೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿ ಗಳಿಂದ ಲಭ್ಯವಾದ ಕೂಡಲೇ ಎಚ್ಚರಿಕೆ ಮತ್ತು ಸಂದೇಶ ವನ್ನು ಈ ಮೆಗಾ ಟವರ್‌ಗಳಿಗೆ ರವಾನಿಸ ಲಾಗುತ್ತದೆ. ಅಪಾಯದ ಮುನ್ನೆಚ್ಚರಿಕೆಯನ್ನು ಸೈರನ್ ಟವರ್ ಮೂಲಕ ಸುಮಾರು 10 ಕಿ.ಮೀ. ಸುತ್ತಳತೆಯ ವರೆಗೆ ನೀಡಲು ಸಾಧ್ಯವಾಗುತ್ತದೆ. ಇದು ಸ್ಥಳೀಯವಾಗಿ ತ್ವರಿತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಮತ್ತು ಪರಿಹಾರ ತಂಡಗಳಿಗೆ ಸೂಕ್ತ ಪರಿಹಾರ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ನೆರವಾಗುತ್ತದೆ.
Advertisement
ಆಯ್ಕೆಯಾಗಿರುವ ತಾಣಗಳುದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ತಲಾ 8 ಹಾಗೂ ಉ.ಕ.ದಲ್ಲಿ 10 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡ
ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು ಬೀಚ್, ಹೊಸ ಬೆಟ್ಟು , ಡಿ.ಸಿ. ಕಚೇರಿ ಬಳಿ. ಉಡುಪಿ
ಪಡುಬಿದ್ರಿ, ಕಾಪು, ಮಲ್ಪೆ, ಕೋಡಿ, ಮಟ್ಟು, ಮರವಂತೆ, ಶಿರೂರು ಬೀಚ್ ಬಳಿ ಮತ್ತು ತೆಕ್ಕಟ್ಟೆ ಪ್ರದೇಶ. ಉತ್ತರ ಕನ್ನಡ
ಮುರುಡೇಶ್ವರ ಬೀಚ್, ಎಕೋ ಬೀಚ್ ಪಾರ್ಕ್, ಓಂ ಮತ್ತು ಕುಡ್ಲೆ ಬೀಚ್ ನಡುವಣ ಪ್ರದೇಶ, ಗೋಕರ್ಣ ಬೀಚ್, ಆರ್.ಟಿ. ಬೀಚ್, ಮಂಕಿ, ಬೇಲೇಕೇರಿ, ಪುಜಾಗೇರಿ ಕಾಲೇಜು ಆವರಣ, ಶಿರಾಲಿ, ಚಿಟ್ಟಕುಳ ಗ್ರಾಮ. ಕರಾ ವಳಿಯಲ್ಲಿ ಸಂಭಾವ್ಯ ಪ್ರಕೃತಿ ವಿಕೋಪ ನಿರ್ವಹಣೆ ಯಲ್ಲಿ ಮುನ್ನೆಚ್ಚ ರಿಕೆ ಟವರ್‌ಗಳನ್ನು ನಿರ್ಮಿಸುವ ಯೋಜನೆ ಈ ಹಿಂದೆ ರೂಪಿತವಾಗಿದೆ. ಸರಕಾರ ದಿಂದ ಅನುಮೋದನೆ ಆಗಿರುವ ಬಗ್ಗೆ ಮಾಹಿತಿ ಇದ್ದು, ಅಧಿಕೃತವಾಗಿ ಜಿಲ್ಲಾಡಳಿತಕ್ಕೆ ಆದೇಶ ಬಂದಿಲ್ಲ. ಇದು ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಡಾ| ಕೆ.ವಿ. ರಾಜೇಂದ್ರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೇಶವ ಕುಂದರ್