Advertisement

ಇಎಸ್‌ಐ ವ್ಯಾಪ್ತಿಗೆ ನಮ್ಮನ್ನೂ ಸೇರಿಸಿ

12:13 AM Mar 03, 2023 | Team Udayavani |

ಬೆಂಗಳೂರು: ರಾಜ್ಯವ್ಯಾಪಿ 6 ಲಕ್ಷಕ್ಕೂ ಅಧಿಕ ಆಟೋ ಮತ್ತು ಟ್ಯಾಕ್ಸಿ ಚಾಲಕರಿದ್ದಾರೆ. ಹಗಲು ರಾತ್ರಿ ಎನ್ನದೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ ಈ ವಲಯ ಹಲವು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

Advertisement

ಚಾಲಕರ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬ ದಶಕದ ಕೂಗು ಹಾಗೆಯೇ ಉಳಿದುಕೊಂಡಿದೆ. ಇಎಸ್‌ಐ ವ್ಯಾಪ್ತಿಗೆ ಆಟೋ- ಟ್ಯಾಕ್ಸಿ ಚಾಲಕರನ್ನು ಸೇರಿಸಬೇಕು ಎಂಬ ಬೇಡಿಕೆ ಇದು ವರೆಗೂ ಈಡೇರಿಕೆಯಾಗಿಲ್ಲ. ಚಾಲಕರ ಸಮೂಹಕ್ಕಾಗಿ ವಿಶೇಷ ಆರೋಗ್ಯ ಸವಲತ್ತುಗಳನ್ನು ರೂಪಿಸ ಬೇಕು ಎಂಬ ಬೇಡಿಕೆ ಕೂಡ ಜಾರಿಯಾಗಿಲ್ಲ.

ಚಾಲಕರ ಭವನ ನಿರ್ಮಾಣಕ್ಕಾಗಿ ಒತ್ತಾಯ ಮಾಡುತ್ತಲೆ ಬರಲಾಗಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ಗ್ಯಾಸ್‌ ಸಬ್ಸಿಡಿ ನೀಡಬೇಕು ಎಂಬ ಕೂಗಿದೆ. ನಗರದೆಲ್ಲಡೆ ಆಟೋ ಮತ್ತು ಟ್ಯಾಕ್ಸಿ ಸ್ಟಾಂಡ್‌ ನಿರ್ಮಾಣ ಮಾಡಬೇಕು ಎಂಬ ಆಗ್ರಹವಿದೆ. ಆದರೆ ಇವೆಲ್ಲವು ಭರವಸೆಗ ಳಾಗಿಯೇ ಉಳಿದು ಹೋಗಿವೆ. ಆ ಹಿನ್ನೆಲೆ ಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಹಿತಕಾಯುವ ಅಂಶಗಳು ಈ ಬಾರಿಯ ಚುನಾವಣ ಪ್ರಣಾಳಿಕೆಯಲ್ಲಿ ಇರಲಿ ಎಂದು ಇಡೀ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಮೂಹ ಒತ್ತಾಯಿಸುತ್ತದೆ.

ಆಟೋ ಮತ್ತು ಟ್ಯಾಕ್ಸಿ ಚಾಲಕರ ಹಿತ ದೃಷ್ಟಿಯಿಂದ ಈ ಕೆಳಕಂಡ ನಮ್ಮ ವಲಯದ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಅಧಿಕಾರಕ್ಕೆ ಬಂದಾಗ ಜಾರಿಗೆ ತರುವಂತೆ ಆಗ್ರಹಿಸುತ್ತೇವೆ.

– ಈಗಾಗಲೇ ಬಹುತೇಕ ಎಲ್ಲ ಜಾತಿಗೂ ಒಂದೊಂದು ನಿಗಮ ಮಂಡಳಿ ಸ್ಥಾಪನೆ ಮಾಡಲಾಗಿದೆ. ಅದೇ ರೀತಿಯಲ್ಲಿ ಚಾಲಕರ ಸಮೂಹದ ಅಭಿವೃದ್ಧಿಗಾಗಿ “ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ’ ಆಗಬೇಕು. ಅದರ ಅಡಿಯಲ್ಲಿ ಹಲವು ಕಾರ್ಯಕ್ರಮ ಜಾರಿಗೊಳಿಸಬೇಕು. ವಾಹನಗಳ ಮೇಲಿನ ಸಾಲ ಸುಲಭ ರೀತಿ ಯಲ್ಲಿ ಆಟೋ-ಟ್ಯಾಕ್ಸಿ ಚಾಲಕರಿಗೆ ದೊರಕುವಂತಾಗಬೇಕು.

Advertisement

– ಚಾಲಕರ ದಿನಾಚರಣೆಯನ್ನು ಘೋಷಣೆ ಮಾಡಬೇಕು. ಜತೆಗೆ ಚಾಲಕರ ದಿನಾಚರಣೆ ಅಂದು ವಿಧಾನ ಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಸರಕಾರ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಬೇಕು. ಸಾರಿಗೆ ಮತ್ತು ಸಂಚಾರಿ ಪೊಲೀಸ್‌ ಇಲಾಖೆಯಿಂದ ಪೂರಕ ಮಾಹಿತಿ ಪಡೆದು ಚಾಲಕ ಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ತೋರಿದ ಡ್ರೈವರ್‌ಗಳನ್ನು ಸಮ್ಮಾ¾ನಿಸಿ, ಗೌರವಿಸುವ ಕೆಲಸ ಸರಕಾರದಿಂದ ಆಗಬೇಕು.

– ಜಾತಿವಾರು ಭವನಗಳನ್ನು ಸರಕಾರ ನಿರ್ಮಾಣ ಮಾಡಿದೆ. ಅದೇ ರೀತಿಯಲ್ಲಿ ಚಾಲಕರ ಭವನ ಕೂಡ ನಿರ್ಮಾಣ ವಾಗಬೇಕು. ಮುಖ್ಯವಾಗಿ ಮೈಸೂರು, ಮಂಗಳೂರು, ಹುಬ್ಬಳಿ, ಬೆಳಗಾವಿ, ಬೆಂಗಳೂರಿ ನಲ್ಲಿ ಚಾಲಕರ ಭವನ ಸ್ಥಾಪಿಸಬೇಕು. ಇದ ರಿಂದಾಗಿ ಚಾಲಕರ ಮಕ್ಕಳ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಅನುಕೂಲವಾಗಲಿದೆ.

– ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮನೆ ನಿರ್ಮಾಣ ಮಾಡುವುದು ಕನಸಿನ ಮಾತು. ಆ ಹಿನ್ನೆಲೆಯಲ್ಲಿ ಚಾಲಕರ ಬಡಾವಣೆ ನಿರ್ಮಾಣ ಮಾಡಿ ಕಡಿಮೆ ದರಗಳಲ್ಲಿ ಚಾಲಕರಿಗೆ ಹಂಚಿಕೆ ಮಾಡುವ ಕೆಲಸ ಆಗಬೇಕು. ಇದಕ್ಕಾಗಿ ಗ್ರೂಪ್‌ ಹೌಸಿಂಗ್‌ ಸ್ಕೀಮ್‌ ಜಾರಿಗೊಳಿಸಬೇಕು.

– ದಿನವಿಡೀ ಬಳಲುವ ಚಾಲಕರ ಆರೋಗ್ಯ ದೃಷ್ಟಿಯಿಂದ ಸರಕಾರ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಇಎಸ್‌ಐ ವ್ಯಾಪ್ತಿಗೆ ಆಟೋ ಮತ್ತು ಟ್ಯಾಕ್ಸಿ ಡ್ರೈವರ್‌ಗಳನ್ನು ಒಳಪಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next